ಕಾಂಗ್ರೆಸ್​ ಮುಖಂಡೆ ‘ಮಿಸ್‌ ಬಿಕಿನಿ ಇಂಡಿಯಾ’ ಅರ್ಚನಾಗೆ ಪಕ್ಷದ ಕಚೇರಿಗೆ ನೋ ಎಂಟ್ರಿ! ತೀವ್ರ ಹಲ್ಲೆ

ಕಳೆದ ವರ್ಷ ಕಾಂಗ್ರೆಸ್​ನಿಂದ ಟಿಕೆಟ್​ ಪಡೆದು ಭಾರಿ ಸುದ್ದಿಯಾಗಿದ್ದ ‘ಮಿಸ್‌ ಬಿಕಿನಿ ಇಂಡಿಯಾ’ ಅರ್ಚನಾ ಗೌತಮ್​  ಅವರಿಗೆ ಪಕ್ಷದ ಕಚೇರಿಗೆ ಪ್ರವೇಶ ನಿರಾಕರಿಸಿ ಹಲ್ಲೆ ನಡೆಸಲಾಗಿದೆ. ಆಗಿದ್ದೇನು?
 

Archana Gautam denied entry at the Congress Partys headquarters in Delhi suc

ಕಳೆದ ವರ್ಷ ಕಾಂಗ್ರೆಸ್​ನಿಂದ ಟಿಕೆಟ್​ ಪಡೆದು ಭಾರಿ ಸುದ್ದಿಯಾಗಿದ್ದ ಉತ್ತರ ಪ್ರದೇಶದ ಹಸ್ತಿನಾಪುರದ ‘ಮಿಸ್‌ ಬಿಕಿನಿ ಇಂಡಿಯಾ’ (Miss Bikini India) ಆಗಿದ್ದ ಅರ್ಚನಾ ಗೌತಮ್‌ (Archana Gautam) ಮತ್ತು ಅವರ ತಂದೆಯ ಮೇಲೆ ದೆಹಲಿಯ ಕಾಂಗ್ರೆಸ್ ಕಚೇರಿ ಎದುರು ಭಾರಿ ಹಲ್ಲೆ ಮಾಡಲಾಗಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಅರ್ಚನಾ ಅವರು ಮಾಡೆಲ್ ಕೂಡ.  ಬಿಗ್​ಬಾಸ್ 16ರ ಸ್ಪರ್ಧಿಯಾಗಿ ಹೆಸರು ಮಾಡಿದವರು. ಇದೀಗ ಅವರ ಪಕ್ಷದ ಕಚೇರಿ ಎದುರೇ  ಹೊಡೆದು ಥಳಿಸಿರುವುದು ಭಾರಿ ವಿವಾದ ಸೃಷ್ಟಿಸಿದೆ. ಬಿಕಿನಿ ಧರಿಸಿ ಸುದ್ದಿಯಲ್ಲಿರೋ ಮಹಿಳೆಗೆ ಟಿಕೆಟ್​ ನೀಡಿದ್ದರಿಂದ ಬಿಜೆಪಿ ಕಾಂಗ್ರೆಸ್​ ವಿರುದ್ಧ ಹಿಂದೆ ವಾಗ್ದಾಳಿ ನಡೆಸಿತ್ತು. ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಆಗುತ್ತಿದ್ದಂತೆಯೇ ಮಮತಾ ಬಿಕಿನಿ ಧರಿಸಿರುವ ಫೋಟೋ ವೈರಲ್‌ ಆಗುತ್ತಿದ್ದವು. , ‘ಕಾಂಗ್ರೆಸ್ಸಿಗರಿಗೆ ಅಭ್ಯರ್ಥಿಗಳು ಸಿಗುತ್ತಿಲ್ಲ. ಹೀಗಾಗಿ ಅದು ಚೀಪ್‌ ಗಿಮಿಕ್‌ ಮಾಡುತ್ತಿದೆ. ಹಸ್ತಿನಾಪುರದಂಥ ಕ್ಷೇತ್ರದಲ್ಲಿ ಸಂಸ್ಕೃತಿಯ ಬಗ್ಗೆ ಗೌರವ ಇರುವವರಿಕೆ ಟಿಕೆಟ್‌ ನೀಡದೇ ಕೇವಲ ಮತಗಳಿಕೆಯ ಉದ್ದೇಶದಿಂದ ಅರ್ಚನಾಗೆ ಟಿಕೆಟ್‌ ನೀಡಲಾಗಿದೆ. ರಾಜಕೀಯದ ಗಂಧಗಾಳ ಕೂಡ ಆಕೆಗೆ ಗೊತ್ತಿಲ್ಲ’ ಎಂದು ಕಿಡಿಕಾರಿತ್ತು.

