Asianet Suvarna News Asianet Suvarna News

ಪ್ರತಿ ಅಮಾವಾಸ್ಯೆಗೆ 15 ಮಕ್ಕಳ ನರಬಲಿ; ಹೊಸ ಪಿಕ್ಚರ್ ಬಗ್ಗೆ ಏನು ಹೇಳಿದ್ರು ಅಗ್ನಿ ಶ್ರೀಧರ್!?

ದೊಡ್ಡ ಗೌಡ್ರುಗಳು ಅಂದ್ರೆ ಯಾರು..? ಈಗಿನ ನಾಯಕರೂ ಕೂಡ ನರಬಲಿ ಕೊಟ್ಟು ಅಧಿಕಾರಕ್ಕೆ ಬಂದ್ರಾ..? ಈ ಎಲ್ಲ ಪ್ರಶ್ನೆಗಳಿಗೆ ಸೂಕ್ಷ್ಮವಾಗಿ ಉತ್ತರ ಕೊಡುವ ಪ್ರಯತ್ನ ಮಾಡಿರುವ ಅಗ್ನಿ ಶ್ರೀಧರ್ ಅವರು, ಮಾಜಿ ಸಿಎಂ ಹೆಸರುಗಳನ್ನ ಪರೋಕ್ಷವಾಗಿ ಬಳಸಿದ್ದಕ್ಕೆ ಅಗ್ನಿ ಶ್ರೀಧರ್ ಪ್ರತಿಕ್ರಿಯೆ ಕೂಡ ಕೊಟ್ಟಿದ್ದಾರೆ. 

Agni Shridhar talks about Ravi Shankar Guruji indirectly for his Kreem Movie story srb
Author
First Published Feb 16, 2024, 7:51 PM IST

ಕಿರಿಕ್ ಪಾರ್ಟಿ ಖ್ಯಾತಿಯ ನಟಿ ಸಂಯುಕ್ತಾ ಹೆಗಡೆ ನಟನೆ, ಅಭಿಷೇಕ್ ಬಸಂತ್ ನಿರ್ದೇಶನದ 'ಕ್ರೀಂ' ಚಿತ್ರದ ಟ್ರೇಲರ್ ಒಂದು ದಿನದ ಹಿಂದಷ್ಟೇ  ಬಿಡುಗಡೆಯಾಗಿದೆ. ನೋಡಿದರೆ ಈ ಟ್ರೇಲರ್ ಭಯಂಕರವಾದ ಸೀಕ್ರೆಟ್‌ಅನ್ನು ಹೊರತೆಗೆಯಲಿರುವ 'ಅಸ್ತ್ರ'ದಂತೆ ಕಾಣಿಸುತ್ತಿದೆ ಎನ್ನಬಹುದು. ಅಗ್ನಿ ಶ್ರೀಧರ್ ಕಥೆ-ಚಿತ್ರಕತೆ-ಸಂಭಾಷಣೆ ಬರೆದಿದ್ದು, ಅಭಿಷೇಕ್ ಬಸಂತ್ ಅವರ ನಿರ್ದೇಶನದಲ್ಲಿ ಕ್ರೀ ಚಿತ್ರ  ಮೂಡಿ ಬಂದಿದೆ. ಇದೊಂದು ನೈಜ ಕಥೆ ಆಧಾರಿತ ಸಿನಿಮಾ ಎನ್ನಲಾಗಿದೆ. ಈ ಚಿತ್ರದಲ್ಲಿ ಸ್ವತಃ ಅಗ್ನಿ ಶ್ರೀಧರ್ ಮೊಟ್ಟಮೊದಲ ಬಾರಿಗೆ ನಟಿಸಿದ್ದಾರಂತೆ. 

ಎಲ್ಲಕ್ಕಿಂತ ಅಚ್ಚರಿಯ ಸಂಗತಿಯೊಂದನ್ನು ಕ್ರೀಂ ಚಿತ್ರದ ಕಥೆ ಬರೆದಿರುವ ಅಗ್ನಿ ಶ್ರೀಧರ್ ಅವರು ಚಿತ್ರದ ಪ್ರೆಸ್‌ಮೀಟ್‌ನಲ್ಲಿ ಪರೋಕ್ಷವಾಗಿ ಹೇಳಿಕೊಂಡಿದ್ದು ತೀವ್ರ ಅಚ್ಚರಿಗೆ ಕಾರಣವಾಗಿದೆ. ಕ್ರೀಂ ಸಿನಿಮಾ ನರಬಲಿಗೆ ಸಂಬಂಧಪಟ್ಟ ಕಥೆಯನ್ನು ಹೊಂದಿದ್ದು ಇದು ಹಲವು ಮಾಜಿ ರಾಜಕೀಯ ನಾಯಕರುಗಳನ್ನು ಸಹ ಸುತ್ತಿಕೊಂಡಿದೆ ಎನ್ನಲಾಗಿದೆ. ಹಾಗಿದ್ದರೆ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ದೇವರಾಜ್ ಹೆಗ್ಡೆ, ರಾಮಕೃಷ್ಣ ಅರಸ್, ಹೇಮಚಂದ್ರ ಪಾಟೀಲ್, ದೊಡ್ಡೇಗೌಡ್ರು ಅಧಿಕಾರಕ್ಕೆ ಬರೋಕೆ ನರಬಲಿ ಕೊಟ್ಟಿದ್ರಾ? 

