ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಅಜಿತ್‌ ಜಯರಾಜ್‌; ಸರಣಿ ಕೊಲೆಗಳ ನಿಗೂಢ ಕತೆಯ ಸಿನಿಮಾ ರೈಮ್ಸ್‌!

ಕನ್ನಡದ ಮಟ್ಟಿಗೆ ಸರಣಿ ಕೊಲೆಗಳ ಸುತ್ತ ಸಿನಿಮಾಗಳು ಮೂಡಿ ಬಂದಿದ್ದು ಕಡಿಮೆ. ಅಜಿತ್‌ ಜಯರಾಜ್‌ ನಟನೆಯಲ್ಲಿ ಸೆಟ್ಟೇರಿರುವ ‘ರೈಮ್ಸ್‌’ ಸಿನಿಮಾ ಸರಣಿ ಕೊಲೆಗಳ ಕತೆಯನ್ನು ಹೇಳುತ್ತಲೇ ಅದರ ಹಿಂದಿನ ನಿಗೂಢತೆಯನ್ನು ತೆರೆದಿಡುತ್ತದಂತೆ. ಹೀಗೆ ಹೇಳಿಕೊಂಡಿದ್ದು ಚಿತ್ರತಂಡ. ಇತ್ತೀಚೆಗೆ ಚಿತ್ರದ ಪೋಸ್ಟರ್‌ ಬಿಡುಗಡೆ ನಡೆಯಿತು. ಹೀಗಾಗಿ ಚಿತ್ರತಂಡ ಮಾಧ್ಯಮಗಳ ಮುಂದೆ ಪ್ರತ್ಯೇಕ್ಷವಾಯಿತು.

Ajith jayaraj in murder series Rhymes vcs

ಅಜಿತ್‌ ಕುಮಾರ್‌ ಈ ಚಿತ್ರದ ನಿರ್ದೇಶಕರು. ‘ಹನಿಹನಿ ಇಬ್ಬನಿ’, ‘ತ್ರಾಟಕ’ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅಜಿತ್‌ ಜಯರಾಜ್‌ ಈಗ ಸೈಕಲಾಜಿಕಲ… ಥ್ರಿಲ್ಲರ್‌ ಕಥಾಹಂದರ ಇರುವ ‘ರೈಮ್ಸ್‌’ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದಾರೆ.

Ajith jayaraj in murder series Rhymes vcs

ಮಾಜಿ ಪೊಲೀಸ್‌ ಅಧಿಕಾರಿ ಬಿ.ಬಿ. ಅಶೋಕ್‌ ಕುಮಾರ್‌ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ‘ನಾವು ಏನೇ ಕೇಸ್‌ ಪತ್ತೆ ಮಾಡಿದರೂ ಅದನ್ನು ಸಿನಿಮಾಗಳಲ್ಲಿ ರೋಚಕವಾಗಿ ತೋರಿಸುತ್ತಾರೆ. ನಾನು ಅಜಿತ್‌ ಅವರ ತಂದೆ ಭೂಗತದೊರೆ ಜಯರಾಜ್‌ ಜತೆ ತುಂಬಾ ಕಾದಾಡಿದವನು. ನಾನು ಪೊಲೀಸ್‌ ಇಲಾಖೆಗೆ ಬರಲು ಒಂದು ರೀತಿಯಲ್ಲಿ ಸಿನಿಮಾನೇ ಕಾರಣ. ಅಮಿತಾಭ್‌ ಬಚ್ಚನ್‌ ಅವರ ಜಂಜೀರ್‌ ಸಿನಿಮಾ ನೋಡಿ ಪ್ರೇರಿತನಾಗಿದ್ದೆ. 35 ವರ್ಷ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಇದು ಪವಿತ್ರವಾದ ಖಾಕಿ, ಇಲ್ಲಿ ಸಿಗೋ ಅನುಭವ ಬೇರೆಲ್ಲೂ ಸಿಗಲ್ಲ. ನಿಜ ಜೀವನದಲ್ಲಿ ಯಾರು ಪೊಲೀಸರನ್ನು ದ್ವೇಷ ಮಾಡುತ್ತಿದ್ದರೋ ಆತನ ಪುತ್ರ ಅಜಿತ್‌ ಜಯರಾಜ್‌ ಅವರೇ ‘ರೈಮ್ಸ್‌’ ಮೂಲಕ ಪೊಲೀಸ್‌ ಪಾತ್ರ ಮಾಡುತ್ತಿದ್ದಾರೆ’ ಎಂದು ಹೇಳಿದ್ದು ಬಿ.ಬಿ. ಅಶೋಕ್‌ ಕುಮಾರ್‌.

'ರೈಮ್ಸ್‌' ಹೇಳ್ತಾ ಕ್ರೈಮ್‌ಗೆ ಕೈ ಹಾಕಿದ ಜಯರಾಜ್‌ ಪುತ್ರ ಅಜಿತ್ ಜಯರಾಜ್‌! 

ಅಜಿತ್‌ ಜಯರಾಜ್‌ ಅವರದ್ದು ಇಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಪಾತ್ರ. ಸರಣಿ ಕೊಲೆಗಳ ಹಿಂದಿನ ರಹಸ್ಯ ತಿಳಿಯಲು ಬರುವ ಇವರ ಮುಂದೆ ಏನೆಲ್ಲ ಘಟನೆಗಳು ನಡೆಯುತ್ತವೆ ಎಂಬುದು ಚಿತ್ರದ ಕತೆ. ಪ್ರತಿ ಕೊಲೆಯ ಹಿಂದೆಯೂ ಒಂದು ರೈಮ್ಸ್‌ ಇರುತ್ತದೆ. ಯಾಕೆ ಅದು ಎಂಬುದು ಚಿತ್ರದ ಮತ್ತೊಂದು ತಿರುವು. ‘ಈ ಚಿತ್ರ ನನಗೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ತಂದು ಕೊಡುತ್ತದೆಂಬ ನಂಬಿಕೆ ಇದೆ. ಅದಕ್ಕೆ ಕಾರಣ ಚಿತ್ರದ ಕತೆ’ ಎಂಬುದು ಅಜಿತ್‌ ಜಯರಾಜ್‌ ಅವರ ನಂಬಿಕೆಯ ಮಾತು.

Latest Videos
Follow Us:
Download App:
  • android
  • ios