ಶೋ ಆರಂಭದಲ್ಲಿ ಅಶ್ವಿನ್‌ಗೆ ಕೊಟ್ಟಂತ ಮಾತು ಉಳಿಸಿಕೊಂಡ ಗೋಲ್ಡನ್ ಸ್ಟಾರ್. ಆಫರ್ ಲೆಟರ್‌ ನೋಡಿ ಭಾವುಕರಾದ ಸ್ವಪ್ನಾ...

ಕನ್ನಡ ಕಿರುತೆರೆ ಜನಪ್ರಿಯ ನಟಿ ಸ್ವಪ್ನಾ ದೀಕ್ಷಿತ್ (Swapna Dixit) ಮತ್ತು ಪತಿ ಅಶ್ವಿನ್ ಸ್ಟಾರ್ ಸುವರ್ಣ (Star Suvarna) ವಾಹಿನಿಯ ಇಸ್ಮಾರ್ಟ್ ಜೋಡಿ (Ismart Jodi) ರಿಯಾಲಿಟಿ ಶೋನ ಸ್ಪರ್ಧಿಗಳು. ಫಿನಾಲೆ ಹಂತ ತಲುಪಿದ ಈ ಜೋಡಿ ವೇದಿಕೆ ಮೇಲೆ ನೂರಾರು ಸ್ಪೆಷಲ್ ಮೊಮೆಂಟ್‌ಗಳನ್ನು ಕ್ರಿಯೇಟ್ ಮಾಡಿದ್ದಾರೆ. ಪ್ರಯಾರಿಟಿ ರೌಂಡ್ ಮತ್ತು ಒಲವೇ ವಿಸ್ಮಯ ಎಪಿಸೋಡ್‌ನಲ್ಲಿ ಸ್ವಪ್ನಾ ತಮ್ಮ ಪತಿಗೆ ಕೆಲಸವಿಲ್ಲ ಎಂದು ಹೇಳಿಕೊಂಡು ಕಣ್ಣೀರಿಟ್ಟಿದ್ದರು. ಸ್ವಪ್ನಾ ದೀಕ್ಷಿತ್ ಮಾತುಗಳನ್ನು ಕೇಳಿ ಗಣೇಶ್‌ (Ganesh) ವೇದಿಕೆ ಮೇಲೆ ಒಂದು ಮಾತು ಕೊಟ್ಟಿದ್ದರು. ಮಾತು ಉಳಿಸಿಕೊಂಡಿದ್ದಾರೆ.....

'ಇಸ್ಮಾರ್ಟ್‌ ಜೋಡಿ ಶೋಯಿಂದ ನನ್ನ ಪ್ರಯಾರಿಟಿ ಲಿಸ್ಟ್‌ನಲ್ಲಿ ಕೆಳಗಿದ್ದ ಅತ್ತೆ ಮಾವ ಸ್ಥಾನ ಬದಲಾಗಿದೆ. ದಿನ ದಿನ ಅವರು ಮೇಲಕ್ಕೆ ಹೋಗುತ್ತಿದ್ದಾರೆ. ಒಂದು ಒಲವೇ ವಿಸ್ಮಯ ಶೋ ನನ್ನ ಜೀವನದ ಬದಲಾಯಿಸಿದೆ. ನಾನು ಅತ್ತೆನ ಅರ್ಥ ಮಾಡಿಕೊಂಡಿರುವೆ. ನನ್ನ ತಪ್ಪು ಅರ್ಥ ಆಗಿದೆ ಕ್ಷಮಿಸಿ' ಎಂದು ಸ್ವಪ್ನಾ ದೀಕ್ಷಿತ್ ಹೇಳಿದ್ದಾರೆ.

