ರೆಬೆಲ್ ಅಭಿಮಾನಿಗಳು ಮನೆ ಹತ್ತಿರ ಬಂದರೂ ಬರಬೇಡಿ ಎನ್ನುವುದು ನಮ್ಮ ಸಂಪ್ರದಾಯವಲ್ಲ: ಅಭಿಷೇಕ್ ಅಂಬರೀಶ್
ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮುಂದಾದ ಅಭಿ. ದಯವಿಟ್ಟು ಪಟಾಕಿ, ಕೇಕ್ ಮತ್ತು ಹಾರ ಬೇಡ ಎಂದು ಮನವಿ....

ಕನ್ನಡ ಚಿತ್ರರಂಗದ ಜ್ಯೂನಿಯರ್ ರೆಬೆಲ್ ಸ್ಟಾರ್ ಅಂಬರೀಶ್ ಅಕ್ಟೋಬರ 3ರಂದು 30ರ ವಸಂತಕ್ಕೆ ಕಾಲಿಡುತ್ತಿದ್ದಾರೆ. ಕಳೆದ ಎರಡು ಮೂರು ವರ್ಷಗಳಿಂದ ಕೊರೋನಾ ಹಾವಳಿಯಿಂದ ಆಚರಣೆಗೆ ಬ್ರೇಕ್ ಹಾಕಿದ್ದರು. ಈ ವರ್ಷವೂ ಕಾವೇರಿ ಗಲಾಟೆ ಆಗುತ್ತಿರುವುದಕ್ಕೆ ಸೆಲೆಬ್ರೇಷನ್ ಬೇಡ ಅನ್ನೋ ಮನಸ್ಥಿತಿಯಲ್ಲಿದ್ದರೂ ಅಭಿಮಾನಿಗಳ ಒತ್ತಾಯಕ್ಕೆ ಅಭಿ ನೋ ಹೇಳಲು ಅಗಲಿಲ್ಲ ಅನಿಸುತ್ತದೆ. ಹೀಗಾಗಿ ಪೋಸ್ಟ್ ಹಾಕುವ ಮೂಲಕ ಸರಳ ಆಚರಣೆ ಎಂದಿದ್ದಾರೆ.
'ಕೆಲವೇ ದಿನಗಳಲ್ಲಿ ನನ್ನ ಹುಟ್ಟುಹಬ್ಬ ಇರುವುದರಿಂದ ಕೆಲವೊಂದು ವಿಷಯಗಳನ್ನು ತಿಳಿಸಲು ಇಚ್ಚಿಸುತ್ತೇನೆ. ಈ ವರ್ಷ ನಮ್ಮ ರಾಜ್ಯದಲ್ಲಿ ಬರಗಾಲ ಉಂಟಾಗಿರುವುದಿರಂದ ಹಾಗೂ ನಮ್ಮ ಕಾವೇರಿಗಾಗಿ ಹಲವಾರು ಜನರು ಹೋರಾಟ ಮಾಡುತ್ತಿರುವುದರಿಂದ ಈ ವರ್ಷ ನಾನು ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲು ಇಚ್ಚಿಸಿದ್ದೇನೆ. ಎಲ್ಲಾ ರೆಬೆಲ್ ಅಭಿಮಾನಿಗಳು ನಿಮ್ಮ ಊರುಗಳಲ್ಲಿಯೇ, ನೀವು ಇರುವಲ್ಲಿಯೇ ನನಗೆ ಶುಭಹಾರೈಸಿ ಆಶೀರ್ವಾದಿಸಿ. ಅಭಿಮಾನಿಗಳು ಪ್ರೀತಿಯಿಂದ ಮನೆ ಹತ್ತಿರ ಬಂದರೂ ಬರಬೇಡಿ ಅನ್ನುವುದು ನಮ್ಮ ಸಂಪ್ರದಾಯವಲ್ಲ. ಆದರೆ ಬಂದವರು ಯಾವುದೇ ಹಾರ, ಕೇಕ್, ಪಟಾಕಿಗಳನ್ನು ಹಾಗೂ ಉಡುಗೊರೆಗಳನ್ನುತರದೆ ಬಂದು ಶುಭ ಹಾರೈಸಿ' ಎಂದು ಅಭಿ ಬರೆದುಕೊಂಡಿದ್ದಾರೆ.
