ಮನೆಗೇ ಹೋಗಿದ್ದ ಯಮುನಾ ನೋಡಿ ಡಾ ರಾಜ್‌ ಮಾಡಿದ್ದೇನು, ನಟಿ ರಿಯಾಕ್ಷನ್ ಏನಿತ್ತು?

ಪಾರ್ವತಮ್ಮನವರ ಕಡೆಯಿಂದ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಕರೆ ಬಂದಿತ್ತು. ಹೀಗಾಗಿ ಅವರ ಮನೆಗೆ ಹೋದೆ. ಅಲ್ಲಿ ಹಾಲ್‌ನಲ್ಲಿ ಸೋಫಾ ಮೇಲೆ ಕುಳಿತಿದ್ದೆ. ಪಾರ್ವತಮ್ಮನವರು ಇನ್ನೂ ನನ್ನ ಬಳಿ ಬಂದಿರಲಿಲ್ಲ. ನಾನು ಆ ಕಡೆ ಈ ಕಡೆ ನೋಡುತ್ತಿದ್ದೆ. ಅಷ್ಟರಲ್ಲಿ..

Actress Yamuna talks on kannada actor Dr rajkumar and Parvathamma srb

ಮೂಲತಃ ಕನ್ನಡದ ನಟಿಯಾದರೂ ಟಾಲಿವುಡ್‌ನಲ್ಲಿ ಹೆಚ್ಚು ಅವಕಾಶ ಪಡೆದಿರುವ ನಟಿ ಯಮುನಾ (Yamuna) ಮುಖ್ಯವಾದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. 'ರಾಜೇಶ್ ಗೌಡ' ಅವರ ಸಂದರ್ಶನದಲ್ಲಿ ಮಾತನಾಡಿರುವನಟಿ ಯಮುನಾ ಅವರು, ಹಲವು ಸಂಗತಿಗಳನ್ನು ಅಲ್ಲಿ ಹಂಚಿಕೊಂಡಿದ್ದಾರೆ. ಡಾ ರಾಜ್‌ಕುಮಾರ್ ಅವರನ್ನು ಅವರದೇ ಮನೆಯಲ್ಲಿ ಭೇಟಿಯಾಗಿದ್ದು, ಪಾರ್ವತಮ್ಮನವರ ಜೊತೆ ಮಾತಾಡಿದ್ದು ಎಲ್ಲವನ್ನು ಹಂಚಿಕೊಂಡಿದ್ದಾರೆ. ಆಗ ತಮಗಾದ ಅನುಭವವನ್ನು ಅಚ್ಚರಿ ಎಂಬಂತೆ ಹೇಳಿಕೊಂಡಿದ್ದಾರೆ ಯಮುನಾ. 

ಹಾಗಿದ್ದರೆ ನಟಿ ಯಮುನಾ ಹೇಳಿಕೊಂಡಿದ್ದೇನು? ಇಲ್ಲಿದೆ ನೋಡಿ.. ಪಾರ್ವತಮ್ಮನವರ ಕಡೆಯಿಂದ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಕರೆ ಬಂದಿತ್ತು. ಹೀಗಾಗಿ ಅವರ ಮನೆಗೆ ಹೋದೆ. ಅಲ್ಲಿ ಹಾಲ್‌ನಲ್ಲಿ ಸೋಫಾ ಮೇಲೆ ಕುಳಿತಿದ್ದೆ. ಪಾರ್ವತಮ್ಮನವರು ಇನ್ನೂ ನನ್ನ ಬಳಿ ಬಂದಿರಲಿಲ್ಲ. ನಾನು ಆ ಕಡೆ ಈ ಕಡೆ ನೋಡುತ್ತಿದ್ದೆ. ಅಷ್ಟರಲ್ಲಿ ಡಾ ರಾಜ್‌ಕುಮಾರ್ ಅವರು ತಮ್ಮ ರೂಮಿನಿಂದ ಬಿಳಿ ಪಂಚೆ ಹಾಗು ಶರ್ಟ್‌ನಲ್ಲಿ ನನ್ನ ಕಡೆ ಕೈ ಮುಗಿಯುತ್ತಾ ಬಂದರು. ನನಗೆ ಏನು ಮಾಡಬೇಕೆಂದೇ ತೋಚಲಿಲ್ಲ. 

ಫ್ಲೈಟ್‌ನಲ್ಲಿ ಸಿಕ್ಕಾಗ ರವಿಚಂದ್ರನ್ ಬಳಿ 'ಅದಕ್ಕಾಗಿ' ಕ್ಷಮೆ ಕೇಳಿದ ನಟಿ ಯಮುನಾ!

