ಅಜ್ಞಾತವಾಸಿ ಚಿತ್ರದ ಸ್ಕ್ರೀನ್‌ ಪ್ಲೇ ಭಿನ್ನವಾಗಿರುತ್ತದೆ. ಇಡೀ ಸಿನಿಮಾ ಎಲ್ಲೂ ಬೋರ್‌ ಆಗಲ್ಲ. ಆ ರೀತಿ ಎಂಗೇಜ್‌ ಮಾಡಿಸಿಕೊಂಡು ಹೋಗುವ ಶಕ್ತಿ ಇರುವಂತಹ ಸ್ಕ್ರೀನ್‌ ಪ್ಲೇ ಇಲ್ಲಿದೆ.

ಆರ್‌. ಕೇಶವಮೂರ್ತಿ

1. ನಾನು ಮತ್ತು ಹೇಮಂತ್‌ ರಾವ್‌ ಆಗಾಗ ಕತೆಗಳ ಬಗ್ಗೆ ಚರ್ಚೆ ಮಾಡುತ್ತಿರುತ್ತೇವೆ. ಈ ಚಿತ್ರದ ಕತೆ ಕೇಳಿದ ಕೂಡಲೇ ನಿರ್ದೇಶಕರೂ ಆಗಿರುವ ಹೇಮಂತ್‌ ರಾವ್‌ ಅವರೇ ‘ಅಜ್ಞಾತವಾಸಿ’ ಚಿತ್ರಕ್ಕೆ ನಿರ್ಮಾಪಕರಾಗಿದ್ದು, ಈ ಚಿತ್ರಕ್ಕೆ ಸಿಕ್ಕ ಮೊದಲ ಪ್ರಶಂಸೆ ಎನ್ನಬಹುದು.

2. ಚಿತ್ರದಲ್ಲಿ ಕೆಲವೇ ಪಾತ್ರಧಾರಿಗಳಿದ್ದರೂ ಗಟ್ಟಿ ನಟನೆಯ ಕಲಾವಿದರೇ ಇರುವುದು ಚಿತ್ರದ ಮತ್ತೊಂದು ಹೈಲೈಟ್‌.

ಕೆರಿಯರ್‌ನ ಆರಂಭದಲ್ಲಿ ನಿರ್ಮಾಪಕರು ಸಿಗದೇ ಒದ್ದಾಟ.. ರಕ್ಷಿತ್‌ ಶೆಟ್ಟಿ ಬಳಿ ನಿರ್ದೇಶಕ ಹೇಮಂತ್‌ ರಾವ್‌ ಹೀಗಾ ಹೇಳೋದು!

3. ಟ್ರೇಲರ್‌ ನೋಡಿದ ಮೇಲೆ ಎಲ್ಲರಿಗೂ ‘ಅಜ್ಞಾತವಾಸಿ’ ಮೇಲೆ ನಿರೀಕ್ಷೆ ಮತ್ತು ಕುತೂಹಲ ಹುಟ್ಟಿಕೊಂಡಿದೆ. ಚಿತ್ರದಲ್ಲಿ ಬೇರೆಯದ್ದೇ ಆದ ಕಂಟೆಂಟ್‌ ಇದೆ ಎಂಬುದನ್ನು ಟ್ರೇಲರ್‌ ಮೂಲಕ ಹೇಳಿದ್ದೇವೆ. ಹಾಗಾಗಿ ಜನ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುತ್ತಾರೆಂಬ ನಂಬಿಕೆ ಇದೆ.

4. ಕೊಲೆಯ ಸುತ್ತಾ ಸಾಗುವ ಕತೆ ಅಂತ ಸಿಂಪಲ್ಲಾಗಿ ಕತೆಯ ಒಂದು ಸಾಲು ಹೇಳಿಬಿಡಬಹುದು. ಆದರೆ, ಆ ಕೊಲೆ ಯಾಕಾಗಿ ಆಯಿತು, ಅದರ ಹಿಂದೆ- ಮುಂದೆ ತೆರೆದುಕೊಳ್ಳುವ ಸಂಗತಿಗಳು, ಪಾತ್ರಧಾರಿಗಳು ಇದೆಲ್ಲವೂ ಸೇರಿ ಇದೊಂದು ಹೊಸ ಕ್ರೈಮ್‌-ಥ್ರಿಲ್ಲರ್‌ ಸಿನಿಮಾ ಆಗಿಸಿದೆ.