ನನ್ನ ಗಂಡ ಕೆಲಸ ಮಾಡ್ತಿಲ್ಲ,16 ವರ್ಷದಿಂದ ಇಡೀ ಮನೆ ಜವಾಬ್ದಾರಿ ನನ್ನ ಮೇಲಿದೆ: ಸ್ವಪ್ನಾ ದೀಕ್ಷಿತ್

'ನನ್ನ ಲೈಫ್‌ನ ಬದಲಾಯಿಸಿರುವುದು ಇಸ್ಮಾರ್ಟ್ ಜೋಡಿ. ಈ ಶೋನಲ್ಲಿ ನಾನು ಏನೂ ಕಳೆದುಕೊಂಡಿಲ್ಲ ಪ್ರತಿಯೊಂದನ್ನು ಪಡೆದುಕೊಂಡು ಹೋಗಿರುವೆ. ಈ ಕ್ಷಣ ನಾನು ಜೀವನ ಪೂರ್ತಿ ಮರೆಯುವುದಿಲ್ಲ. ನನಗೆ ಸ್ನೇಹಿತರಿಲ್ಲ ಇಲ್ಲಿ ನನಗೆ ತುಂಬಾ ಜನ ಸ್ನೇಹಿತರು ಸಿಕ್ಕಿದ್ದಾರೆ. ಗಣೇಶ್‌ ಸರ್‌ ನನ್ನನ್ನು ಓಪನ್ ಅಪ್ ಮಾಡಿದ್ದಾರೆ. ಇವತ್ತು ವೇದಿಕೆ ಮೇಲೆ ನಿಂತು ಹೇಳುತ್ತಿರುವ ನಾನು ನಾನಾಗಿರುವೆ. ರಿಯಲ್ ಅಶ್ವಿನ್ ಆಗಿ ವೇದಿಕೆ ಮೇಲೆ ನಿಂತಿರುವೆ. ಸುಮಾರು ಕೆಲಸ interview ಅಡೆಂಟ್ ಮಾಡಿದ್ದೀನಿ ಕಾದು ನೋಡಬೇಕು' ಅಂತ ಅಶ್ವಿನ್ ಹೇಳುತ್ತಾರೆ. 

ಅಶ್ವಿನ್ ಮಾತುಗಳನ್ನು ಕೇಳಿ ಗಣೇಶ್ 'ನಿಮ್ಮ ಅಭಿಮಾನಿ ನಿಮಗೆ ಪ್ರೀತಿಯ ಪತ್ರವೊಂದನ್ನು ಬರೆದುಕೊಟ್ಟಿದ್ದಾರೆ ಅದನ್ನು ನೀವು ಜೋರಾಗಿ ಈ ವೇದಿಕೆ ಮೇಲೆ ಓದಬೇಕು' ಎನ್ನುತ್ತಾರೆ. ಪತ್ರ ಸಂಪೂರ್ಣವಾಗಿ ಓದಿ ತಮಗೆ ಕೆಲಸ ಸಿಕ್ಕಿರುವುದಾಗಿ ಅಶ್ವಿನ್ ಅನೌನ್ಸ್‌ ಮಾಡುತ್ತಾರೆ. 

'ಪತಿಗೆ ಕೆಲಸ ಸಿಕ್ಕಿರುವುದು ನನಗೆ ಖುಷಿಯಾಗಿದೆ. ಇದು ನನ್ನ ಡ್ರೀಮ್ ನನ್ನ ಕನಸು. ಜೀವನ ಬದಲಾಗುತ್ತದೆ ಅವರು ದುಡಿಯುತ್ತಾರೆ' ಎಂದು ಸ್ವಪ್ನಾ ಹೇಳಿದಾಗ 'ಇಷ್ಟು ದಿನ ಇವಳು ನನಗೆ ನನ್ನ ತಾಯಿಗೆ ಮಗಳಿಗೆ ಕಷ್ಟ ಪಟ್ಟು ನೋಡಿಕೊಂಡಿದ್ದಾಳೆ ಇನ್ಮೇಲೆ ಅವಳು ಮನೆಯಲ್ಲಿದ್ದುಕೊಂಡು ನಾನು ಅವಳನ್ನು ನೋಡಿಕೊಳ್ಳುವಂತೆ ಆಗುತ್ತೀನಿ' ಎಂದು ಅಶ್ವಿನ್ ಹೇಳಿದ್ದಾರೆ.