ಅಷ್ಟು ದೊಡ್ಡ ವ್ಯಕ್ತಿ, ಹಿರಿಯ ನಟ ನನಗೆ ಕೈ ಮುಗಿದಾಗ ನನಗೆ ಒಂದು ಕ್ಷಣ ಕೈ ಕಾಲು ಅಲುಗಾಡಲೇ ಇಲ್ಲ. ಅದು ಹೇಗೋ ಕೈ ಮುಗಿಯುತ್ತಾ ನಿಧಾನವಾಗಿ ಎದ್ದು ನಿಂತೆ. ಸ್ವಲ್ಪ ಹೊತ್ತು ಹಾಗೇ ನಿಂತಿದ್ದೆ. ಬಳಿಕ ಅವರು ಕುಳಿತುಕೊಳ್ಳಲು ಹೇಳಿದರು. ನನಗೆ ಅವರನ್ನು ನೋಡಿದಾಗ ದೈವೀಕ ವ್ಯಕ್ತಿಯೊಬ್ಬರನ್ನು ನೋಡಿದ ಅನುಭವ ಆಯ್ತು. ಅವರು ಅಸಾಮಾನ್ಯ ವ್ಯಕ್ತಿ ಎನ್ನಿಸುತ್ತಿತ್ತು. ಅವರಲ್ಲಿ ಪೊಸೆಟಿವ್ ಎನರ್ಜಿ ಇದೆ. ನಮ್ಮ ಸಮೀಪ ಅವರು ಬಂದಾಗ ನಮಗೆ ಆ ಅನುಭವ ಆಗುತ್ತದೆ' ಎಂದಿದ್ದಾರೆ ನಟಿ ಯಮುನಾ. 

ಇನ್ನು, ಹೆಚ್ಚಿನ ಮಾತುಕತೆ ವೇಳೆ ನಟಿ ಯಮುನಾ ಅವರು ಹತ್ತುಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. 'ಡಾ ರಾಜ್‌ಕುಮಾರ್ ಬಳಿಕ ಪಾರ್ವತಮ್ಮನವರು ಬಂದು ಭೇಟಿಯಾದರು. ಅವರೋ ಸಾಕ್ಷಾತ್ ತಾಯಿ ಸ್ವರೂಪಿ. ನನಗೆ ಅವರನ್ನು ನೋಡಿದಾಗ ಅಮ್ಮನಂತೆ ಭಾಸವಾಯಿತು. ನಿರ್ಮಾಪಕಿಯಾದರೂ ಎಷ್ಟೊಂದು ಸರಳ, ಹಾಗೂ ವಿನಯವಂತಿಕೆ ಇರೋ ಅಮ್ಮ. ನನ್ನನ್ನು ಮಾತನಾಡಿಸಿ, ಕುಡಿಯಲು, ತಿನ್ನಲು ಕೊಟ್ಟು ಬಳಿಕ ಸಿನಿಮಾ ಡೇಟ್ಸ್ ಬಗ್ಗೆ ಮತನ್ನಾಡಿದರು. 

ಪುನೀತ್ ಹುಟ್ಟೋ ಮೊದಲೇ ಬಿ ಸರೋಜಾದೇವಿ ಹೇಳಿದ್ರಂತೆ ಪವರ್ ಸ್ಟಾರ್ ಬರೋದನ್ನ!

ಡಾ ರಾಜ್‌ಕುಮಾರ್ ಮಗ, ನಟ ರಾಘವೇಂದ್ರ ರಾಜ್‌ಕುಮಾರ್ ಜೊತೆ ನಟಿಸಲು ಡೇಟ್ಸ್ ಕೇಳಿದ್ದರು. ಆದರೆ, ಅಂದು ಕೊಡಲು ಸಾಧ್ಯವಾಗಲಿಲ್ಲ. ಬಳಿಕ, ಇನ್ನೊಂದು ಭೇಟಿಯಲ್ಲಿ ನಟ ಶಿವರಾಜ್‌ಕುಮಾರ್ ಅವರ ಜೊತೆ ಸಿನಿಮಾದಲ್ಲಿ ನಟಿಸಲು ಡೇಟ್ಸ್ ಕೊಟ್ಟಿದ್ದೇನೆ. ಬಳಿಕ ನಟ ಶಿವರಾಜ್‌ಕುಮಾರ್ ಅವರ ಜೊತೆ ಎರಡು ಸಿನಿಮಾದಲ್ಲಿ ನಟಿಸಿದ್ದೇನೆ. ಶಿವಣ್ಣ ಅವರದು ಕೂಡ ತುಂಬಾ ಹಂಬಲ್ ಎನ್ನಿಸುವ ವ್ಯಕ್ತಿತ್ವ. ಡಾನ್ಸ್ ಹಾಗೂ ನಟನೆ ಎಲ್ಲವನ್ನೂ ತಾವು ಚೆನ್ನಾಗಿ ಮಾಡುವುದಲ್ಲದೇ ನಮಗೂ ಕೂಡ ಹೇಳಿಕೊಡುತ್ತಾರೆ, ಸ್ಟೆಪ್ಸ್ ಹಾಕಿ ತೋರಿಸುತ್ತಾರೆ.    