ಇದೀಗ ಅವರ ಮೇಲೆ ಹಲ್ಲೆ ನಡೆದಿರುವುದು ಭಾರಿ ಆತಂಕ ಸೃಷ್ಟಿಸಿದೆ. ಅರ್ಚನಾ ಗೌತಮ್ ಅವರು ತಂದೆಯ ಜೊತೆ ಕಾಂಗ್ರೆಸ್ ಆಫೀಸ್​ಗೆ ಬಂದಿದ್ದರು. ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಜನರಲ್ ಸೆಕ್ರೆಟರಿ ಪ್ರಿಯಾಂಕಾ ಗಾಂಧಿ ಅವರಿಗೆ ಶುಭಾಶಯ ತಿಳಿಸಲು ಅವರು ಬಂದಿದ್ದರು. ಆ ಸಮಯದಲ್ಲಿ ಹಲ್ಲೆ ನಡೆದಿದೆ. ಆದರೆ ಅವರಿಗೆ ಆಫೀಸ್ ಒಳಗಡೆ ಬಿಡಲಿಲ್ಲ ಎನ್ನಲಾಗಿದೆ. ಬದಲಾಗಿ ಪ್ರವೇಶ ದ್ವಾರದಲ್ಲಿಯೇ  ಥಳಿಸಿ, ಹೊಡೆದು ರಸ್ತೆಯಲ್ಲಿಯೇ ದೈಹಿಕ ದೌರ್ಜನ್ಯ ಎಸಗಲಾಗಿದೆಯಂತೆ. ಈ ಕುರಿತು ಖುದ್ದು  ಅರ್ಚನಾ ಗೌತಮ್ ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಅವರು ನಮ್ಮನ್ನು ಆಫೀಸ್ ಒಳಗೆ ಹೋಗಲು ಬಿಡಲಿಲ್ಲ. ಗೇಟ್ ಕೂಡಾ ತೆರೆಯಲಿಲ್ಲ. ಮೇಲಿಂದ ಆದೇಶ ನೀಡಲಾಗಿದೆ, ನಿಮ್ಮ ಎಂಟ್ರಿ ನಿರಾಕರಿಸಲಾಗಿದೆ ಎಂದು ತಿಳಿಸಿದ್ದರು. ಆದರೆ ಇದಕ್ಕೆ ಕಾರಣ ಏನು ಎಂಬುದು ಗೊತ್ತಾಗಿಲ್ಲ ಎಂದಿದ್ದಾರೆ.

ಮನೇಲಿದ್ದ ತಟ್ಟೆ, ಚಂಬು, ಬಟ್ಲು ಕದೀತಿದ್ದೆ, 2ನೇ ಕ್ಲಾಸ್​ನಲ್ಲೇ ಪೊಲೀಸ್ ಠಾಣೆಗೂ ಹೋಗಿದ್ದೆ ಎಂದ ಸರ್‌ದೇಶಪಾಂಡೆ

ಕಳೆದ 29ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮಾಧ್ಯಮಗಳ ಎದುರು ಅರ್ಚನಾ ನೋವು ತೋಡಿಕೊಂಡಿದ್ದಾರೆ. ತಮ್ಮ  ತಂದೆ ಹಾಗೂ ಚಾಲಕ ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ನಾನು ಮಾಡಿದ ತಪ್ಪೇನು ಎಂದು ಪ್ರಶ್ನಿಸಿರೋ ಅರ್ಚನಾ ಅವರು, ಶುಭಾಶಯ ಹೇಳಲು ಹೋಗಿದ್ದಷ್ಟೇ, ಯಾಕೆ ಹೀಗೆ ಮಾಡಿದ್ರೂ ಗೊತ್ತಾಗಲಿಲ್ಲ. ನಾನು ಅಲ್ಲಿಂದ ಹೇಗೋ ತಪ್ಪಿಸಿಕೊಂಡು ನನ್ನ ಜೀವ ಉಳಿಸಿಕೊಂಡೆ ಎಂದಿದ್ದಾರೆ. 

 ಕಳೆದ ವರ್ಷ ತಮಗೆ ಟಿಕೆಟ್​ ನೀಡಿದ್ದಕ್ಕೆ ಬಿಜೆಪಿ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದ ಅರ್ಚನಾ,  ‘2014ರಲ್ಲಿ ನಾನು ಮಿಸ್‌ ಉತ್ತರಪ್ರದೇಶ ಆಗಿದ್ದೆ. 2018ರಲ್ಲಿ ಮಿಸ್‌ ಬಿಕಿನಿ ಇಂಡಿಯಾ ಆದೆ. 2018ರಲ್ಲಿ ಮಿಸ್‌ ಕಾಸ್ಮೋ ವರ್ಲ್ಡ್ ಅದೆ. ಆದರೆ ಈಗ ಸಮಾಜಸೇವೆ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ. ಕಲಾವಿದರು ರಾಜಕೀಯಕ್ಕೆ ಬರಬಾರದೇ? ಕೇಂದ್ರದಲ್ಲಿ ನಟಿಯರು ಸಚಿವರಾಗಿಲ್ಲವೇ? ವೃತ್ತಿಗೂ ರಾಜಕೀಯಕ್ಕೂ ತಳಕು ಹಾಕಬಾರದು’ ಎಂದು   ಪ್ರಶ್ನಿಸಿದ್ದರು.

GHOST: ಸಾಮಾನ್ಯವಾಗಿ ಯಾರ್​ ತಂಟೆಗೂ ಹೋಗಲ್ಲ, ಹೋದ್ರೆ ರುದ್ರಭೂಮಿಯಾಗತ್ತೆ: ಶಿವಣ್ಣ ಸಕತ್​ ಪಂಚ್​
 

Latest Videos
Follow Us:
Download App:
  • android
  • ios