ತಾಯಿ ಸಮಾನಳಾದ ಅಕ್ಕ ಮಾಡು ಅಂದ್ರು, ಒಪ್ಪಿ ನಟಿಸಿದೆ; ಗುಟ್ಟು ಬಿಚ್ಚಿಟ್ಟ ಅಗ್ನಿ ಶ್ರೀಧರ್
ನಿರ್ದೇಶಕ ಅಭಿಷೇಕ್ ಬಸಂತ್ 'ಶ್ರೀಧರ್ ಅಣ್ಣ ಈ ಚಿತ್ರದಲ್ಲಿ ಮಾಡಿರೋದ್ರಿಂದ ಇಲ್ಲಿವರೆಗೂ ಬಂದು ನಿಂತಿದೆ. ಬಚ್ಚನ್ ಸರ್ ಬೇಗ ಬಾ ಅಂದ್ರು ಒಮ್ಮೆ.. ಒಂದು ಅಚಾತುರ್ಯ ನಡೆದಿದೆ ಅಂದ್ರು.. 80% ಸೆಟ್ ರೆಡಿ ಆಗಿದೆ..
ಅಗ್ನಿ ಶ್ರೀಧರ್ ಕಥೆ-ಚಿತ್ರಕಥೆ-ಸಂಭಾಷಣೆಯಲ್ಲಿ ಮೂಡಿ ಬಂದಿರುವ 'ಕ್ರೀಮ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಎರಡು ದಿನಗಳು ಕಳೆದಿವೆ. ಈ ಟ್ರೇಲರ್ ಸಾಕಷ್ಟು ಕುತೂಹಲಕರವಾಗಿದ್ದು, ಅಗ್ನಿ ಶ್ರೀಧರ್ ಹಲವು ಸೂಕ್ಷ್ಮ ಸಂಗತಿಗಳನ್ನು ಈ ಟ್ರೇಲರ್‌ನಲ್ಲಿ ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ. ಹಲವು ಮಾಜಿ ಮುಖ್ಯಮಂತ್ರಿಗಳ ಬಗ್ಗೆ ಈ ಟ್ರೇಲರ್‌ನಲ್ಲಿ ಪ್ರಸ್ತಾಪಿಸಲಾಗಿದ್ದು, ನರಬಲಿಗೂ ಅವರಿಗೂ ಲಿಂಕ್ ಇತ್ತಾ ಎಂಬ ಸಂದೇಹ ಮೂಡುವಂತಿದೆ. ಟ್ರೇಲರ್‌ನಲ್ಲಿ ಸಂಭಾಷಣೆ ರೂಪದಲ್ಲಿ
ಮಾಜಿ ಮುಖ್ಯಮಂತ್ರಿಗಳ ಹೆಸರನ್ನು ಸ್ವಲ್ಪ ಬದಲಾಯಿಸಿ ಹೇಳಲಾಗಿದೆ.
ಹೊಸ ಸುದ್ದಿ ಎಂಬಂತೆ ಕ್ರೀಮ್ ಚಿತ್ರದಲ್ಲಿ ಅಗ್ನಿ ಶ್ರೀಧರ್ ಅವರು ಒಂದು ಪ್ರಮುಖ ಪಾತ್ರ ಮಾಡಿದ್ದಾರೆ ಎನ್ನಲಾಗಿದೆ. ಮೊಟ್ಟಮೊದಲ ಬಾರಿಗೆ ಅಗ್ನಿ ಶ್ರೀಧರ್ ಅವರು ಬಣ್ಣ ಹಚ್ಚಿ ಕ್ಯಾಮರಾ ಮುಂದೆ ನಿಂತಿದ್ದು, ಈ ಬೆಳವಣಿಗೆ ಸ್ವತಃ ಕ್ರೀಂ ಚಿತ್ರತಂಡಕ್ಕೆ ಕೂಡ ಅಚ್ಚರಿ ಹುಟ್ಟಿಸಿದೆ ಎನ್ನಲಾಗಿದೆ. ಅಷ್ಟಕ್ಕೂ ಅಗ್ನಿ ಶ್ರೀಧರ್ ಅವರು ಪಾತ್ರ ಮಾಡುವುದಕ್ಕೆ ಒಪ್ಪಿಕೊಂಡಿದ್ದಾದರೂ ಹೇಗೆ? ಕೇಳಿದ ತಕ್ಷಣ ಒಪ್ಪಿಕೊಂಡರಾ? ಯಾರು ಅವರನ್ನು ಒಪ್ಪಿಸಿದ್ದು? ಮುಂತಾದ ಪ್ರಶ್ನೆಗಳಿಗೆ ಸೂಕ್ತ ಉತ್ತರ ದೊರಕಿದೆ.
ಪ್ರತಿ ಅಮಾವಾಸ್ಯೆಗೆ 15 ಮಕ್ಕಳ ನರಬಲಿ; ರವಿಶಂಕರ್ ಗುರೂಜಿ ಬಗ್ಗೆ ಹೇಳಿದ್ರಾ ಅಗ್ನಿ ಶ್ರೀಧರ್!?