ಮಂತ್ರಾಲಯದಲ್ಲಿ ಪಾರು ಫ್ಯಾಮಿಲಿ; ಪಕ್ಕದಲ್ಲಿರುವ ಹ್ಯಾಂಡ್ಸಮ್ ಹುಡುಗ ಯಾರು?
ಜೆಪಿ ನಗರ ನಿವಾಸದ ಬಳಿ ಪ್ರತಿ ವರ್ಷ ಮೂರು ಸಲ ಅಭಿಮಾನಿಗಳು ಸೇರುತ್ತಾರೆ. ಒಂದು ರೆಬೆಲ್ ಸ್ಟಾರ್ ಅಂಬರೀಶ್, ಎರಡು ಸುಮಲತಾ ಅಂಬರೀಶ್ ಈಗ ಅಭಿಷೇಕ್ ಅಂಬರೀಶ್ ಬರ್ತಡೇ ಆಚರಣೆಗೆ. ಪಟಾಕಿ ಹೊಡೆದು ದೊಡ್ಡ ದೊಡ್ಡ ಕೇಕ್ ಮತ್ತು ಹೂ ಹಾರಗಳನ್ನು ತಂದೆ ಅಭಿಮಾನಿಗಳು ಸಂಭ್ರಮಿಸುತ್ತಾರೆ. ತಂದೆ ಸ್ಟೈಲ್‌ನಲ್ಲಿ ಅಭಿ ಹೇಳುವ ಡೈಲಾಗ್ ಕೇಳಿ ಖುಷಿ ಪಡುತ್ತಾರೆ.
2019ರಲ್ಲಿ ಅಮರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಭಿಷೇಕ್ ಅಂಬರೀಶ್ ಈಗ ಬ್ಯಾಡ್ ಮ್ಯಾನರ್ಸ್ ಸಿನಿಮಾ ಚಿತ್ರೀಕರಣ ಮುಗಿಸಿ ರಿಲೀಸ್‌ಗೆ ಕಾಯುತ್ತಿದ್ದಾರೆ. ಇದಾದ ಮೇಲೆ ಕಾಂತಾರ ಸಪ್ತಮಿ ಗೌಡ ಜೊತೆ ಕಾಲಿ ಸಿನಿಮಾ ಚಿತ್ರೀಕರಣ ಶುರು ಮಾಡಲಿದ್ದಾರೆ. ಮೊದಲ ಸಿನಿಮಾ ಹಿಟ್ ಕಂಡ ಕಾರಣ ಎರಡನೇ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ ಅದರಲ್ಲೂ ಜಾಕಿ ಸೂರಿ ಆಕ್ಷನ್ ಕಟ್ ಹೇಳುತ್ತಿರುವ ಕಾರಣ ಅಭಿಮಾನಿಗಳು ಬ್ಲಾಕ್ ಬಸ್ಟರ್ ಹಿಟ್ ನಿರೀಕ್ಷೆ ಮಾಡುತ್ತಿದ್ದಾರೆ.
ತಮ್ಮನನ್ನು ನೋಡುತ್ತಿದ್ದಂತೆ ಅಕ್ಕನ ತುಂಟಾಟ ಶುರು; ಧ್ರುವ ಸರ್ಜಾ ಮಕ್ಕಳ ವಿಡಿಯೋ ವೈರಲ್!
ಹಲವು ವರ್ಷಗಳ ಕಾಲ ಅಭಿ ಮತ್ತು ಅವಿವಾ ಪ್ರೀತಿಸಿದ್ದಾರೆ. ಅವಿವಾ ಮೂಲತಃ ಕೊಡಗಿನ ಕುವರಿ ಅಗಿದ್ದು ಫ್ಯಾಷನ್ ಡಿಸೈರ್ ಆಗಿ ಕೆಲಸ ಮಾಡುತ್ತಿದ್ದಾರೆ.ಜೂನ್ 5ರಂದು ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿಡಪ್ಪ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸಿನಿಮಾ ತಾರೆಯರು ಮತ್ತು ರಾಜಕೀಯ ಗಣ್ಯರು ಭಾಗಿಯಾಗಿದ್ದರು.