ಸುದೀಪ್, ಮಗಳು ಸಾನ್ವಿ ಮತ್ತು ಧರ್ಮ ಕೀರ್ತಿರಾಜ್ ಜೊತೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಪ್ರಯಾಣಿಸಿದಾಗ ಗಗನಸಖಿ ವಿದ್ಯಾಶ್ರೀ ಅವರಿಂದ ಆಟೋಗ್ರಾಫ್ ಮತ್ತು ಸೆಲ್ಫಿ ಪಡೆದು ಸಂತಸ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 8 ರಿಂದ ಆರಂಭವಾಗುವ ಸಿಸಿಎಲ್ ಪಂದ್ಯಾವಳಿಗಾಗಿ ಸುದೀಪ್ ಪ್ರಯಾಣಿಸಿರಬಹುದು ಎನ್ನಲಾಗಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕರಾಗಿ ಸುದೀಪ್, ತೆಲುಗು ವಾರಿಯರ್ಸ್ ವಿರುದ್ಧ ಮೊದಲ ಪಂದ್ಯ ಆಡಲಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಗ್‌ಬಾಸ್ ಕನ್ನಡಕ್ಕೆ ವಿದಾಯ ಹೇಳಿದ್ದಾಗಿದೆ. ಮಾಕ್ಸ್ ಮೂವಿ ಹಿಟ್ ಆಗಿದೆ. ಇದೀಗ ಸಿಸಿಎಲ್ ತಯಾರಿಯಲ್ಲಿ ಬ್ಯುಸಿ ಆಗಿರುವ ಕಿಚ್ಚನ ಜೊತೆ ಸಮಯ ಕಳೆದ ಮಾಹಿತಿಯನ್ನು ಗಗನಸಖಿಯೊಬ್ಬರು ಶೇರ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಹೈದರಾಬಾದ್ ನಿಂದ ಕಿಚ್ಚ ಸುದೀಪ್ ಬೆಂಗಳೂರಿಗೆ ತಮ್ಮ ಮಗಳು ಸಾನ್ವಿ ಮತ್ತು ಬಿಗ್‌ಬಾಸ್ ಕನ್ನಡ 11ರ ಸ್ಪರ್ಧಿ, ನಟ ಧರ್ಮ ಕೀರ್ತಿರಾಜ್ ಜೊತೆಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಈ ವೇಳೆ ಆಕಾಶ್ ಏರ್‌ಲೈನ್ಸ್‌ನ ಗಗನಸಖಿ ವಿದ್ಯಾಶ್ರೀ ಎಂಬುವವರು ಕಿಚ್ಚನನ್ನು ಗಮನಿಸಿದ್ದಾರೆ. ಕಿಚ್ಚನ ಬಳಿ ಆಟೋಗ್ರಾಫ್ ಪಡೆದ ಗಗನಸಖಿ ಬಳಿಕ ಸೆಲ್ಫಿ ಕೂಡ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಗಗನಸಖಿ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
ಫೈನಲೀ, ಅವರು ನಮ್ಮೊಂದಿಗೆ 1 ಗಂಟೆ 20 ನಿಮಿಷಗಳ ಕಾಲ ಜೊತೆಗಿದ್ದರು. ಪ್ರತಿ ನಿಮಿಷವೂ ನನಗೆ ಗೂಸ್‌ಬಂಪ್ಸ್ ಆಗಿತ್ತು. ನಾನು ಅವರನ್ನು ಭೇಟಿಯಾಗಲು ಹೊರಟಿರುವ ಅಭಿಮಾನಿಯಾಗಿದ್ದೇನೆ ಆದರೆ ಅವರು ನಮ್ಮ ಪ್ರಯಾಣಿಕನಾಗಿರುವುದು ನನಗೆ ವಿಭಿನ್ನವಾಗಿತ್ತು. ಮುಚ್ ಲವ್ ಸರ್. ಜೊತೆಗೆ ಶ್ರೀ ಸುದೀಪ್ ಸರ್, ಸಾನ್ವಿ ಮೇಡಂ ಮತ್ತು ಶ್ರೀ ಧರ್ಮ ಸರ್ ಅವರೊಂದಿಗಿನ ಸಿಹಿ ಪಯಣವಾಗಿತ್ತು. ನಿಮ್ಮನ್ನು ವಿಮಾನದಲ್ಲಿ ಭೇಟಿಯಾಗಿರುವುದು ತುಂಬಾ ತುಂಬಾ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.