ಈಗಲೂ ಕೂಡ ಸುಂದರವಾಗಿಯೇ ಇರುವ ನಟಿ ಯಮುನಾ ಅವರು 90ರ ದಶಕದಲ್ಲಿ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳ ಚಿತ್ರಗಳಲ್ಲಿ ಮಿಂಚಿರುವ ನಟಿ. ಕನ್ನಡ ಹಾಗು ತಮಿಳಿಗಿಂತ ಹೆಚ್ಚಾಗಿ ತೆಲುಗಿನಲ್ಲೇ ಅವರು ಸ್ಟಾರ್ ನಟಿಯಾಗಿ ಮೆರೆದವರು. ಕನ್ನಡ ಸಿನಿಮಾಗೆ ಡೇಟ್ಸ್‌ ಕೊಡಲು ಸಾಧ್ಯವೇ ಆಗದಷ್ಟು ಬ್ಯುಸಿ ಇದ್ದ ಯಮುನಾ ಅವರು ಆ ಬಗ್ಗೆ ಈಗ ಆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. 'ನನಗೆ ಕನ್ನಡ ಸಿನಿಮಾ ಆಫರ್ ಬಂದಾಗಲೆಲ್ಲಾ ನನ್ನ ಡೇಟ್ಸ್ ಇರುತ್ತಿರಲಿಲ್ಲ. ಹೀಗಾಗಿ ಬಹಳಷ್ಟು ಕನ್ನಡ ಸಿನಿಮಾ ಮಿಸ್ ಮಾಡಿಕೊಂಡಿದ್ದೇನೆ' ಎಂದಿದ್ದಾರೆ ಯಮುನಾ. 

ಮತ್ತೆ ಬರ್ತಿದಾರೆ ಮಾಸ್ಟರ್ ಕಿಶನ್, ಈಗ ಬ್ಲಾಕ್ ಬಸ್ಟರ್ ಮೂವಿ ಕೊಡೋಕೆ ರೆಡಿನಾ?

ಸದ್ಯ ತೆಲುಗು ಸೀರಿಯಲ್ ಲೋಕದಲ್ಲಿ ಮಿಂಚುತ್ತಿದ್ದಾರೆ ನಟ ಯಮುನಾ, ಕೆಲವು ಸಿನಿಮಾಗಳನ್ನೂ ಸಹ ಒಪ್ಪಿಕೊಂಡು, ಡೇಟ್ಸ್ ಸಿಕ್ಕಾಗ ಸಿನಿಮಾ ಹಾಗು ಸೀರಿಯಲ್ ಎರಡೂ ವಿಭಾಗಗಳಲ್ಲಿ ನಟನೆ ಮುಂದುವರೆಸಿದ್ದಾರೆ. ಸದ್ಯ ಕನ್ನಡದಲ್ಲಿ ಯಾವುದೇ ಆಫರ್ ಬಂದಿಲ್ಲ ನನಗೆ. ತುಂಬಾ ವರ್ಷಗಳ ಹಿಂದೆ ನನಗೆ ಕನ್ನಡದಲ್ಲಿ ಬಹಳಷ್ಟು ಆಫರ್ ಇತ್ತು, ಅದರೆ ನಾನು ಡೇಟ್ಸ್ ಕೊಡಲಾಗದಷ್ಟು ಬ್ಯುಸಿ ಇದ್ದೆ. ಈಗ ಅ ಬಗ್ಗೆ ಯೋಚನೆ ಮಾಡಿದರೆ ಬೇಸರವಾಗುತ್ತದೆ. ಆದರೆ, ಅವೆಲ್ಲವೂ ಅನಿವಾರ್ಯವಾಗಿ ಆಗಿದ್ದು...' ಎಂದಿದ್ದಾರೆ ನಟಿ ಯಮುನಾ.

Latest Videos
Follow Us:
Download App:
  • android
  • ios