ತಾಯಿ ಜೊತೆ ಮನೆಯಲ್ಲಿ ಸಮಯ ಕಳೆದ ಅದಿತಿ ಪ್ರಭುದೇವ. ನನ್ನಲ್ಲಿ ಏನಾದರೂ ಬದಲಾವಣೆ ಮಾಡಿಕೊಳ್ಳಬೇಕಾ? ಪ್ರಶ್ನಿಸಿದಾಗ ಸಿಕ್ಕ ಉತ್ತರವಿದು...
ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಅದಿತಿ ಪ್ರಭುದೇವ ಮತ್ತು ಉದ್ಯಮಿ ಯಶಸ್ ವೈವಾಹಿಕ ಜೀವನಕ್ಕೆ ಕಾಲಿಟ್ಟು ಎರಡು ತಿಂಗಳು ಕಳೆದಿದೆ. ಸಿನಿಮಾ, ಫ್ಯಾಮಿಲಿ ಹಾಗೂ ಮನೆ ಶಿಫ್ಟಿಂಗ್ ಅಂತ ಬ್ಯುಸಿಯಾಗಿದ್ದ ಅದಿತಿ ತಾಯಿ ಜೊತೆ ಸ್ಪೇಷಲ್ ಸೂಪ್ ಮಾಡಿಕೊಂಡು ಸಮಯ ಕಳೆದಿದ್ದಾರೆ. ಈ ವೇಳೆ ನೆಟ್ಟಿಗರು ಕೇಳುವ 'ಬದಲಾಗಿದ್ದೀರಾ?' ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.
'ತಾಯಿ ಜೊತೆ ಪುಟ್ಟ ಚಿಟ್‌ಚಾಟ್ ಮಾಡುತ್ತಿರುವೆ. ತುಂಬಾ ಜನ ಹೆಣ್ಣು ಮಕ್ಕಳಿಗೆ ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ತಾಯಂದಿರು ಸಲಹೆ ಸೂಚನೆಗಳನ್ನು ಕೊಡುತ್ತಾರೆ. ಹಾಗೆ ಮಾಡಬೇಡ ಹೀಗೆ ಮಾಡು ಅಂತ ಹೇಳಿ ಕಳುಹಿಸುತ್ತಾರೆ ಆದರೆ ನನ್ನ ಅಮ್ಮ ನನಗೆ ಏನೂ ಹೇಳಿಲ್ಲ. ಮದುವೆಯಾಗಿ 2 ತಿಂಗಳು ಕಳೆದಿದೆ ಅದಿಕ್ಕೆ ಈಗ ಕೇಳುತ್ತಿರುವ ನೀವು ನನಗೆ ಏನಾದರೂ ಸಲಹೆ ಕೊಡಬೇಕು ಅಂತಿದ್ದರೆ ಏನು ಹೇಳುತ್ತೀರಾ?' ಎಂದು ಅದಿತಿ ಪ್ರಭುದೇವ ತಾಯಿ ಜೊತೆ ಅಡುಗೆ ಮನೆಯಲ್ಲಿ ಮಾತನಾಡುತ್ತಿರುತ್ತಾರೆ. 'ನನ್ನ ಮಗಳಿಗೆ ನಾನು ಯಾವ ಸಲಹೆನೂ ಕೊಡುವುದಿಲ್ಲ. ಇಂಡಸ್ಟ್ರಿಗೆ ಬರುವಾಗ ಏನೂ ಸಲಹೆ ಕೊಟ್ಟಿಲ್ಲ ನೀನು ಹೇಗಿದ್ಯಾ ಹಾಗೆ ಇರಮ್ಮ ಅಂತ ಹೇಳಿದೆ. ಈಗಲೂ ನೀನು ಹೇಗೆ ಇರ್ತೀಯಾ ಹಾಗೆ ಇರು. ಸಲಹೆ ಕೊಡುವುದು ಏನೂ ಇಲ್ಲ' ಎಂದು ಅದಿತಿ ತಾಯಿ ಹೇಳುತ್ತಾರೆ.
ಬ್ಯಾಂಕ್ ಲೋನ್‌ನಿಂದ ಖರೀದಿಸಿದ ಸ್ವಂತ ಮನೆಗೆ ಟುಲೆಟ್ ಬೋರ್ಡ್ ಹಾಕಿದ ನಟಿ ಅದಿತಿ ಪ್ರಭುದೇವ; ಕಾರಣವೇನು?
