Asianet Suvarna News Asianet Suvarna News

ಕೆಲಸಕ್ಕಿಂತ ಪತಿ ಮುಖ್ಯ, ಪಾರ್ಟಿ ಗೀಟಿ ಮಾಡಲ್ಲ; ಪ್ರಯಾರಿಟಿ ಲಿಸ್ಟ್‌ ಬಿಚ್ಚಿಟ್ಟ ನಟಿ Aditi Prabhudeva

ಭಾವಿ ಪತಿ ಬಗ್ಗೆ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ಮಾತನಾಡಿದ ಅದಿತಿ ಪ್ರಭುದೇವ. ಪಾರ್ಟಿ ಮಾಡದಿರಲು ಕಾರಣವೇನೆಂದು ತಿಳಿಸಿದ್ದಾರೆ....

Aditi Prabhudeva shares her life priority list in ismart jodi reality show vcs
Author
First Published Sep 19, 2022, 2:51 PM IST

ಸ್ಟಾರ್ ಸುವರ್ಣ (Star Suvarna) ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋ ಫಿನಾಲೆ ದಿನ ಸ್ಯಾಂಡಲ್‌ವುಡ್ ಸಿಂಪಲ್ ಹುಡುಗಿ ಅದಿತಿ ಪ್ರಭುದೇವ ಸ್ಪೆಷಲ್ ಡ್ಯಾನ್ಸ್ ಮಾಡಿದ್ದಾರೆ. ಡ್ಯಾನ್ಸ್‌ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸ್ಪರ್ಧಿಗಳ ಜೊತೆ ಮಾತನಾಡಿ ದಾಂಪತ್ಯ ಜೀವನ ಹೇಗಿರುತ್ತೆ, ಏನೆಲ್ಲಾ ಫಾಲೋ ಮಾಡಬೇಕು ಯಾವುದಕ್ಕೆ ಹೆಚ್ಚು ಪ್ರಮುಖ್ಯತೆ ನೀಡಬೇಕು ಎಂದು ಚರ್ಚೆ ಮಾಡಿದ್ದಾರೆ. ಅಲ್ಲದೆ ವಿಡಿಯೋ ಕಾಲ್ ಮೂಲಕ ಭಾವಿ  ಯಶಸ್ ಮಾತನಾಡಿರುವುದನ್ನು ನೋಡಿ ಭಾವುಕರಾಗಿದ್ದಾರೆ.

'ಮದುವೆ ಜೀವನದಲ್ಲಿ ಗಂಡನನ್ನು ಸಂಪೂರ್ಣವಾಗಿ ನಂಬ ಬೇಕು' ಎಂದು ಹ್ಯಾರಿಯೆಟ್‌ ಅವರು ಸಲಹೆ ಕೊಟ್ಟಿದ್ದಾರೆ. 'ನನ್ನ ಜೀವನದಲ್ಲಿ ವೃತ್ತಿ ಜೀವನ ಪ್ರಯಾರಿಟಿಯಲ್ಲಿತ್ತು. ನಿಮ್ಮ ಜೀವನದಲ್ಲಿ ನಿಮ್ಮ ಗಂಡ ಪ್ರಯಾರಿಟಿ ಅಗಿರಲಿ. ಗಂಡ ಮೊದಲಿದ್ದರೆ ಎಲ್ಲ ಸರಿಯಾಗಿರುತ್ತದೆ' ಎಂದು ಸ್ವಪ್ನಾ ದೀಕ್ಷಿತ್ ಹೇಳಿದ್ದಾರೆ. 'ಒಬ್ಬ ಪಾಪದ ಹುಡುಗನನ್ನು ನೋಡಿ ಮದ್ವೆಯಾಗಿ. ಯಾವಾಗ ಸುಮ್ಮನಿರಬೇಕು ಯಾವಾಗ ಮಾತನಾಡಬೇಕು ಗೊತ್ತಿದೆ ಅಂದ್ರೆ ಜೀವನ ಸೂಪರ್ ಪಾಪದ ಹುಡುಗನನ್ನು ಮದ್ವೆಯಾಗಿ' ಎಂದು ಆರ್‌ಜೆ ಪುನೀತಾ ಹೇಳಿದ್ದಾರೆ.

