ಮತ್ತೆ ಬರ್ತಿದಾರೆ ಮಾಸ್ಟರ್ ಕಿಶನ್, ಈಗ ಬ್ಲಾಕ್ ಬಸ್ಟರ್ ಮೂವಿ ಕೊಡೋಕೆ ರೆಡಿನಾ?
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತಿಗೆ ಸಿಕ್ಕ ನಟ-ನಿರ್ದೇಶಕ ಮಾಸ್ಟರ್ ಕಿಶನ್ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. 'ಸಿನಿಸ್ಟೋರ್‌ಕನ್ನಡ' ಮೂಲಕ ಶೇರ್ ಆಗಿರುವ ಕಿಶನ್ ಸಂದರ್ಶನದ ಭಾಗವು ಇದೀಗ ಸಾಕಷ್ಟು ..
ತುಂಬಾ ವರ್ಷಗಳ ಹಳೆಯ ಮಾತು. ಅಂದರೆ, 2006ರಲ್ಲಿ (24 November 2006) ಬಿಡುಗಡೆಯಾಗಿ ಹೆಸರು ಮಾಡಿದ್ದ ಚಿತ್ರ ಕೇರ್ ಆಫ್ ಫುಟ್‌ಪಾತ್'. ಅಮದು 10 ವರ್ಷದ ಹುಡುಗ ಮಾಸ್ಟರ್ ಕಿಶನ್ (Master Kishan) ಅಂದು ಕೇರ್ ಆಫ್ ಫುಟ್‌ಪಾತ್ ಎಂಬ ಮಕ್ಕಳ ಚಿತ್ರ ನಿರ್ಮಿಸಿ ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದಿದ್ದ. ಕಿಶನ್ ತಮ್ಮ ತಂದೆ ಶ್ರೀಕಾಂತ್ ಸಹಾಯ ಪಡೆದು, ಸಿನಿಮಾದಲ್ಲಿ ನಟನೆ ಹಾಗೂ ನಿರ್ದೇಶನ ಮಾಡಿದ್ದ. ಅಂದು ಆ ವಯಸ್ಸಿನ ಹುಡುಗರೆಲ್ಲಾ ಸಿನಿಮಾ ನೋಡಲು ಹೋಗುತ್ತಿದ್ದರೆ, ಈ ಮಾಸ್ಟರ್ ಕಿಶನ್ ಸಿನಿಮಾದಲ್ಲಿ ನಟಿಸಿ ನಿರ್ದೇಶನವನ್ನೂ ಮಾಡಿ ಜಗತ್ತೇ ಅಚ್ಚರಿಯಿಂದ ನೋಡುವಂತೆ ಮಾಡಿಕೊಂಡಿದ್ದ!
ಇಂದು (Kishan Shrikanth) 29 ವರ್ಷದ ಯುವಕ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತಿಗೆ ಸಿಕ್ಕ ನಟ-ನಿರ್ದೇಶಕ ಮಾಸ್ಟರ್ ಕಿಶನ್ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. 'ಸಿನಿಸ್ಟೋರ್‌ಕನ್ನಡ' ಮೂಲಕ ಶೇರ್ ಆಗಿರುವ ಕಿಶನ್ ಸಂದರ್ಶನದ ಭಾಗವು ಇದೀಗ ಸಾಕಷ್ಟು ವೈರಲ್ ಆಗುತ್ತಿದೆ. ಇದರಲ್ಲಿ ಮಾಸ್ಟರ್ ಕಿಶನ್ ಆಗಿದ್ದ ನಟ ಕಿಶನ್ ಅದೇನು ಹೇಳಿದ್ದಾರೆ ಎಂಬ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ..
'ಆಫ್ಟರ್ ಬ್ರೇಕಪ್' ಬಳಿಕ ಲವ್ ಮಾಡಲು ಒದ್ದಾಡುತ್ತಿರುವ ನಟ ಧನುಷ್; ಇದೇನ್ ಗುರೂ?
