Asianet Suvarna News Asianet Suvarna News

ಬ್ಯಾಂಕ್‌ ಲೋನ್‌ನಿಂದ ಖರೀದಿಸಿದ ಸ್ವಂತ ಮನೆಗೆ ಟುಲೆಟ್‌ ಬೋರ್ಡ್‌ ಹಾಕಿದ ನಟಿ ಅದಿತಿ ಪ್ರಭುದೇವ; ಕಾರಣವೇನು?

ಕನಸಿನ ಮನೆ ಮಾರಾಟ ಮಾಡಲು ಮುಂದಾದ ನಟಿ ಅದಿತಿ ಪ್ರಭುದೇವ. ಹೋಮ್ ಟೂರ್‌ ಮಾಡುವ ಮೂಲಕ ಟುಲೆಟ್‌ ಬೋರ್ಡ್‌ ಹಾಕಿದ ನಟಿ....

Aditi Prabhudeva does home tour of her own purchased house vcs
Author
First Published Feb 9, 2023, 4:24 PM IST | Last Updated Feb 9, 2023, 4:24 PM IST

ಸ್ಯಾಂಡಲ್‌ವುಡ್‌ ಕ್ಯೂಟ್‌ ಡಾಲ್ ಅದಿತಿ ಪ್ರಭುದೇವ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಿನಿಮಾ ಶೂಟಿಂಗ್, ಯೂಟ್ಯೂಬ್ ಶೂಟಿಂಗ್, ಮನೆ ಕೆಲಸ, ಕಥೆ ಕೇಳುವುದು ಹೀಗೆ .... ಏನೇ ಇದ್ದರೂ ತುಂಬಾ ಟ್ರಾನ್ಸ್‌ಪರೆಂಟ್‌ ಆಗಿ ಅಭಿಮಾನಿಗಳ ಜೊತೆ ಹಂಚಿಕೊಳ್ಳುವ ಅದಿತಿ ಈಗ ಸ್ವಂತ ಮನೆ ಮಾರಾಟ ಮಾಡಲು ಮುಂದಾಗಿದ್ದಾರೆ. ಮದುವೆ ಆದ ಮೇಲೆ ಗಂಡ ಮನೆಯಲ್ಲಿರುವ ಕಾರಣ ಈ ಮನೆಯನ್ನು ಬಾಡಿಗೆಗೆ ಕೊಡಲು ನಿರ್ಧಾರ ಮಾಡಿ ಕೊನೆ ಸಲ ಹೋಮ್ ಟೂರ್ ಮಾಡಬೇಕು ನಿರ್ಧರಿಸಿದ್ದಾರೆ.

'ಪ್ರತಿಯೊಬ್ಬ ಮನುಷ್ಯ, ಮಧ್ಯಮ ವರ್ಗ ಆಗಿರಲಿ ಕೆಳ ಮಧ್ಯಮ ವರ್ಗದವರಾಗಿರಲಿ ಒಂದು ಕನಸು ಕಂಡಿರುತ್ತಾರೆ ಅದು ಮನೆ ಖರೀದಿಸಬೇಕೆಂದು. ಈ ಭೂಮಿ ಮೇಲೆ ಗುಬ್ಬಿ ಕಾಗೆ ಯಾಕೆ ಜೇಡರ ಹುಳ ಕೂಡ ಅದರದ್ದೇ ಒಂದು ಗೂಡು ಕಟ್ಟಿಕೊಳ್ಳುತ್ತದೆ. ಇನ್ನು ಮನುಷ್ಯನಿಗೆ ಎಷ್ಟು ಕಲ್ಪನೆಗಳು ಇರುತ್ತದೆ? ನನಗೂ ಕೂಡ ಪುಟ್ಟ ವಯಸ್ಸಿನಿಂದ ನನ್ನದು ಅಂತ ಒಂದು ಪುಟ್ಟ ಗೂಡು ಮಾಡಿಕೊಳ್ಳಬೇಕು ಅನ್ನೋ ಆಸೆ ತುಂಬಾ ಇತ್ತು. ಆ ಪ್ರಾಸೆಸ್‌ ಹೇಗಿತ್ತು ಎಂದು ಮೊದಲ ಸಲ ನಿಮ್ಮ ಜೊತೆ ಹಂಚಿಕೊಳ್ಳುತ್ತಿರುವೆ' ಎಂದು ಹೇಳುವ ಮೂಲಕ ಅದಿತಿ ಮನೆ ಟೂರ್ ವಿಡಿಯೋ ಆರಂಭಿಸಿದ್ದಾರೆ.

