ಬೆಂಗಳೂರು ಕಂಬಳಕ್ಕೆ ರಜನಿಕಾಂತ್- ಐಶ್ವರ್ಯಾ ರೈ ಆಗಮನ..?
ಕಂಬಳ ಹಬ್ಬವು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಕಡೆ ಸಾಮಾನ್ಯವಾಗಿ ಪ್ರತಿ ವರ್ಷವೂ ನಡೆಯುತ್ತದೆ. ಕೆಸರು ಗದ್ದೆಯ ಟ್ರಾಕ್‌ನಲ್ಲಿ ಕೋಣಗಳನ್ನು ರೇಸ್‌ನಂತೆ ಓಡಿಸಿ ಗೆದ್ದ ಕೋಣಕ್ಕೆ ಬಹುಮಾನ ಕೊಡುವುದೇ ಕಂಬಳ. ಈಗಾಗಲೇ ಈ ಹಬ್ಬವು ಶಿವಮೊಗ್ಗ ಸೇರಿದಂತೆ ದಕ್ಷಿಣ ಕನ್ನಡ ಭಾಗದಲ್ಲಿ ಹಲವಾರು ಬಾರಿ ನಡೆದು ಜನಮನ ಗೆದ್ದಿದೆ.

ಕರಾವಳಿ ಸಿಟಿ ಮಂಗಳೂರಿನಲ್ಲಿ ಗ್ರಾಂಡ್ ಆಗಿ ನಡೆಯುತ್ತಿದ್ದ ಕಂಬಳ, ಇದೇ ಮೊದಲ ಬಾರಿಗೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿದೆ. ಮುಂದಿನ ತಿಂಗಳು 25 ಮತ್ತು 26ಕ್ಕೆ (ನವೆಂಬರ್ 25 ಮತ್ತು 26, 2023) ಬೆಂಗಳೂರಿನಲ್ಲಿ ಕಂಬಳ ನಡೆಯಲಿದೆ ಎಂದು ಪುತ್ತೂರು ಎಂಎಲ್‌ಎ ಮತ್ತು ಬೆಂಗಳೂರು ಕಂಬಳ ಕಮೀಟಿ ಹೆಡ್ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಜಿಲ್ಲಾ ಕಂಬಳ ಸಮಿತಿಯ ಜತೆ ಸೇರಿ ಬೆಂಗಳೂರು ಕಂಬಳ ಸಮಿತಿ ಈ (ನಮ್ಮ ಕಂಬಳ) ಬೆಂಗಳೂರು ಕಂಬಳವನ್ನು ಆಯೋಜನೆ ಮಾಡಲಿದೆ. ಈ ಕಂಬಳವನ್ನು ಕಂಬಳದಲ್ಲಿ ಉಪಯೋಗಿಸುವ ಕೋಣಗಳ ಮಾಲೀಕರ ಜತೆ ಚರ್ಚಿಸಿ ಆಯೋಜಿಸಿದ್ದು, ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜನರು ಕಂಬಳವನ್ನು ನೋಡಬಹುದು.
ಕಂಬಳ ಹಬ್ಬವು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಕಡೆ ಸಾಮಾನ್ಯವಾಗಿ ಪ್ರತಿ ವರ್ಷವೂ ನಡೆಯುತ್ತದೆ. ಕೆಸರು ಗದ್ದೆಯ ಟ್ರಾಕ್‌ನಲ್ಲಿ ಕೋಣಗಳನ್ನು ರೇಸ್‌ನಂತೆ ಓಡಿಸಿ ಗೆದ್ದ ಕೋಣಕ್ಕೆ ಬಹುಮಾನ ಕೊಡುವುದೇ ಕಂಬಳ. ಈಗಾಗಲೇ ಈ ಹಬ್ಬವು ಶಿವಮೊಗ್ಗ ಸೇರಿದಂತೆ ದಕ್ಷಿಣ ಕನ್ನಡ ಭಾಗದಲ್ಲಿ ಹಲವಾರು ಬಾರಿ ನಡೆದು ಜನಮನ ಗೆದ್ದಿದೆ. ಇದೀಗ ಬೆಂಗಳೂರಿನಲ್ಲಿ ನಡೆಯುವ ಮೂಲಕ ಹೆಚ್ಚಿನ ಮೈಲೇಜ್ ಸಿಗತೊಡಗಿದೆ. ಈ ಕಂಬಳದಲ್ಲಿ ಸುಮಾರು 100 ರಿಂದ 130 ಜೊತೆ ಕೋಣಗಳ ಜೋಡಿ ಭಾಗವಹಿಸಲಿದೆ.