ಈ ಬಗ್ಗೆ ಅಗ್ನಿ ಶ್ರೀಧರ್ ಅವರು 'ನಾನು ಮಾಡುವ ಪಾತ್ರವನ್ನ ಬೇರೆಯವರು ಮಾಡಬೇಕಿತ್ತು; ಆದ್ರೆ ಆ ಕಲಾವಿದರು ನಮ್ಮ ಟೈಮ್ ಗೆ ಬರ್ಲಿಲ್ಲ.. ಶೂಟಿಂಗ್‌ಗೆ ಎಲ್ಲವೂ ರೆಡಿಯಾಗಿಬಿಟ್ಟಿತ್ತು. ಆದ್ರೆ ನಮ್ಮ ಚಿತ್ರತಂಡದ ಎಲ್ಲಾ ಸೇರಿ ನನಗೆ ಒತ್ತಾಯ ಮಾಡಿ ನಾನು ಪಾತ್ರ ಮಾಡಲು ಒಪ್ಪಿಸಿದ್ರು. ನನ್ನ ತಾಯಿ ಸಮಾನ ಅಕ್ಕನಿಗೆ ಫೋನ್ ನಲ್ಲಿ ಕೇಳಿದಾಗ ಅವ್ರು ಮಾಡು ಅಂತ ಒಪ್ಪಿಸಿದ್ರು..ನನ್ನ ತಮ್ಮನ ಮಗ ರೋಷನ್ ನಾನು ಪಾತ್ರ ಮಾಡೋದು ಬೇಡ ಅಂತ ಅತ್ತು ಬಿಟ್ಟ..ಆದ್ರೆ ರೋಷನ್ ಗೆ ಕನ್ವಿನ್ಸ್ ಮಾಡಿ ಒಪ್ಪಿಸಿದೆ..' ಎಂದಿದ್ದಾರೆ ಅಗ್ನಿ ಶ್ರೀಧರ್.
ಅಗ್ನಿ ಶ್ರೀಧರ್ 'ಕ್ರೀಂ' ನೈಜ ಕಥೆಯ ಸಿನಿಮಾ; ರಾಜಕೀಯದಲ್ಲೂ ಸೃಷ್ಟಿಸಲಿದೆಯಾ ಅಲ್ಲೋಲಕಲ್ಲೋಲ..!?
ಈ ಬಗ್ಗೆ ನಿರ್ದೇಶಕ ಅಭಿಷೇಕ್ ಬಸಂತ್ 'ಶ್ರೀಧರ್ ಅಣ್ಣ ಈ ಚಿತ್ರದಲ್ಲಿ ಮಾಡಿರೋದ್ರಿಂದ ಇಲ್ಲಿವರೆಗೂ ಬಂದು ನಿಂತಿದೆ. ಬಚ್ಚನ್ ಸರ್ ಬೇಗ ಬಾ ಅಂದ್ರು ಒಮ್ಮೆ.. ಒಂದು ಅಚಾತುರ್ಯ ನಡೆದಿದೆ ಅಂದ್ರು.. 80% ಸೆಟ್ ರೆಡಿ ಆಗಿದೆ.. ಆದರೆ, ಪಾತ್ರ ಮಾಡಬೇಕಿದ್ದ ಕಲಾವಿದ ಬಂದಿರಲಿಲ್ಲ. ಬೇರೆ ಯಾರನ್ನೂ ಕರೆಯುವುದು ಬೇಡ, ಆ ಪಾತ್ರವನ್ನು ಅಗ್ನಿ ಶ್ರೀಧರ್ ಅವರೇ ಮಾಡ್ಬೇಕು ಅಂದೆ.. ನೀವು ಮಾಡಿಲ್ಲ ಅಂದ್ರೆ ಸಿನಿಮಾ ನಿಂತೋಗಲಿ ಅಂದೆ.. ಐದು ಗಂಟೆಯ ಚರ್ಚೆಗಳ ಬಳಿಕವೂ ಯಾರೂ ಒಪ್ಪಲಿಲ್ಲ. ಆದ್ರೆ ಕೊನೆಗೆ ಬಚ್ಚನ್ ಅಣ್ಣ ಸಹಾಯದಿಂದ ಒಪ್ಪಿಸಿದೆ. ಒಂದು ಕೋಟಿ ರೂಪಾಯಿ ಸೆಟ್ ರೆಡಿ ಆಗಿಬಿಟ್ಟಿತ್ತು. ಶ್ರೀಧರ್ ಅಣ್ಣ ಒಪ್ಪಿದ ಕೂಡಲೇ ನಾ ಗೆದ್ದೆ' ಎಂದಿದ್ದಾರೆ.
ಚಿನ್ನದಂಥ ಮಾತು ಹೇಳಿದ್ರು ನಟ ಚಿಕ್ಕಣ್ಣ; ಹೊಡಿರಲೇ ಚಪ್ಪಾಳೆ ಎಂದ್ಬಿಟ್ರು ಅಲ್ಲಿದ್ದ ರೈತ!