ಕೋಟ್ಯಾಧಿಪತಿ ಹೆಂಡತಿ ಅದಿತಿ ಪ್ರಭುದೇವ?; ಕೊಂಕು ಮಾಡುವವರಿಗೆ ಉತ್ತರ ಕೊಟ್ಟ ನಟಿ

'ನಿಜ ಹೇಳಬೇಕು ಅಂದ್ರೆ ನನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾಡಲೇ ಬಾರದು ಅಂದುಕೊಂಡಿದ ವಿಡಿಯೋ ಅಂದ್ರೆ ಹೋಮ್‌ ಟೂರ್. ನಾವು ಇರುವಂತ ಜಾಗ ನಮ್ಮ ಪ್ರೈವಸಿಗೆ ದಕ್ಕೆ ಆಗುತ್ತೆ ಅಂತ ಮಾಡಿರಲಿಲ್ಲ ಆದರೆ ಎರಡು ತಿಂಗಳ ನಂತರ ಈ ಮನೆಗೆ ಕಾಲಿಟ್ಟಿರುವೆ. ಗಂಡನ ಮನೆಗೆ ಹೋಗಿರುವ ಕಾರಣ ಈ ಸ್ವಂತ ಮನೆಯನ್ನು ಬಾಡಿಗೆ ಕೊಡಲು ನಿರ್ಧಾರ ಮಾಡಿರುವೆ. ಮನೆಯಲ್ಲಿರುವ ಸಾಮಾನುಗಳನ್ನು ಸಂಬಂಧಿಕರು ಮತ್ತು ಸ್ನೇಹಿತರಿಗೆ ಸಾಗಿಸುತ್ತಿದ್ದೀವಿ' ಎಂದು ಅದಿತಿ ಹೇಳಿದ್ದಾರೆ.

'ನಾನು ಈ ಮನೆ ಖರೀದಿಸಿ ಸುಮಾರು 2 ವರ್ಷಗಳಾಯ್ತು. ಲೋನ್‌ನಿಂದ ಈ ಮನೆ ಖರೀದಿಸಿದ್ದು ಏಕೆಂದರೆ ಹೌಸಿಂಗ್ ಲೋನ್‌ ಅಂದ್ರೆ ಕಡಿಮೆ ಬಡ್ಡಿಗೆ ಲೋನ್ ಸಿಗುತ್ತದೆ. ಮನೆ ಖರೀದಿಸುವುದರ ಬಗ್ಗೆ ನನಗೆ ಎಷ್ಟು ಕ್ರೇಜ್ ಇತ್ತು ಎಂದು ನಾನು ಹೇಳುವೆ. ತುಂಬಾ ಜನ ಹೇಳುವರು ಏನ್ ಮೇಡಂ ನೀವು ಹೀರೋಯಿನ್‌ ಆಗಿ ಪ್ರೊಡಕ್ಷನ್ ಗಾಡಿಯಲ್ಲಿ ಬರ್ತೀರಾ ಓಲಾ ಮತ್ತು ಉಬರ್ ಬಳಸುತ್ತೀರಾ ಎಂದು. ಜೀವನದಲ್ಲಿ ನಾನು ತುಂಬಾ ಖುಷಿಯಾಗಿ ಯಾಕೆ ಇರುತ್ತೀನಿ ಅಂದ್ರೆ ಬೇರೆ ಅವರು ಏನು ಬೇಕಿದ್ದರೂ ಮಾತನಾಡಲಿ ಅದನ್ನ ತಲೆಗೆ ಹಾಕಿಕೊಳ್ಳುವುದಿಲ್ಲ  ಅದು ಯಾವುದೇ ವಿಚಾರ ಆಗಿರಲಿ. ನಮ್ಮ ಪರಿಸ್ಥಿತಿ ನಮ್ಮ ಕನಸುಗಳ ಬಗ್ಗೆ ನಮಗೆ ಮಾತ್ರ ಸರಿಯಾಗಿ ಗೊತ್ತಿರುತ್ತದೆ. ಒಂದು ಕಾರು ಖರೀದಿಸಿದರೆ ಕನಿಷ್ಠ 10 ಲಕ್ಷ ಹಣ ಬೇಕು ಆ ಬಜೆಟ್‌ ಮುಂದಕ್ಕೆ ಅದರ ಬೆಲೆ ಕಡಿಮೆ ಆಗುತ್ತದೆ. ಕಾರು ಖರೀದಿಸಿದರೆ ರಿಪೇರಿ ಪೆಟ್ರೋಲ್‌ ಅದು ಇದು ಖರ್ಚು ಬರುತ್ತಿತ್ತು. ನನಗೆ ಎಷ್ಟು ಸಾಧ್ಯ ಅದಕ್ಕೆ ಅನುಗುಣವಾಗಿ ಒಂದು ಮನೆ ತೆಗೆದುಕೊಳ್ಳಬೇಕು ಅಂತ ಮನೆ ಖರೀದಿಸಿದೆ. ಎಷ್ಟು ಸಾಧವಾಗುತ್ತದೆ ಅಷ್ಟು ಹಣ ಉಳಿಸಿ ಉಳಿಸಿ ಖರೀದಿ ಮಾಡಿದ ಮನೆ ಇದು. ಕೆಲವರಿಗೆ ಬೇಗ ಸಾಧ್ಯವಾಗುತ್ತದೆ ಕೆಲವರಿಗೆ ತಡವಾಗುತ್ತದೆ. ಮನೆ ಮತ್ತು ಮದುವೆ ಅನ್ನೋದು ಋಣ ಎಂದು ಗೊತ್ತಾಗುತ್ತದೆ. ನಾನು ಖುಷಿಯಾಗಿ ಇದ್ದಂತ ಮನೆ ಇದು.' ಎಂದು ಮಾತನಾಡಿದ್ದಾರೆ.