ಕಿಚ್ಚ ಸುದೀಪ್ ಸದ್ಯ ಸಿಸಿಎಲ್ ಟೂರ್ನಿಯ ಸಿದ್ದತೆಯಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ಕೆಲಸದ ನಿಮಿತ್ತ ಪ್ರಯಾಣ ಬೆಳೆಸಿರಬಹುದು ಎಂದು ಹಲವರು ಕಮೆಂಟ್ ನಲ್ಲಿ ಊಹಿಸಿದ್ದಾರೆ. ಜೊತೆಗೆ ಕಿಚ್ಚನ ಕೂಲ್ ಪ್ರತಿಕ್ರಿಯೆ ಮತ್ತು ಸೆಲ್ಫಿಗೆ ಪೋಸ್ ಕೊಟ್ಟಿದ್ದ ಗುಣವನ್ನು ಅಭಿಮಾನಿಗಳು ಬರೆದುಕೊಂಡಿದ್ದಾರೆ.
ಕಿಚ್ಚ ಸುದೀಪ್ಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಬಿಗ್ ಬಾಸ್ ತಂಡ : ಯೋಗರಾಜ್ ಭಟ್ ಹಾಡಿಗೆ ಧ್ವನಿಯಾದ ಸಾನ್ವಿ ಸುದೀಪ್!
ಸಿಸಿಎಲ್ ಆರಂಭ ಯಾವಾಗ?
ಸೆಲೆಬ್ರಿಟಿ ಕ್ರಿಕೆಟ್ ಲೀಗ್ 11ನೇ ವರ್ಷದ ಟೂರ್ನಿಗೆ ಸಿದ್ಧತೆ ಆರಂಭವಾಗಿದ್ದು, ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಪ್ರಕಟಿಸಲಾಗಿದೆ. ಫೆಬ್ರುವರಿ 8ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಎಲ್ ಪಂದ್ಯಾವಳಿಗೆ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ರಿನ್ಹೋಸ್ ತಂಡವು ಬೆಂಗಾಲ್ ಟೈಗರ್ಸ ವಿರುದ್ಧ ಸೆಣೆಸಲಿದೆ. ಅದೇ ದಿನ ಎರಡನೇ ಪಂದ್ಯದಲ್ಲಿ ಸಂಜೆ 6 ಗಂಟೆಯಿಂದ ಕರ್ನಾಟಕ ಬುಲ್ಡೋಜರ್ಸ್ ತಂಡವು ತೆಲುಗು ವಾರಿಯರ್ಸ್ ವಿರುದ್ಧ ಆಡಲಿದೆ.
ಕಿಚ್ಚ ಸುದೀಪ್ ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕರಾಗಿದ್ದಾರೆ. 2024ರ ಸಿಸಿಎಲ್ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದ್ದ ಕರ್ನಾಟಕ ಬುಲ್ಡೋಜರ್ಸ್, ಬೆಂಗಾಲ್ ಟೈಗರ್ಸ್ ವಿರುದ್ಧ ಸೋಲುವ ಮೂಲಕ ರನ್ನರ್ ಅಪ್ ಸ್ಥಾನ ಪಡೆದಿತ್ತು. ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಕರ್ನಾಟಕ ಬುಲ್ಡೋಜರ್ಸ್ ತಂಡ ಮೂರನೇ ಬಾರಿಯೂ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಕಿಚ್ಚ ಸುದೀಪ್ ನೀಡಿದ ಬ್ರೇಸ್ ಲೇಟ್ ಏನು ಮಾಡ್ತಾನೆ ಯುವನ್? ಅದೃಷ್ಟವಂತ ಬಾಲಕನಿಗೆ ಪ್ರೀತಿಯ ಸುರಿಮಳೆ
ಕರ್ನಾಟಕ ಬುಲ್ಡೋಜರ್ಸ್ ತಂಡ ಇಂತಿದೆ:
ಕಿಚ್ಚ ಸುದೀಪ್ (ನಾಯಕ), ಗೋಲ್ಡನ್ ಸ್ಟಾರ್ ಗಣೇಶ್, ಕಾರ್ತಿಕ್ ಜಯರಾಮ್, ಡಾರ್ಲಿಂಗ್ ಕೃಷ್ಣ, ರಾಜೀವ್ ಹನು, ಚಂದನ್ ಕುಮಾರ್, ಪ್ರತಾಪ್ ನಾರಾಯಣ್, ನಿರೂಪ್ ಭಂಡಾರಿ, ಅನೂಪ್ ಭಂಡಾರಿ, ಕರಣ್ ಆರ್ಯನ್, ಮಂಜುನಾಥ್ ಗೌಡ, ಸಾಗರ್ ಗೌಡ, ಅಲಕಾನಂದ, ತ್ರಿವಿಕ್ರಮ್.
