ಪುನೀತ್ ಹುಟ್ಟೋ ಮೊದಲೇ ಬಿ ಸರೋಜಾದೇವಿ ಹೇಳಿದ್ರಂತೆ ಪವರ್ ಸ್ಟಾರ್ ಬರೋದನ್ನ!

'ವಜ್ರೇಶ್ವರಿ ಕಂಬೈನ್ಸ್‌' ಎಂಬ ನಿರ್ಮಾಣ ಸಂಸ್ಥೆಯನ್ಜು ಹುಟ್ಟುಹಾಕಿ, 80ಕ್ಕೂ ಹೆಚ್ಚು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ಪಾರ್ವತಮ್ಮ ರಾಜ್‌ಕುಮಾರ್. ಡಾ ರಾಜ್‌ಕುಮಾರ್ ಸೇರಿದಂತೆ, ಅವರ ಮಕ್ಕಳಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಸಿನಿಮಾಗಳನ್ನು..

B Sarojadevi talks about Parvathamma rajkumar and Puneeth Rajkumar birth srb

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಮಾಡಿರುವ ಸಾಧನೆ ಬಗ್ಗೆ ಹೊಸದಾಗಿ ಏನೂ ಹೇಳಬೇಕಿಲ್ಲ. ಆ ಬಗ್ಗೆ ಗೊತ್ತಿರುವವರಿಗೆ ಗೊತ್ತು, ಗೊತ್ತಿಲ್ಲದವರಿಗೂ ಏನು ಹೇಳೋದು? ಆದ್ರೆ, ತಮ್ಮ 47ನೇ ವಯಸ್ಸಿಗೇ ಇಹಲೋಕ ತ್ಯಜಿಸಿದ ನಟ ಪುನೀತ್ ಬಗ್ಗೆ ಹತ್ತು ಹಲವು ಸಂಗತಿಗಳು ಈಗ ಸೋಷಿಯಲ್ ಮೀಡಿಯಾ ಹಾಗೂ ಯೂಟ್ಯೂಬ್ ಚಾನಲ್‌ಗಳ ಮೂಲಕ ಬಹಿರಂಗ ಆಗ್ತಿವೆ. ಇದೀಗ, ಹಿರಿಯ ನಟಿ ಬಿ ಸರೋಜಾದೇವಿ ಅವರು ಪಾರ್ವತಮ್ಮನವರಿಗೆ ಪವರ್ ಸ್ಟಾರ್ ಹುಟ್ಟೋ ಬಗ್ಗೆ ಮೊದಲೇ ಹೇಳಿದ್ದರು ಎಂಬ ಮಾತು ಬಹಿರಂಗವಾಗಿದೆ. 

ಹಾಗಿದ್ದರೆ ವಿಷಯವೇನು? ಹೌದು, ಡಾ ರಾಜ್‌ಕುಮಾರ್ (Dr Rajkumar) ಹಾಗೂ ಪಾರ್ವತಮ್ಮ ದಂಪತಿಗಳಿಗೆ ಎರಡು ಹೆಣ್ಣು ಹಾಗು 3 ಗಂಡು ಮಕ್ಕಳು ಎಂಬುದು ಎಲ್ಲರಿಗೂ ಗೊತ್ತು. ಅದರಲ್ಲಿ ಪಾರ್ವತಮ್ಮನವರು (Parvathamma Rajkumar) ಮೂರನೇ ಗಂಡು ಮಗುವಿಗೆ ಬಸುರಿ ಆಗಿದ್ದರು ಆಗ. ಅಂದರೆ, ಪುನೀತ್ ರಾಜ್‌ಕುಮಾರ್ ಹುಟ್ಟುವ ಸಮಯದ ಕಥೆ ಇದು. ಬಸುರಿ ಪಾರ್ವತಮ್ಮನವರು ಅಂದು ಸಿನಿಮಾ ಶೂಟಿಂಗ್ ಸೆಟ್‌ಗೆ ಬಂದಿದ್ದರಂತೆ. ಸೀದಾಸಾದಾ ಬಂದಿರುವುದಲ್ಲ, ಆ ವೇಳೆ ಭಾರವನ್ನು ಹೊತ್ತು ತಂದು ಸುಸ್ತಾಗಿದ್ದರಂತೆ. 

ಮುಂದಿನ ವಾರ ಮದುವೆ, ಈಗೇನ್ ಮಾಡ್ತಿದಾರೆ ಕೀರ್ತಿ ಸುರೇಶ್?