ಅದಿತಿ ಪ್ರಭುದೇವ ಮದುವೆಗೆ ರಣವೀರ್ ಸಿಂಗ್ ಡಿಸೈನರ್?; ಕಾಲೆಳೆದ ನೆಟ್ಟಿಗರಿಗೆ ಉತ್ತರ ಕೊಟ್ಟ ನಟಿ

'ಮನೆ ಖರೀದಿಸುವ ಸಮಯದಲ್ಲಿ ದುರಾಸ ಜನರಿರುತ್ತಾರೆ. ಇಷ್ಟು ಕಡಿಮೆಗೆ ಸಿಗುತ್ತದೆ ಇಷ್ಟು ಹೆಚ್ಚಿಗೆ ಸಿಗುತ್ತದೆ ಎಂದು ಹೇಳುವವರಿದ್ದಾರೆ. ದಯವಿಟ್ಟು ಡಾಕ್ಯೂಮೆಂಟ್‌ಗಳನ್ನು ಸರಿಯಾಗಿ ಚೆಕ್ ಮಾಡಿ. ಬ್ಯಾಂಕ್‌ಗಳ ಮೂಲಕ ಲೋನ್‌ ಮೂಲಕ ಮುಂದೆ ಕೆಲಸ ಶುರು ಮಾಡಿ. ಯಾರು ಏನೇ ಸಲಹೆ ಕೊಟ್ಟರೂ ನಮ್ಮ ಬದುಕಿಗೆ ಸರಿಯಾಗಿ ಹೊಂದುತ್ತಾ ಎಂದು ಯೋಚನೆ ಮಾಡಿ. ದುಡ್ಡಿರುವವರ ಬಳಿ ಮಾತ್ರ ದುಡ್ಡು ಸೇರುತ್ತದೆ ಎನ್ನುತ್ತಾರೆ ಅದು ಸುಳ್ಳು ಕ್ರಿಯೇಟಿವಿಟಿ ಇರುವವರ ಬಳಿ ಹಣ ಸೇರುತ್ತದೆ. ಚಿಕ್ಕದಾಗಲಿ ಸಣ್ಣದಾಗಲಿ ಯೂಟ್ಯೂಬ್ ಆಗಿ ರಸ್ತೆ ಬದಿಯಲ್ಲಿ ದೋಸೆ ಮಾಡಿಕೊಂಡು ದುಡಿಮೆ ಮಾಡಿದ್ದರೂ ಪರ್ವಾಗಿಲ್ಲ ಪ್ರಾಮಾಣಿಕವಾಗಿ ದುಡಿಯಬೇಕು' ಎಂದಿದ್ದಾರೆ ಅದಿತಿ. 

 

Latest Videos
Follow Us:
Download App:
  • android
  • ios