Aditi Prabhudeva shares her life priority list in ismart jodi reality show vcs

ಅದಿತಿ ಮಾತು:

'ಒಂದು ವರ್ಷದಲ್ಲಿ ನಾನು ಮತ್ತು ನನ್ನ ಭಾವಿ ಪತಿ ಯಶಸ್ ಸಾಕಷ್ಟು ಅರ್ಥ ಮಾಡಿಕೊಂಡಿದ್ದೀವಿ. ನಾವಿಬ್ಬರೂ ಒಟ್ಟಿಗೆ ಹೆಚ್ಚಿಗೆ ಸಮಯ ಕಳೆದಿದ್ದೀವಿ. ಹೊರಗಡೆ ಹೋಗುವುದು ಸುತ್ತಾಡುವುದು ಊಟ ಮಾಡುವುದು ಅಷ್ಟೇ ಅಲ್ಲ ಅದು ಹೊರತಾಗಿ ನನ್ನ ಪರ್ಸನಲ್ ಆಯ್ಕೆಗಳ ಬಗ್ಗೆ ವೃತ್ತಿ ಜೀವನದ ಅವರ ಕನಸಿನ ಬಗ್ಗೆ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀವಿ' ಎಂದು ಹೇಳುವ ಅದಿತಿ ಪ್ರಭುದೇವ ಪ್ರಯಾರಿಟಿ ಲಿಸ್ಟ್‌ ರೆಡಿ ಮಾಡುತ್ತಾರೆ.ಜೀವನದಲ್ಲಿ ನಮಗೆ ಯಾವುದು ಮುಖ್ಯ ಎಂಬುದನ್ನು ಆರ್ಡರ್‌ನಲ್ಲಿ ಒಂದು ಸ್ಟ್ಯಾಂಡ್‌ ಮೇಲೆ ಅಂಟಿಸಬೇಕು. 

1. ಅಪ್ಪ-ಅಮ್ಮ
2. ಗಂಡ
3. ವೃತ್ತಿ ಜೀವನ
4. ಅತ್ತೆ-ಮಾವ
5.ಹಣ
6. ಮಕ್ಕಳು
7. ಪ್ರವಾಸ
8. ಸ್ನೇಹಿತರು
9. ಫೋನ್ 

ಈ ಆರ್ಡರ್‌ನಲ್ಲಿ ಅದಿತಿ ತಮ್ಮ ಜೀವನ ಆಯ್ಕೆ ಮಾಡಿಕೊಂಡಿದ್ದಾರೆ. ಆನಂತರ ವಿಡಿಯೋ ಕಾಲ್ ಮೂಲಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಅದಿತಿ ಅವರ ಪತಿ ಪ್ರಯಾರಿಟಿ ಬಗ್ಗೆ ಮಾತನಾಡಿದ್ದಾರೆ. ಇಬ್ಬರೂ ಒಂದೇ ಆಯ್ಕೆ ಮಾಡಿರುವುದು ಎಲ್ಲರಿಗೂ ಶಾಕ್ ತಂದಿದೆ. 'ವೃತ್ತಿ ಜೀವನ ತುಂಬಾ ಎಂಜಾಯ್ ಮಾಡುತ್ತಾಳೆ ಏನಾದರೂ ಒಂದು ಮಾಡಬೇಕು ಅನ್ನುತ್ತಾರೆ. ನಾವು ಮಾಡುವುದು ಹಲವರಿಗೆ ಸ್ಪೂರ್ತಿಯಾಗಬೇಕು ಅಂತಾಳೆ. ನಮ್ಮ ತಂದೆ ತಾಯಿಯನ್ನು ಅಯ್ಕೆ ಮಾಡುತ್ತಾಳೆ ಅಪ್ಪ ಅಮ್ಮ ಅಂತ ಕರೆಯುತ್ತಾಳೆ. ನಮ್ಮ ನಡುವೆ ಒಳ್ಳೆ ಹೊಂದಾಣಿಕೆ ಪ್ರೀತಿ ಇದೆ. ಹಣದಿಂದ ಆಕೆಗೆ ಒಳ್ಳೆಯ ಉದ್ದೇಶವಿದೆ. ಪ್ರಣಿಗಳನ್ನು ಸಾಕ ಬೇಕು ರಕ್ಷಣೆ ಮಾಡಬೇಕು ಅನ್ನೋ ಆಸೆ. ಮಕ್ಕಳು ಅಂದ್ರೆ ಅದಿತಿಗೆ ತುಂಬಾನೇ ಇಷ್ಟ ಮಗು ನೋಡಿದರೆ ಸಾಕು ಮುದ್ದಾಡುತ್ತಾಳೆ' ಎಂದು ವಿಡಿಯೋದಲ್ಲಿ ಮಾತನಾಡಿದ್ದಾರೆ.

Ismart Jodi ರಿಯಾಲಿಟಿ ಶೋ ಕಿರೀಟ ಗೆದ್ದ ಪುನೀತಾ- ಶ್ರೀರಾಮ್; ಕೈ ಸೇರಿತ್ತು 7 ಲಕ್ಷ!