ಅಗ್ನಿ ಶ್ರೀಧರ್ 'ಕ್ರೀಂ' ನೈಜ ಕಥೆಯ ಸಿನಿಮಾ; ರಾಜಕೀಯದಲ್ಲೂ ಸೃಷ್ಟಿಸಲಿದೆಯಾ ಅಲ್ಲೋಲಕಲ್ಲೋಲ..!?

ದೊಡ್ಡ ಗೌಡ್ರುಗಳು ಅಂದ್ರೆ ಯಾರು..? ಈಗಿನ ನಾಯಕರೂ ಕೂಡ ನರಬಲಿ ಕೊಟ್ಟು ಅಧಿಕಾರಕ್ಕೆ ಬಂದ್ರಾ..? ಈ ಎಲ್ಲ ಪ್ರಶ್ನೆಗಳಿಗೆ ಸೂಕ್ಷ್ಮವಾಗಿ ಉತ್ತರ ಕೊಡುವ ಪ್ರಯತ್ನ ಮಾಡಿರುವ ಅಗ್ನಿ ಶ್ರೀಧರ್ ಅವರು, ಮಾಜಿ ಸಿಎಂ ಹೆಸರುಗಳನ್ನ ಪರೋಕ್ಷವಾಗಿ ಬಳಸಿದ್ದಕ್ಕೆ ಅಗ್ನಿ ಶ್ರೀಧರ್ ಪ್ರತಿಕ್ರಿಯೆ ಕೂಡ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, 'ನರ ಬಲಿ ಬಗ್ಗೆ ಹೌದು ಅಂದ್ರೆ ನಂಗೆ ಕೇಸ್ ಆಗುತ್ತದೆ; ಇಲ್ಲ ಅಂದ್ರೂ ನಾನು ಹೇಳಿದ್ದು ಸುಳ್ಳಾಗುತ್ತದೆ? ನೀವೇ ಡಿಸೈಡ್ ಮಾಡಿ..' ಎಂದು ಹೇಳಿದ್ದಾರೆ. 

ಚಿನ್ನದಂಥ ಮಾತು ಹೇಳಿದ್ರು ನಟ ಚಿಕ್ಕಣ್ಣ; ಹೊಡಿರಲೇ ಚಪ್ಪಾಳೆ ಎಂದ್ಬಿಟ್ರು ಅಲ್ಲಿದ್ದ ರೈತ!

ನರಬಲಿ ಬಗ್ಗೆ ಹೇಳಿದ ಅಗ್ನಿ ಶ್ರೀಧರ್ ಅವರು 'ಬೆಂಗಳೂರಿನಲ್ಲಿ ಪ್ರತಿ ಅಮವಾಸ್ಯೆಗೆ ಹದಿನೈದು ಮಕ್ಕಳನ್ನ ನರಬಲಿ ಕೊಡ್ತಾರೆ. ತಂದೆಯನ್ನು ಗೃಹ ಬಂಧನದಲ್ಲಿ ಇಟ್ಟಂಥ ಆ ಗುರುಜೀ ಯಾರು? ಕನಕಪುರ ರಸ್ತೆಯಲ್ಲಿ ಇರುವ ಆ ಆಶ್ರಮದ ಗುರುಜಿ ಅವ್ರು ಅನ್ನೋದನ್ನ ನಾನು ಬಿಡಿಸಿ ಹೇಳಬೇಕಿಲ್ಲ..' ಎಂದು ಹೇಳುವ ಮೂಲಕ ಅಗ್ನಿ ಶ್ರೀಧರ್ ಅವರುತಮ್ಮದೇ ಬರವಣಿಗೆಯ 'ಕ್ರೀಂ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ  ಹೊಸ ಚಿತ್ರದ ಸುಳಿವು ನೀಡಿದ್ದಾರೆ. 

'ಕಿರಿಕ್ ಪಾರ್ಟಿ' ಸಂಯುಕ್ತಾ ಹೆಗಡೆ 'ಕ್ರೀಂ' ಚಿತ್ರದಲ್ಲಿ ಅಗ್ನಿ ಶ್ರೀಧರ್ ನಟನೆ; ಒಪ್ಪಿಸಿದ್ದು ಯಾರು ದೇವ್ರೂ!

Follow Us:
Download App:
  • android
  • ios