5. ಈ ಚಿತ್ರದ ಸ್ಕ್ರೀನ್‌ ಪ್ಲೇ ಭಿನ್ನವಾಗಿರುತ್ತದೆ. ಇಡೀ ಸಿನಿಮಾ ಎಲ್ಲೂ ಬೋರ್‌ ಆಗಲ್ಲ. ಆ ರೀತಿ ಎಂಗೇಜ್‌ ಮಾಡಿಸಿಕೊಂಡು ಹೋಗುವ ಶಕ್ತಿ ಇರುವಂತಹ ಸ್ಕ್ರೀನ್‌ ಪ್ಲೇ ಇಲ್ಲಿದೆ.

6. ನನಗೆ ಥ್ರಿಲ್ಲರ್‌ ಜಾನರ್‌ ಹೊಸದಲ್ಲ. ಈ ಹಿಂದೆಯೇ ನನ್ನ ‘ಗುಳ್ಟು’ ಚಿತ್ರದಲ್ಲಿ ಥ್ರಿಲ್ಲರ್‌ ಇತ್ತು. ಇಲ್ಲಿ ಸೈಬರ್‌, ಡಾಟಾ ಬೇಸ್‌ ಸುತ್ತಲಿನ ಕತೆಯನ್ನು ಹೇಳಿದ್ದೆ. ‘ಅಜ್ಞಾತವಾಸಿ’ ಚಿತ್ರದಲ್ಲಿ ಬ್ಲೆಂಡ್‌ ಶೇಡ್‌ ಕತೆಯನ್ನು ಡೀಲ್‌ ಮಾಡಿದ್ದೇನೆ.

ಹೇಮಂತ್ ರಾವ್ 'ಅಜ್ಞಾತವಾಸಿ' ಹಾಡು ಹೊರಗಜಗತ್ತಿಗೆ ಬಂತು.. 'ನಗುವಿನ ನೇಸರ..' ಎಂದ ಪಾವನಾ ಗೌಡ!

ಸಿಲ್ಲಿ ಲಲ್ಲಿಯಲ್ಲಿ ಒತ್ತಾಯಕ್ಕೆ ಮಣಿದು ಹಾಸ್ಯ ಪಾತ್ರ ಮಾಡಿದ್ದೆ : ರವಿಶಂಕರ್‌ ಗೌಡ, ‘ನನಗೆ ಮೊದಲಿಂದಲೂ ಸೀರಿಯಸ್‌ ಪಾತ್ರಗಳಿಷ್ಟ. ಸಿಲ್ಲಿಲಲ್ಲಿಯಲ್ಲಿ ಕಾಮಿಡಿ ಪಾತ್ರ ಮಾಡಲು ಇಷ್ಟವೇ ಇರಲಿಲ್ಲ. ಒತ್ತಾಯಕ್ಕೆ ಕಟ್ಟುಬಿಟ್ಟು ಪಾತ್ರ ಮಾಡಿದೆ. ಅದು ಜನಪ್ರಿಯವಾಯ್ತು. ಆಮೇಲೆ ಎಲ್ಲ ಆ ಥರದ ಪಾತ್ರಗಳೇ ಬರುತ್ತಿದ್ದವು. ಆದರೆ ಅಜ್ಞಾತವಾಸಿ ನಿರ್ದೇಶಕರು ನನ್ನೊಳಗಿನ ಸೀರಿಯಸ್‌ ನಟನನ್ನು ಹೊರ ತೆಗೆದಿದ್ದಾರೆ’ ಎಂದರು.