ಮುಂಬರುವ ಬೆಂಗಳೂರು ಕಂಬಳದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ಉಳಿದ ಕೆಲವು ಜಿಲ್ಲೆಗಳಿಂದ ಕೋಣಗಳು ಆಗಮಿಸಲಿದ್ದು, ಸುಮಾರು 7 ಲಕ್ಷ ಜನರು ಈ ಹಬ್ಬವನ್ನು ನೋಡಲು ಬರಬಹುದು ಎಂಬ ನಿರೀಕ್ಷೆಯಿದೆ ಎನ್ನಲಾಗುತ್ತಿದೆ. ನವೆಂಬರ್ 23ಕ್ಕೆ ಕೋಣಗಳು ಮಂಗಳೂರಿನಿಂದ ಲಾರಿಯಲ್ಲಿ ಹೊರಟು ಬೆಂಗಳೂರು ತಲುಪಲಿದ್ದು, ಬಳಿಕ ಕಂಬಳಕ್ಕೆ ಸಿದ್ಧವಾಗಲಿವೆ.
ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳಕ್ಕೆ ನಟ ರಜನಿಕಾಂತ್, ಐಶ್ವರ್ಯಾ ರೈ ಬಚ್ಚನ್, ಅನುಶ್ಕಾ ಶೆಟ್ಟಿ ಹಾಗೂ ರಿಷಭ್ ಶೆಟ್ಟಿ ಭಾಗವಹಿಸಲಿರುವುದು ಪಕ್ಕಾ ಎನ್ನಲಾಗಿದೆ. ನಟಿ ಶಿಲ್ಪಾ ಶೆಟ್ಟಿ ಎಂದಿನಂತೆ ಬರುವ ನಿರೀಕ್ಷೆ ಕೂಡ ಇದೆ. ಸಿನಿಮಾ ತಾರೆಯರ ಹೊರತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಲವು ಮಂತ್ರಿಗಳು ಆಗಮಿಸಲಿದ್ದಾರೆ. ಉಳಿದ ಕ್ಷೇತ್ರಗಳ ಬಹಳಷ್ಟು ವಿಐಪಿಗಳು ಆಗಮಿಸಲಿದ್ದಾರೆ ಎನ್ನಲಾಗಿದೆ.
ರೆಬೆಲ್ ಅಭಿಮಾನಿಗಳು ಮನೆ ಹತ್ತಿರ ಬಂದರೂ ಬರಬೇಡಿ ಎನ್ನುವುದು ನಮ್ಮ ಸಂಪ್ರದಾಯವಲ್ಲ: ಅಭಿಷೇಕ್ ಅಂಬರೀಶ್
ಕಂಬಳವು ಸುಮಾರು 6 ಕೋಟಿ ರೂ. ಖರ್ಚಿನಲ್ಲಿ ನಡೆಯಲಿದ್ದು, 2000 ವಿಐಪಿಗಳು ಆಗಮಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ದಕ್ಷಿಣ ಕನ್ನಡ ಭಾಗದ ಸುಮಾರು 150 ಫುಡ್ ಸ್ಟಾಲ್‌ಗಳು ಬರಲಿದ್ದು, ತುಳುನಾಡಿನ ಆಹಾರಕ್ರಮವನ್ನು ಪ್ರತಿನಿಧಿಸಲಿವೆ. 145 ಮೀಟರ್ ಟ್ರಾಕ್‌ನಲ್ಲಿ ಈ ಕೋಣಗಳ ಓಟದ ಸ್ಪರ್ಧೆ ನಡೆಯಲಿದ್ದು, ಭಾಗವಹಿಸುವ ಎಲ್ಲಾ ಕೋಣಗಳು ಮೆಡಲ್ ಪಡೆಯಲಿವೆ ಎನ್ನಲಾಗಿದೆ.
ಕಾಂಗ್ರೆಸ್ ಮುಖಂಡೆ ‘ಮಿಸ್ ಬಿಕಿನಿ ಇಂಡಿಯಾ’ ಅರ್ಚನಾಗೆ ಪಕ್ಷದ ಕಚೇರಿಗೆ ನೋ ಎಂಟ್ರಿ! ತೀವ್ರ ಹಲ್ಲೆ
ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಸುವ ಉದ್ದೇಶದಿಂದ ಇಲ್ಲೊಂದು 'ತುಳು ಭವನ' ನಿರ್ಮಾಣ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಜತೆಗೆ, ಪಿಲಿಕುಳದಲ್ಲಿ ಕಂಬಳಕ್ಕಾಗಿ ಒಂದು ಎಕರೆ ಜಮೀನು ಮಂಜೂರಿಗಾಗಿ ಸರ್ಕಾರಕ್ಕೆ ಅರ್ಜಿ ಕೊಡಲಾಗಿದೆ ಎಂದು MLA ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಒಟ್ಟನಲ್ಲಿ, ಬೆಂಗಳೂರಿನಲ್ಲಿ ಕಂಬಳ ನಡೆಯುವ ಮೂಲಕ ಈ ಹಬ್ಬವು ಮುಂಬರುವ ದಿನಗಳಲ್ಲಿ ನ್ಯಾಷನಲ್ ಮತ್ತು ಇಂಟರ್‌ನ್ಯಾಷನಲ್ ಖ್ಯಾತಿ ಪಡೆಯುವ ದಾರಿಯಲ್ಲಿದೆ ಎನ್ನಬಹುದು.