Asianet Suvarna News Asianet Suvarna News

ನನ್ನನ್ನು ಮದ್ವೆಯಾಗಿ ಮೋಸ ಮಾಡಿದ್ದಾನೆ; ಪ್ರಭಾವಿ ರಾಜಕಾರಣಿ ವಿರುದ್ಧ ತಮಿಳು ನಾಡಿನಲ್ಲಿ ದೂರು ಕೊಟ್ಟ ನಟಿ ವಿಜಯಲಕ್ಷ್ಮಿ

ಪ್ರಭಾವಿ ರಾಜಕಾರಣಿ ಜೊತೆ ಸೂರ್ಯವಂಶ ನಟಿ ಮದುವೆ. ಸಾಕ್ಷಿ ಹಿಡಿದು ತಮಿಳು ನಾಡು ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ.... 

Actress Vijayalakshmi files complaint against politician Seeman vcs
Author
First Published Aug 29, 2023, 4:18 PM IST

ಸ್ವಸ್ತಿಕ್, ಕನಕಾಂಬರಿ ಹಾಗೂ ಸೂರ್ಯವಂಶ ಸೇರಿದಂತೆ ಹಲವು ಕನ್ನಡ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ವಿಜಯಲಕ್ಷ್ಮಿ ಈಗ ತಮಿಳುನಾಡಿನಲ್ಲಿ ಸುದ್ದಿಯಲ್ಲಿದ್ದಾರೆ. ನನಗೆ ಮದುವೆಯಾಗಿದೆ ನ್ಯಾಯ ಕೊಡಿಸಿ ಎಂದು ಮಾಧ್ಯಮಗಳ ಎದುರು ಮನವಿ ಮಾಡಿಕೊಂಡರು ವಕೀಲರ ಸಹಾಯದಿಂದ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. 

ಹೌದು! 2008ರಲ್ಲಿ 'ನಾಮ್ ತಮಿಳ್ ಕಚ್ಚಿ' ಪಕ್ಷದ ಅಧ್ಯಕ್ಷ ಸೀಮಾನ್ ಹಾಗೂ ವಿಜಯಲಕ್ಷ್ಮಿ ಮದುವೆಯಾಗಿದ್ದಾರೆ ಅಂತ ಸುದ್ದಿಯಾಗುತ್ತಿದೆ. ಈ ವಿಚಾರವಾಗಿ ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತರ ಸಹಾಯ ಪಡೆದುಕೊಂಡು ದೂರು ದಾಖಲಿಸಿದ್ದಾರೆ. ಪೊಲೀಸ್ ಆಯುಕ್ತರಾದ ಸಂದೀಪ್ ರಾಯ್‌ ಭೇಟಿ ಮಾಡಿ ಸೀಮಾನ್ ವಿರುದ್ಧ ನೀಡಿದ್ದಾರೆ. ಈ ವಿಚಾರದಲ್ಲಿ ತಮಿಳರ್ ಮುನ್ನೇಟ್ರ ಪಡೈ ವ್ಯವಸ್ಥಾಪಕ ಅಧ್ಯಕ್ಷೆ ವೀರಲಕ್ಷ್ಮಿ ಸಹಾಯಕ್ಕೆ ಮುಂದಾಗಿ ದೂರು ನೀಡಿದ್ದಾರೆ. 

ಮೂರು ಲಕ್ಷ ಹಣ ಕೈ ಸೇರಿಲ್ಲ, ಜನರಿಂದ ನಾನು ದೂರ ಹೋಗುತ್ತೀನಿ ಬಿಟ್ಟುಬಿಡಿ: ವಿಜಯಲಕ್ಷ್ಮಿ

'2008ರಲ್ಲಿ ಸೀಮಾನ್ ಮತ್ತು ವಿಜಯಲಕ್ಷ್ಮಿ ಮದುವೆ ಆಗಿದ್ದಾರಂತೆ. ಹೀಗಂತ ವಿಜಯಲಕ್ಷ್ಮಿ ಹೇಳುತ್ತಿದ್ದಾರೆ. ಸೀಮಾನ್ ವಿಜಯಲಕ್ಷ್ಮಿಗೆ ಮೋಸ ಮಾಡಿದಲ್ಲದೆ ಆತನ ಕಡೆಯವರಿಂದ ನಟಿಗೆ ಬೆದರಿಕೆ ಹಾಕುತ್ತಿದ್ದಾರೆ. ಕೆಲವು ವರ್ಷಗಳಿಂದ ನಾನು ವಿಜಯಲಕ್ಷ್ಮಿ ಪರ ನಿಂತು ಸೀಮಾನ್ ವಿರುದ್ಧ ಹೋರಾಟ ಮಾಡುತ್ತಿದ್ದೇನೆ ಆದರೆ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈಗ ತಮಿಳು ನಾಡು ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆಯ ಮೇಲೆ ಅಪಾರ ನಂಬಿಕೆ ಇರಿಸಿದ್ದೇನೆ. ಆತನನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸಬೇಕು. ಇನ್ನು ಸೀಮಾನ್ ಮತ್ತು ವಿಜಯಲಕ್ಷ್ಮಿ ಮದುವೆ ನಡೆದಿಲ್ಲ ಇದು ಸುಳ್ಳು ಎನ್ನುತ್ತಿರುವವರಿಗೆ ನಾನು ಹೇಳುವುದು ಇಷ್ಟೇ ನನ್ನ ಬಳಿ ಸಾಕ್ಷ್ಯಾಧಾರಗಳಿವೆ ಅದಿಕ್ಕೆ ಸಹಾಯ ಮಾಡುತ್ತಿರುವೆ' ಎಂದು ವೀರಲಕ್ಷ್ಮಿ ಹೇಳಿದ್ದಾರೆ.