'ತುಂಬಾ ವರ್ಷಗಳು ನಾನು ನಂದೇ ಒಂದು ಕಂಪನಿಯಲ್ಲಿ ತೊಡಗಿಸಿಕೊಂಡಿದ್ದೆ. ಮೆಡಿಕಲ್ ಕೋರ್ಸ್‌ಗಳನ್ನು ಓದ್ತಾ ಇರೋರಿಗೆ, ಒಂದು ವಿಭಿನ್ನವಾದ ರೀತಿಯಲ್ಲಿ ಎಜ್ಯುಕೇಶನ್ ಕಂಟೆಂಟ್‌ನ ಮಾಡೋ ರೀತಿಯಲ್ಲಿ ನಾನು ಕೆಲಸ ಮಾಡ್ತಾ ಇದ್ದೆ.. ಈವಾಗ ಎಲ್ಲೇ ಹೋದ್ರೂ, ಏನೋ ಅಂತಾರಲ್ಲ ಹಾಗೆ, ಮನಸು ಎಲ್ಲಿರುತ್ತೋ ಅಲ್ಲಿಗೇ ಕರ್ಕೊಂಡು ಹೋಗುತ್ತೆ.. ಅದು ಸಿನಿಮಾ ಸೆಳೆತದಲ್ಲೇ ಇರೋದು.. ಈಗ ಒಂದು ಸಿನಿಮಾ ಬರೀತಾ ಇದೀನಿ.. ಅದನ್ನು ಆದಷ್ಟು ಬೇಗ ನಿರ್ದೇಶನ ಮಾಡ್ತಾ ಇದೀನಿ..
ಚಿಕ್ಕ ವಯಸ್ಸಿನಲ್ಲೇ ನಟನೆ ಹಾಗೂ ನಿರ್ದೇಶನ ಎರಡನ್ನೂ ಮಾಡಿದ್ರಿ. ಈಗ ಕನ್ನಡ ಸಿನಿಪ್ರೇಕ್ಷಕರು ನಿಮ್ಮಿಂದ ಎರಡನ್ನೂ ನಿರೀಕ್ಷೆ ಮಾಡ್ತಿದಾರೆ' ಎಂಬ ಮಾತಿಗೆ ನಟ ಮಾಸ್ಟರ್ ಕಿಶನ್ ಅವ್ರು 'ಸದ್ಯಕ್ಕೆ ನಾನು ನಿರ್ದೇಶನಕ್ಕೆ ಮಾತ್ರ ಮನಸ್ಸು ಮಾಡಿದೀನಿ. ನಟನೆಯಿಂದ ಸ್ವಲ್ಪ ದೂರ ಇದೀನಿ.. ಆದ್ರೆ, ಲೇಟ್ ಆಗಿ ಬಂದ್ರೂ ಲೇಟೆಸ್ಟ್ ಆಗಿ ಬರ್ತಿನಿ ಅನ್ನೋ ತರ, ಕನ್ನಡ ಚಿತ್ರರಂಗಕ್ಕೆ ಒಳ್ಳೊಳ್ಳೆಯ ಸಿನಿಮಾ ಕೊಡೋ ಉದ್ದೇಶ ಹಾಗೂ ನಿರ್ಧಾರ ನನಗಿದೆ' ಎಂದಿದ್ದಾರೆ ಈ ಮೊದಲು 'ಕೇರ್ ಆಫ್ ಫುಟ್‌ಪಾಥ್' ಚಿತ್ರದ ನಟನೆ-ನಿರ್ದೇಶನ ಮಾಡಿ 'ಮಾಸ್ಟರ್ ಕಿಶನ್' ಹೆಸರಿನಿಂದ ಖ್ಯಾತಿ ಪಡೆದಿದ್ದ ನಟ.
ಪುನೀತ್ ಹುಟ್ಟೋ ಮೊದಲೇ ಬಿ ಸರೋಜಾದೇವಿ ಹೇಳಿದ್ರಂತೆ ಪವರ್ ಸ್ಟಾರ್ ಬರೋದನ್ನ!