ಇದೆಲ್ಲ ಶ್ರೀ ಅಲ್ಲಮ ಪ್ರಭುಗಳ ಮಹಿಮೆ. ಡಿ.ಕೆ ಶಿವರಾಜ್‌ ನಿರ್ದೇಶನದ ‘ಶ್ರೀ ಅಲ್ಲಮ ಪ್ರಭು’ ಸಿನಿಮಾ ಮುಹೂರ್ತ ಶೂಟಿಂಗ್‌ಗೆ ಹೊರಡಲು ರೆಡಿಯಾಗಿದೆ. ಈ ಸಿನಿಮಾದಲ್ಲಿ ಅಲ್ಲಮನಾಗಿ ಆಧ್ಯಾತ್ಮದ ಮಿಂಚು ಹರಿಸಲಿರುವವರು ಸಚಿನ್‌ ಸುವರ್ಣ.

ಮುತ್ತಪ್ಪ ರೈ ಚಿತ್ರಕ್ಕೆ ಸೌಮ್ಯಾ ಮೆನನ್‌ ನಾಯಕಿ; 'MR' ಸಿನಿಮಾದಲ್ಲಿ ಕೇರಳದ ಬ್ಯೂಟಿ! 

‘ನಾನಿನ್ನೂ ಮೊದಲ ಮೆಟ್ಟಿಲನ್ನೂ ಏರಿಲ್ಲ. ಹೀಗಾಗಿ ಈಗಲೇ ಪಾತ್ರದ ಬಗ್ಗೆ, ಸಿನಿಮಾ ಬಗ್ಗೆ ಮಾತನಾಡುವುದು ಕಷ್ಟ. ಮುಂದೆ ಖಂಡಿತಾ ಮಾತನಾಡುತ್ತೇನೆ’ ಎಂದು ಕ್ಲುಪ್ತವಾಗಿ ಮಾತು ಮುಗಿಸಿದರು ಸಚಿನ್‌. ಮುಂಬೈಯಲ್ಲಿರುವ ಕಾರಣಕ್ಕೋ ಏನೋ ಅವರ ಕನ್ನಡ ಅಸ್ಪಷ್ಟವಾಗಿತ್ತು. ಅವರ ಮಾತು ಕೇಳಿ ಅಲ್ಲಮನ ಪಾತ್ರವನ್ನು ಇವರು ಹೇಗೆ ನಿರ್ವಹಿಸಬಹುದು ಅನ್ನುವ ಸಂದೇಹ ಅಲ್ಲಿದ್ದ ಹಲವರಿಗೆ ಬಂತು.

ಕನ್ನಡ ಕಟ್ಟಿದವರು: ಗಡಿಭಾಗದಲ್ಲಿ ಕನ್ನಡದ ಕಂಪು ಹರಡಿದ ಸಿದ್ಧಸಂಸ್ಥಾನ ಮಠ! 

ನಿರ್ದೇಶಕ ಡಿ ಕೆ ಶಿವರಾಜ್‌ ಅಲ್ಲಮನ ಬಗ್ಗೆ ಚಿತ್ರ ಮಾಡುವ ಕಷ್ಟಗಳ ಬಗ್ಗೆ ಹೇಳಿಕೊಂಡರು. ಜೊತೆಗೆ ಈಗ ಈ ಸಿನಿಮಾ ಮಾಡಲೇ ಬೇಕಾದ ಅನಿವಾರ್ಯತೆ ಇರುವ ಬಗೆಗೂ ಮಾತನಾಡಿದರು. ನಿರ್ಮಾಪಕರಾದ ಮಹಾವೀರ ಪ್ರಭು ಹಾಗೂ ಮಾಧವಾನಂದ ಶೇಗುಣಸಿ, ಚಿತ್ರದ ಕಲಾವಿದರು, ತಂತ್ರಜ್ಞರು ಮುಹೂರ್ತ ಸಮಾರಂಭದಲ್ಲಿದ್ದರು. ಹತ್ತಾರು ಮಠಗಳ ಸ್ವಾಮೀಜಿಗಳು, ನಿವೃತ್ತ ಡಿಜಿಪಿ ಶಂಕರ್‌ ಬಿದರಿ ಚಿತ್ರತಂಡಕ್ಕೆ ಶುಭ ಕೋರಿದರು.