ಅಂದರೆ, ಡಾ ರಾಜ್‌ಕುಮಾರ್ ಅವರ ಯಾವುದೋ ಒಂದು ಚಿತ್ರದ ಶೂಟಿಂಗ್ ಸೆಟ್‌ಗೆ ನಿರ್ಮಾಪಕಿಯಾಗಿ ಬಂದಿದ್ದಾರೆ ಪಾರ್ವತಮ್ಮ. ಆದರೆ, ಬರುವಾಗ ಅವರು ಶೂಟಿಂಗ್‌ ಸೆಟ್‌ನಲ್ಲಿ ಇರೋರಿಗೆ ಊಟ ಹೊತ್ತು ತಂದಿದ್ದರು. ಅದೂ ಕೂಡ ಅಲ್ಪಸ್ವಲ್ಪವಲ್ಲ, ಜಾಸ್ತಿನೇ ಭಾರ ಹೊತ್ತು ತಂದಿದ್ದರು. ತಂದಿಟ್ಟವರೇ ಸುಸ್ತಾಗಿ ಒಂದು ಕಡೆ ಕುಳಿತುಬಿಟ್ಟರಂತೆ. ಆ ವೇಳೆ ಅಲ್ಲಿದ್ದ ಹಿರಿಯ ನಟಿ ಸರೋಜಾದೇವಿಯವರು ಅದನ್ನು ಗಮನಿಸಿದರಂತೆ. ಆಗ ಪಾರ್ವತಮ್ಮನವರು 'ನಾನು ಗರ್ಭಿಣಿ ಆಗಿರುವೆ. ಅದಕ್ಕೇ ಸುಸ್ತಾಗಿದೆ' ಎಂದರಂತೆ. 

ಆ ಮಾತು ಕೇಳಿದ ನಟಿ ಸರೋಜಾದೇವಿಯವರು 'ಹೌದಾ ಅಮ್ಮಾ? ಈ ಪರಿಸ್ಥಿತಿಯಲ್ಲೂ ನೀವು ಇಷ್ಟೊಂದು ಕಷ್ಟಪಟ್ಟು ಊಟ ತಂದಿದ್ದೀರ. ನಿಮಗೆ ದೊಡ್ಡ ಸ್ಟಾರ್ ಆಗುವಂಥ ಸಂತಾನವೇ ಆಗುತ್ತೆ ನೋಡಿ..' ಎಂದಿದ್ದಾರೆ. ಅದರಂತೆ ಹುಟ್ಟಿದವರು ಪುನೀತ್ ರಾಜ್‌ಕುಮಾರ್. ಬಾಲನಟರಾಗಿಯೇ ಬಣ್ಣಹಚ್ಚಿದ್ದ ಪುನೀತ್ ಅದೆಷ್ಟು ಬೆಳೆದರು, ಕನ್ನಡದ ಸ್ಟಾರ್ ನಟರಾಗಿ ಮೆರೆದರು ಎಂಬುದು ಈಗ ಇತಿಹಾಸ. ಆದರೆ, ಅಂದೇ ಆ ಬಗ್ಗೆ ಭವಿಷ್ಯ ನುಡಿದಿದ್ದರು ಬಿ ಸರೋಜಾದೇವಿ. ಅವರ ಬಾಯಿಂದ ಮಾತು ನಿಜವಾಗಿದೆ. 

ರಿಷಬ್ ಶೆಟ್ಟಿ ಮುಟ್ಟಿದ್ದೆಲ್ಲಾ ಚಿನ್ನ; ಏನಿದು ಶೆಟ್ಟರ ಸಕ್ಸಸ್ ಗುಟ್ಟು?

'ವಜ್ರೇಶ್ವರಿ ಕಂಬೈನ್ಸ್‌' ಎಂಬ ನಿರ್ಮಾಣ ಸಂಸ್ಥೆಯನ್ಜು ಹುಟ್ಟುಹಾಕಿ, 80ಕ್ಕೂ ಹೆಚ್ಚು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ಪಾರ್ವತಮ್ಮ ರಾಜ್‌ಕುಮಾರ್. ಡಾ ರಾಜ್‌ಕುಮಾರ್ ಸೇರಿದಂತೆ, ಅವರ ಮಕ್ಕಳಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಹಲವು ನಟನಟಿಯರು, ತಂತ್ರಜ್ಞರು ಪಾರ್ವತಮ್ಮ ನಿರ್ಮಾಣದ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ಹತ್ತು ಹಲವು ದಾಖಲೆಗಳು ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸಿರುವ ಸಿನಿಮಾಗಳಿಂದ ಕನ್ನಡ ಸಿನಿಉದ್ಯಮದಲ್ಲಿ ಮೂಡಿ ಬಂದಿವೆ. 

Latest Videos
Follow Us:
Download App:
  • android
  • ios