ಹೊಸಬರ ಹೊಸ ರೀತಿಯ ಪ್ರಯತ್ನವೇ ‘ಸೀತಾಯಣ’ ಸಿನಿಮಾ. ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಟೀಸರ್‌ ಅನ್ನು ನಟ ಶಿವರಾಜ್‌ಕುಮಾರ್‌ ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ.

ರಿಯ ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ನಾಯಕನಾಗಿ ನಟಿಸುತ್ತಿರುವ ಮೊದಲ ಸಿನಿಮಾ ಇದು. ಅನಹಿತಾ ಭೂಷಣ್‌ ನಾಯಕಿಯಾಗಿ ನಟಿಸಿದ್ದಾರೆ. ಪ್ರಭಾಕರ್‌ ಆರಿಪ್ಕಾ ನಿರ್ದೇಶನ ಮಾಡಿದ್ದು, ಲಲಿತಾ ರಾಜಲಕ್ಷ್ಮೀ ನಿರ್ಮಾಣ ಮಾಡಿದ್ದಾರೆ. ‘ಶಶಿಕುಮಾರ್‌ ನನಗೆ ಸೋದರನಿದ್ದಂತೆ. ಅವರ ಮಗ ಮೂರು ಭಾಷೆಯಲ್ಲಿ ನಾಯಕನಾಗಿ ಪರಿಚಯವಾಗುತ್ತಿರುವುದು ಖುಷಿ ಕೊಡುತ್ತಿದೆ. ಬೇರೆ ಯಾವ ನಟನಿಗೂ ಸಿಗದ ಗೌರವವಿದು.

ಟೀಸರ್‌ ನನ್ನ ಕೈಲಿಂದ ಬಿಡುಗಡೆ ಮಾಡಿದ್ದು ತುಂಬಾ ಸಂತಸ ಉಂಟು ಮಾಡಿದೆ. ಸಿನಿಮಾ ಕೂಡ ಖಂಡಿತ ಹಿಟ್‌ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ರಾಮಾಯಣದಂತೆ ಈ ಸೀತಾಯಣ ಚಿತ್ರವೂ ಎಲ್ಲ ಭಾಷೆಗಳಲ್ಲೂ ಚರಿತ್ರೆ ಸೃಷ್ಟಿಸಲಿ. ಅಕ್ಷಿತ್‌ ಕೂಡ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ’ ಎಂದು ಶಿವರಾಜ್‌ಕುಮಾರ್‌ ಅಭಿಪ್ರಾಯಪಟ್ಟರು.

ಶಶಿಕುಮಾರ್‌ ಪುತ್ರನ 'ಸೀತಾಯಣ'; ಅಕ್ಷಿತ್‌ ರಗಡ್‌ ಲುಕ್‌ ಹೇಗಿದೆ ನೋಡಿ! 

View post on Instagram

ಸದ್ಯದಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದೆ. ‘ನನ್ನ ಮೊದಲ ಚಿತ್ರದ ಟೀಸರ್‌ ಅನ್ನು ಶಿವಣ್ಣ ಬಿಡುಗಡೆ ಮಾಡುತ್ತಿರುವುದು ಖುಷಿ ಕೊಟ್ಟಿದೆ. ಹೊಸ ನಟನಿಗೆ ಇದೊಂದು ದೊಡ್ಡ ಉತ್ಸಾಹ ಕೊಟ್ಟ ಕ್ಷಣ ಎನ್ನಬಹುದು’ ಎಂಬುದು ಅಕ್ಷಿತ್‌ ಶಶಿಕುಮಾರ್‌ ಮಾತು. ಅಜಯ್‌ ಘೋಷ್‌, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್‌, ಮದುಸೂಧನ್‌, ವಿಕ್ರಮ್‌ಶರ್ಮ, ಮೇಘನಾಗೌಡ, ಬೇಬಿ ತ್ರಿಯುಕ್ತ, ವಿದ್ಯಲೇಖರಾಮನ್‌ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ದುರ್ಗಾಪ್ರಸಾದ್‌ ಕೊಲ್ಲಿ ಅವರದ್ದು.

ಅಪ್ಪನಂತೆ ನಟನಾಗಲು ಬಂದಿದ್ದಾರೆ ಅಕ್ಷಿತ್‌ ಶಶಿಕುಮಾರ್‌!