Asianet Suvarna News Asianet Suvarna News

Champion ಬ್ಯಾಂಕ್‌ ಕೆಲಸಕ್ಕೆ ಬೈ,94 ಕೆಜಿಯಿಂದ 22 ಕೆಜಿ ತೂಕ ಇಳಿಸಿಕೊಂಡ ನಟ ಸಚಿನ್!

  • ಇದು ಫ್ರೆಂಡ್‌ಗಾಗಿ ಮಾಡಿರೋ ಸಿನಿಮಾ : ನಿರ್ಮಾಪಕ ಶಿವಾನಂದ್‌ ನೀಲಣ್ಣವರ್‌
  • ಅಕ್ಟೋಬರ್‌ 14ಕ್ಕೆ ಚಿತ್ರ ಬಿಡುಗಡೆ
Aditi Prabhudeva Sachin Dhanpal champion film release on October 14th vcs
Author
First Published Oct 3, 2022, 8:55 AM IST

‘94 ಕೆಜಿ ಇದ್ದೆ. ಈ ಸಿನಿಮಾಕ್ಕಾಗಿ 22 ಕೆಜಿ ಇಳಿಸಿದ್ದೀನಿ. 9 ಗಂಟೆಗೂ ಅಧಿಕ ಸ್ಟಂಟ್ಸ್‌, ಸ್ಪೋಟ್ಸ್‌ರ್‍ ಪ್ರಾಕ್ಟೀಸ್‌ ಮಾಡಿದ್ದೇನೆ. ಸಿನಿಮಾದಲ್ಲಿ ಸಾಧನೆ ಮಾಡಬೇಕೆಂದು ಬ್ಯಾಂಕ್‌ ಉದ್ಯೋಗವನ್ನೂ ಬಿಟ್ಟಿದ್ದೇನೆ. ಇದರಲ್ಲಿ ಅಥ್ಲೀಟ್‌ ಪಾತ್ರ. ಮಾಡಿದರೆ ಇನ್ನೊಬ್ಬರಿಗೆ ಮಾದರಿಯಾಗುವಂಥಾ ಪಾತ್ರ ಮಾಡಬೇಕೆಂದುಕೊಂಡಿದ್ದೆ. ಇದು ಕ್ರೀಡಾಳುಗಳಿಗೂ, ಜನಸಾಮಾನ್ಯರಿಗೂ ಸ್ಫೂರ್ತಿ ತುಂಬುವ ಪಾತ್ರ.’

ಹೀಗಂದದ್ದು ಸಚಿನ್‌ ಜನಪಾಲ್‌. ಇವರು ನಾಯಕನಾಗಿ ನಟಿಸುತ್ತಿರುವ ‘ಚಾಂಪಿಯನ್‌’ ಸಿನಿಮಾ ಅ.14ಕ್ಕೆ ತೆರೆಗೆ ಬರುತ್ತಿದೆ. ಈ ಚಿತ್ರದ ನಿರ್ದೇಶಕ ಶಾಹುರಾಜ್‌ ಶಿಂಧೆ ಕೋವಿಡ್‌ ವೇಳೆ ಹೃದಾಯಾಘಾತದಿಂದ ನಿಧನರಾಗಿದ್ದಾರೆ. ಆ ನೋವು ಚಿತ್ರತಂಡಕ್ಕಿದೆ. ಅದಿತಿ ಪ್ರಭುದೇವ ನಾಯಕಿ. ಒಂದು ಹಾಡಿಗೆ ಬಾಲಿವುಡ್‌ ತಾರೆ ಸನ್ನಿ ಲಿಯೋನ್‌ ಹೆಜ್ಜೆ ಹಾಕಿದ್ದಾರೆ. ಶಿವಾನಂದ್‌ ನೀಲಣ್ಣವರ್‌ ತಮ್ಮ ಫ್ರೆಂಡ್‌ಗಾಗಿ ಈ ಸಿನಿಮಾ ನಿರ್ಮಿಸಿದ್ದಾರೆ.

Aditi Prabhudeva ಡಬಲ್‌ ಮೀನಿಂಗ್‌ ಮಾತು ಅರ್ಥ ಆಗುವಾಗ ಶೂಟಿಂಗೇ ಮುಗಿದಿತ್ತು!

‘ನನ್ನ ಕುಟುಂಬದಲ್ಲಿ ಹೆಚ್ಚಿನವರು ಮಿಲಿಟ್ರಿಯಲ್ಲಿ ದೇಶ ಸೇವೆ ಮಾಡುತ್ತಿದ್ದಾರೆ. ನನಗೂ ಸೈನ್ಯ ಸೇರುವ ಕನಸಿತ್ತು. ಆದರೆ ಆ ಪರೀಕ್ಷೆ ಪಾಸ್‌ ಮಾಡೋದಕ್ಕಾಗಲಿಲ್ಲ. ಈ ಸಿನಿಮಾ ನೈಜ ಕಥೆ ಆಧರಿಸಿದ್ದು. ‘ಭಾಗ್‌ ಮಿಲ್ಕಾ ಭಾಗ್‌’ ಚಿತ್ರ ಈ ಪಾತ್ರಕ್ಕೆ ಸ್ಫೂರ್ತಿ ತುಂಬಿದೆ’ ಎಂದರು.

500 ರೂ. ಕೊಡುವ ಗಿಡಕ್ಕೆ 1990 ರೂ. ಕೊಟ್ರಾ? ಅದಿತಿ ಪ್ರಭುದೇವಾ ಶಾಪಿಂಗ್‌ಗೆ ನೆಟ್ಟಿಗರು ಶಾಕ್!

ನಿರ್ಮಾಪಕ ಶಿವಾನಂದ್‌ 12 ವರ್ಷಗಳ ಹಿಂದೆ ಕಾಲೇಜ್‌ನಲ್ಲಿ ಜೊತೆಯಾಗಿ ಓದುತ್ತಿದ್ದಾಗ ಮುಂದೊಂದು ದಿನ ನನ್ನ ಕೈಯಲ್ಲಿ ಹಣ ಬಂದರೆ ನಿನಗಾಗಿ ಒಂದು ಸಿನಿಮಾ ನಿರ್ಮಿಸುತ್ತೇನೆ ಅಂತ ಗೆಳೆಯ ಸಚಿನ್‌ಗೆ ಹೇಳಿದ್ದರಂತೆ. ಇದೀಗ ಆ ಮಾತು ನಿಜವಾದ ಖುಷಿಯಲ್ಲಿದ್ದರು. ‘ಅದ್ದೂರಿ ಬಜೆಟ್‌ ಸಿನಿಮಾವಿದು. ನೈಜ ಕಥೆಯನ್ನಾಧರಿಸಿ ಈ ಚಿತ್ರ ಮಾಡಲಾಗಿದೆ. ದೊಡ್ಡ ತಾರಾಗಣವಿದೆ. ಗೆಳೆಯನಿಗಾಗಿ ದುಡ್ಡು ಹಾಕಿದ್ದಕ್ಕೆ ಸಂತೋಷವಿದೆ. ಎಲ್ಲರಲ್ಲೂ ಸ್ಫೂರ್ತಿ ತುಂಬ ಚಿತ್ರವಿದು’ ಎಂದರು ಶಿವಾನಂದ್‌. ಅಜನೀಶ್‌ ಲೋಕನಾಥ್‌ ಸಂಗೀತ ಈ ಚಿತ್ರಕ್ಕಿದೆ.

 

Follow Us:
Download App:
  • android
  • ios