ವಿಜಯಲಕ್ಷ್ಮಿ ಕಣ್ಣೀರು:

' ನಾನು ಸೀಮಾನ್ ವಿಷಯಗಳನ್ನು ಹೊರಗೆ ತೆಗೆಯುತ್ತಿರುವೆ ಎಂದು ನನ್ನನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಪಬ್ಲಿಸಿಟಿಗಾಗಿ ಇದನ್ನು ಮಾಡುತ್ತಿಲ್ಲ ಆದರೆ ಅವರ ಕಡೆಯವರು ತಪ್ಪಾಗಿ ಬಿಂಬಿಸುತ್ತಿದ್ದಾರೆ. ನಾವು ಒಟ್ಟಿಗೆ ಕುಳಿತುಕೊಂಡು ಮಾತನಾಡಿಕೊಂಡು ಸೆಟಲ್ ಮಾಡಿಕೊಳ್ಳಬೇಕಾದ ವಿಷಯಗಳು ದೊಡ್ಡದಾಗಿದೆ. ಭವಿಷ್ಯದಲ್ಲಿ ಎಷ್ಟು ಬೆದರಿಕೆ ಬಂದರೂ ಹಿಂದೆ ಸರಿಯುವುದಿಲ್ಲ' ಎಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ ವಿಜಯಲಕ್ಷ್ಮಿ ಕಣ್ಣೀರಿಟ್ಟಿದ್ದಾರೆ.

ಕುಟುಂಬ ಹಾಳಾಗಲಿ ಅಂತಿದ್ದಾರೆ ಜಯಪ್ರದಾ, ಸುಮಲತಾ ಅವರೇ ಸಹಾಯ ಮಾಡಿ: ವಿಜಯಲಕ್ಷ್ಮಿ

ಹರಿ ನಾಡಾರ್ ವಿರುದ್ಧ ಆರೋಪ:

2020ರಲ್ಲಿ ನಟಿ ವಿಜಯಲಕ್ಷ್ಮಿ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ಪನನ್‌ಗಟ್ಟು ಪದೈ ಕಟ್ಚಿ ಪಕ್ಷದ ಸ್ಥಾಪಕ ಹರಿ ನಾಡಾರ್‌ ಎಂಬಾತನನ್ನು ಚೆನ್ನೈ ಪೊಲೀಸರು ಬೆಂಗಳೂರಿನಲ್ಲಿ ಬುಧವಾರ ಬಂಧಿಸಿದ್ದಾರೆ.ನಟಿಗೆ ಲೈಂಗಿಕ ಕಿರುಕುಳ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಡಿ ಆತನನ್ನು ಬಂಧಿಸಲಾಗಿದೆ. 2020ರಲ್ಲಿ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದಕ್ಕೆ ಲೈಂಗಿಕ ಕಿರುಕುಳವೇ ಕಾರಣ ಎನ್ನಲಾಗಿತ್ತು. 2020ರ ಜುಲೈನಲ್ಲಿ ನಾಮ್‌ ತಮಿಳರ್‌ ಕಟ್ಚಿ (ಎನ್‌ಟಿಕೆ) ಪಕ್ಷದ ನಾಯಕ ಸೀಮನ್‌ ಕುಮ್ಮಕ್ಕಿನ ಮೇಲೆ ನಾಡಾರ್‌ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದರು. 2020 ರಲ್ಲಿ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆ ಯತ್ನ ಪ್ರಕರಣ ತನಿಖೆ ನಡೆಸುತ್ತಿದ್ದ ತಿರುವನ್‌ಮಿಯೂರ್‌ ಪೊಲೀಸರಿಗೆ ನಟಿ, ಈ ಹಿಂದೆ ತನ್ನೊಂದಿಗೆ ಸಂಬಂಧ ಹೊಂದಿದ್ದ ಎನ್‌ಟಿಕೆ ಮುಖಂಡ ಸೀಮನ್‌ ತನಗೆ ಕಿರುಕುಳ ನೀಡಲು ಹರಿ ನದರ್‌ನನ್ನು ಕಳಿಸಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದರು. ಇದೀಗ ಪ್ರಕರಣ ಸಂಬಂಧ ಬುಧವಾರ ಆತನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಕೋರ್ಟ್‌ ಮುಂದೆ ಆತನನ್ನು ಪೊಲೀಸರು ಹಾಜರುಪಡಿಸಲಿದ್ದಾರೆ.

ತಿರುನೆಲ್ವೇಲಿ ನಿವಾಸಿ ಹರಿ ನಾಡಾರ್‌ ಅಲಿಯಾಸ್‌ ಗೋಪಾಲಕೃಷ್ಣ ನಾಡಾರ್‌ (39) 2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಲಗುಲಂ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ. ಉದ್ಯಮಿಯೋರ್ವರಿಗೆ 360 ಕೋಟಿ ಬ್ಯಾಂಕ್‌ ಲೋನ್‌ ಕೊಡಿಸುವುದಾಗಿ ನಂಬಿಸಿ 7 ಕೋಟಿ ರು. ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಈತನನ್ನು 2021 ಮೇ ನಲ್ಲಿ ಬೆಂಗಳೂರು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಬಳಿಕ ಬಿಡುಗಡೆ ಆಗಿದ್ದ.

Follow Us:
Download App:
  • android
  • ios