Ismart Jodi ರಿಯಾಲಿಟಿ ಶೋ ಕಿರೀಟ ಗೆದ್ದ ಪುನೀತಾ- ಶ್ರೀರಾಮ್; ಕೈ ಸೇರಿತ್ತು 7 ಲಕ್ಷ!

ಇಸ್ಮಾರ್ಟ್‌ ಜೋಡಿಯಲ್ಲಿ ಇವರು ಎರಡನೇ ಸ್ಥಾನ ಪಡೆದುಕೊಂಡು ಟ್ರೋಫಿ ಜೊತೆಗೆ 3 ಲಕ್ಷ ಹಣ ಗೆದ್ದಿದ್ದಾರೆ.

16 ವರ್ಷದಿಂದ ಇಡೀ ಮನೆ ಜವಾಬ್ದಾರಿ ನನ್ನ ಮೇಲಿದೆ:

'16 ವರ್ಷಗಳಿಂದ ನನ್ನ ಇಡೀ ಮನೆ ಜವಾಬ್ದಾರಿನ ನಾನೇ ನೋಡ್ಕೊಳ್ಳುತ್ತಿರುವುದು' ಎಂದು ಸ್ವಪ್ನಾ ಹೇಳುತ್ತಾರೆ. 'ನೀವು ಸರಿಯಾಗಿ ಹೇಳುತ್ತಿದ್ದೀರಾ? ನೀವು ಹೇಳುತ್ತಿರುವುದು ನೋಡಿದರೆ ನಿಮ್ಮ ಪತಿ ಅಶ್ವಿನ್ ಮನೆಯಲ್ಲಿಯೇ ಇದ್ದಾರಾ' ಎಂದು ಗಣೇಶ್ ಮರು ಪ್ರಶ್ನೆ ಮಾಡುತ್ತಾರೆ. 

'ಹೌದು ನನ್ನ ಗಂಡ ಮನೆಯಲ್ಲಿದ್ದಾರೆ. ನನಗೆ ನನ್ನ ಗಂಡ ಹೀರೋನೇ ಸರ್ ಆದರೆ ಸಮಾಜದಲ್ಲಿ ಅವರಿಗೊಂದು ಗೌರವ ಬೇಕು. ನಮ್ಮ ಅಮ್ಮನಿಗೆ ತುಂಬಾ ಕೊರಗಿದೆ ನನ್ನ ಮಗಳು ಒಬ್ಬಳೆ ದುಡಿಯುತ್ತಿದ್ದಾಳೆ ಇವನು ಸುಮ್ಮನೆ ಕೂತ್ಕೊಂಡು ತಿನ್ನುತ್ತಿದ್ದಾನೆ' ಎಂದು ಸ್ವಪ್ನಾ ಉತ್ತರ ಕೊಡುತ್ತಾರೆ. ಸೀಕ್ರೆಟ್‌ ರೂಮ್‌ನಲ್ಲಿ ಅಶ್ವಿನಿ ಕುಳಿತುಕೊಂಡಿದ್ದರು 'ದಯವಿಟ್ಟು ನಿನ್ನ ಮಾತುಗಳನ್ನು ನಿಲ್ಲಿಸು. ಕೊಡಲಿ ಹಾಕಿದಳು ನನ್ನ ಕಾಲಿಗಳ ಮೇಲೆ' ಎಂದು ಹೇಳುತ್ತ ಸೀಕ್ರೆಟ್‌ ರೂಮಿನಿಂದ ಹೊರ ನಡೆಯುತ್ತಾರೆ.

View post on Instagram