ಮದುವೆ ಮೊದಲು ನನ್ನನ್ನು ನೋಡಿದ್ದೀರಿ ಮದುವೆ ಆದ್ಮೇಲೂ ನನ್ನನ್ನು ನೋಡುತ್ತಿದ್ದೀರಿ. ತುಂಬಾ ಜನರು ನನ್ನನ್ನು ಕೇಳುತ್ತಾರೆ ಏನು ಬದಲಾವಣೆಗಳು ಇದೆ ನಿಮ್ಮ ಲೈಫಲ್ಲಿ ಅಂತ. ವೈಯಕ್ತಿಕವಾಗಿ ನನಗೆ ಯಾವ ಬದಲಾವಣೆ ಕಾಣಿಸಿಲ್ಲ. ತಾಯಿಯಾಗಿ ನಿಮ್ಮ ಪ್ರಕಾರ ನಾನು ಏನಾದರೂ ಬದಲಾಯಿಸಿಕೊಳ್ಳಬೇಕು ಅಂತಿದ್ದರೆ ನೀವು ನನಗೆ ಯಾವ ವಿಚಾರದಲ್ಲಿ ಬದಲಾಗಬೇಕು ಎಂದು ಹೇಳುತ್ತೀರಾ?' ಎಂದು ತಾಯಿಗೆ ಅದಿತಿ ಮರು ಪ್ರಶ್ನೆ ಮಾಡಿದ್ದಾರೆ. 'ನೀನು ಏನೂ ಬದಲಾಗಿಲ್ಲ. ಮದುವೆ ಮುನ್ನ ನೀನು ಹೈಪರ್ ಆಕ್ಟಿವ್ ಆಗಿದ್ದೆ ಈಗ ಹೈಪರ್ ಕಡಿಮೆ ಮಾಡಿ ಆಕ್ಟಿವ್ ಆಗಿರು ಅಷ್ಟೆ. ಆರಾಮ್ ಆಗಿರು' ಎಂದು ಅದಿತಿ ತಾಯಿ ಹೇಳಿದ್ದಾರೆ.
ಸಿನಿಮಾ ಶೂಟಿಂಗ್, ಮ್ಯಾರಿಡ್ ಲೈಫ್ ಅಂತ ಬ್ಯುಸಿಯಾಗಿದ್ದ ಅದಿತಿ ಬಿಡುವು ಮಾಡಿಕೊಂಡು ತಾಯಿ ಜೊತೆ ಸಮಯ ಕಳೆದಿದ್ದಾರೆ. 'ನಾನು ಅಮ್ಮ ಹೊರಗಡೆ ಓಡಾಡುವಾಗ 10-15 ಜನರು ಬಂದು ಮಾತನಾಡಿಸಿದ್ದರು. ಅಮ್ಮ ತುಂಬಾ ಖುಷಿ ಪಟ್ಟರು. ನೀವೆಲ್ಲರೂ ಇಷ್ಟೊಂದು ಪ್ರೀತಿ ಕೊಡುತ್ತಿರುವುದನ್ನು ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ' ಎಂದು ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳುತ್ತಾರೆ. ಅಲ್ಲದೆ ಅದಿತಿ ತುಂಬಾ ಮೆನ ಮದ್ದು ಪ್ರಯೋಗ ಮಾಡುವ ಕಾರಣ ಒಂದು ಸಿಂಪಲ್ ಮದ್ದು ಹೇಳುವಂತೆ ತಾಯಿಗೆ ಮನವಿ ಮಾಡಿಕೊಳ್ಳುತ್ತಾರೆ.
ಕೋಟ್ಯಾಧಿಪತಿ ಹೆಂಡತಿ ಅದಿತಿ ಪ್ರಭುದೇವ?; ಕೊಂಕು ಮಾಡುವವರಿಗೆ ಉತ್ತರ ಕೊಟ್ಟ ನಟಿ
ಮನೆ ಮದ್ದು:
'ನನಗೆ ಹಿಮ್ಮಡಿ ತುಂಬಾ ನೋವಿತ್ತು ಯಾವ ಮಾತ್ರ ತೆಗೆದುಕೊಳ್ಳಬೇಕು ಗೊತ್ತಿರಲಿಲ್ಲ. ಅಳುವಷ್ಟು ನೋವು ಬರುತ್ತಿತ್ತು. ಆಗ ಕಪ್ಪುಎಳ್ಳು ಅಥವಾ ಬಿಳಿ ಎಳ್ಳುನ್ನು ರಾತ್ರಿ ನೀರಿನಲ್ಲಿ ನೆನೆಸಿ ಸುಮಾರು 30 ದಿನಗಳ ಕಾಲ ಸೇವಿಸಿದೆ. 2 ಅಥವಾ 3 ಸ್ಪೂನ್ ಎಳ್ಳು ಮಾತ್ರ ಬಳಸಬೇಕು. ನೋವು ನನಗೆ ಇತ್ತು ಅನ್ನೋದೇ ಮರೆತು ಬಿಟ್ಟೆ. ಹೆಣ್ಣು ಮಕ್ಕಳಿ ಕ್ಯಾಲ್ಸಿಎಂ ಕೊರತೆ ತುಂಬಾ ಇರುತ್ತದೆ. ತಮ್ಮ ಬಗ್ಗೆ ತಾವು ಕಾಳಜಿ ತೆಗೆದುಕೊಳ್ಳುವುದಿಲ್ಲ ಆಗ ನೀವು ಎಳ್ಳು ನೆನೆಸಿ ಕಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಆರೋಗ್ಯ ಚೆನ್ನಾಗಿ ಆಗುತ್ತದೆ' ಎಂದು ಅದಿತಿ ತಾಯಿ ಮನೆ ಮದ್ದು ಹಂಚಿಕೊಂಡಿದ್ದಾರೆ.