'ನೋಡಿದವರು ಕಲಾವಿದ ಜೀವನದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಅದತಿ ಅಂದ್ರೆ ಎಲ್ಲರೂ ಹೇಳುವುದು ಸದಾ ನಗುತ್ತಿರುತ್ತಾಳೆ ಖುಷಿಯಾಗಿರುತ್ತಾಳೆ ಅಂತ. ನಗು ಖುಷಿ ಇದ್ದೇ ಇದೆ ಆದರೆ ಅದರ ಹಿಂದೆ ಸಾಕಷ್ಟು ಶ್ರಮವಿದೆ. ನನ್ನ ಜೀವನ ಒಳ್ಳೆಯ ರೀತಿಯಲ್ಲಿ ಕಟ್ಟಿಕೊಳ್ಳಬೇಕು ಅನ್ನೋ ಆಸೆ ಇದೆ. ಇದುವರೆಗೂ ನಾನು ಒಂದು ಪಾರ್ಟಿಗೂ ಹೋಗಿಲ್ಲ ಅವಾರ್ಡ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಒಳ್ಳೆ ರೀತಿ ಜೀವನಕ್ಕೆ ನಾನು ಈ ರೀತಿ ಬದುಕು ಕಟ್ಟಿಕೊಂಡಿರುವೆ. ದೇವರು ಅನ್ನೋ ಶಕ್ತಿ ನಂಬಿದಾಗ ಮೋಸ ಆಗೋಲ್ಲ ಅಂತಾರೆ. ಹೀಗಾಗಿ ಸ್ವಲ್ಪ ಎಮೋಷನ್ ಆದೆ. ಲವ್ ಕೂಡ ಮಾಡೋಕೆ ಆಗಿಲ್ಲ ನನ್ನ ಕರ್ಮಕ್ಕೆ. ಈ ರೀತಿ ಇರುವ ಹುಡುಗಿಗೆ ಹುಡುನ ನೋಡಿ ಫೀಲಿಂಗ್ ಬಂದಿರುವುದು ಇದೇ ಮೊದಲು' ಹೇಳಿದ್ದಾರೆ.

ಸ್ವಪ್ನಾ ದೀಕ್ಷಿತ್‌ ಪತಿಗೆ ಸಿಕ್ತು ಕೆಲಸ: ಗೋಲ್ಡನ್ ಸ್ಟಾರ್‌ ಗಣೇಶ್‌ ಕಡೆಯಿಂದ ಬಂತು ಅಪಾಯಿಂಟ್‌ಮೆಂಟ್ ಲೆಟರ್

'ಯಾವ ಪಾರ್ಟಿಯಲ್ಲೂ ಭಾಗಿಯಾಗಬೇಕು ಅನಿಸುತ್ತಿರಲಿಲ್ಲ. ಆರ್ಟಿಸ್ಟ್‌ ಅಂದ್ರೆ ಜನರು ಬೇರೇ ರೀತಿ ನೋಡ್ತಾರೆ. ಇಂಡಸ್ಟ್ರಿಗೆ ಕಾಲಿಟ್ಟಾಗ ನನ್ನ ಅಮ್ಮ ಏನ್ ಮಾಡಿದರು ಅಂದ್ರೆ ನಾನು ಮಲಗಿಕೊಂಡು ಚೆನ್ನಾಗಿದ್ದೆ ಪುಟ್ಟ ಬಾ ಇಲ್ಲಿ ಅಂದು ದೇವರ ಮನೆ ಮುಂದೆ ನಿಲ್ಲಿಸಿದ್ದರು. ಭಾಷೆ ತೆಗೆದುಕೊಂಡರು ಈಗ ನೀನು ಹೇಗೆ ನನ್ನ ಮಗಳಾಗಿರುವೆ ಇದೇ ರೀತಿ ಮುಂದಕ್ಕೂ ಇರಬೇಕು. ಈ ಮಾತು ಸುಮ್ಮನೆ ಹೇಳಿಲ್ಲ ಸುಮಾರು ಅರ್ಥಗಳಿದೆ. ಅವರು ಹೇಳಿರುವ ಅರ್ಥ ನನಗೆ ಸೂಕ್ಷ್ಮವಾಗಿ ಅರ್ಥವಾಗಿದೆ. ಇದೆಲ್ಲಾ ಬೇಡ ಯಾಕೆ ಅಂತ ನನ್ನನ್ನು ನಾನು restrict ಮಾಡಿಕೊಳ್ಳುತ್ತಿದ್ದೆ ಹಿಂಸೆ ಆಗುತ್ತಿತ್ತು ಬುಕ್‌ನಲ್ಲಿ ಬರಿ ಆಮೇಲೆ ಹರಿದು ಹಾಕುತ್ತಿದ್ದೆ. ನನ್ನ ಪತಿ ನನ್ನ ಬೆಸ್ಟ್‌ ಫ್ರೆಂಡ್‌. ನನ್ನ ಜೀವನದಲ್ಲಿ ನೀವು ಬಂದಿದಕ್ಕೆ ಧನ್ಯಾವದಗಳು. ಜೀವನದಲ್ಲಿ ನಾನು ತೆಗೆದುಕೊಂಡಿರುವ ಬೆಸ್ಟ್‌ ನಿರ್ಧಾರ ಅಂದ್ರೆ ನೀವೇ' ಎಂದಿದ್ದಾರೆ.

Follow Us:
Download App:
  • android
  • ios