Asianet Suvarna News Asianet Suvarna News

ಕುಡಿತದ ಚಟಕ್ಕೆ ಬಿದ್ದು ಪಡಬಾರದ ಕಷ್ಟ ಪಟ್ಟಿದ್ದೆ: ಆ ದಿನಗಳ ನೆನೆದು ಕಣ್ಣೀರಾದ ನಟಿ ಊರ್ವಶಿ

ಬಹುಭಾಷಾ ನಟಿ ಊರ್ವಶಿ ಅವರು ತಮ್ಮ ಮದುವೆಯ ಸಂದರ್ಭದಲ್ಲಿ ಆದ ಅನಾಹುತದ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ. ಕುಡಿತದ ಚಟದ ಕುರಿತೂ ಹೇಳಿದ್ದಾರೆ. 
 

Actress Urvashi Reveals About Her First Marriage And Reasons Behind Divorce suc
Author
First Published Aug 28, 2023, 7:59 PM IST | Last Updated Aug 28, 2023, 7:59 PM IST

ತಮಿಳು, ಮಲಯಾಳಂ, ತೆಲುಗು, ಕನ್ನಡ ಹೀಗೆ ಹಲವು ಭಾಷೆಯ ಸಿನಿಮಾಗಳಲ್ಲಿ ಮುಂಚೂಣಿಯಲ್ಲಿರುವ ನಟಿ ಊರ್ವಶಿ.  ಬಾಲನಟಿಯಾಗಿ  ಚಿತ್ರರಂಗಕ್ಕೆ ಬಂದ ಇವರು, 1980ರಲ್ಲಿ 'ನ್ಯಾಯ ನೀತಿ ಧರ್ಮ' ಸಿನಿಮಾ ಮೂಲಕ ಊರ್ವಶಿ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ಡಾ. ರಾಜ್‌ಕುಮಾರ್ ಜೊತೆ 'ಶ್ರಾವಣ ಬಂತು' ಚಿತ್ರದಲ್ಲಿ ನಟಿಸಿದ್ದರು. 'ನಾನು ನ್ನ ಹೆಂಡ್ತಿ', 'ಪ್ರೇಮಲೋಕ', 'ನ್ಯೂ ಡೆಲ್ಲಿ', 'ಜೀವನದಿ', 'ಹಬ್ಬ', 'ಕೋತಿಗಳು ಸಾರ್ ಕೋತಿಗಳು', 'ಕತ್ತೆಗಳು ಸಾರ್ ಕತ್ತೆಗಳು', 'ರಾಮಾ ಶಾಮ ಭಾಮ' ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಕೆಲ ವರ್ಷಗಳಿಂದ  ತಾಯಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಹಾಸ್ಯ ಪಾತ್ರಕ್ಕೂ ಇವರದ್ದು ಎತ್ತಿದ ಕೈ.   2000 ರಲ್ಲಿ, ಮಲಯಾಳಂ ನಟ ಮನೋಜ್ ಕೆ. (Manoj K) ಊರ್ವಶಿ ಜಯನ್ ಅವರನ್ನು ವಿವಾಹವಾಗಿದ್ದು, ಈ ದಂಪತಿಗೆ ಓರ್ವ  ಮಗಳಿದ್ದಾಳೆ. ಅಷ್ಟಕ್ಕೂ ಇವರಿಬ್ಬರ ನಡುವೆ ವೈಮನಸ್ಸು ಬರಲು ಕಾರಣ, ಊರ್ವಶಿಯವರ ಕುಡಿತದ ಚಟ ಎಂಬುದನ್ನು ಖುದ್ದು ನಟಿಯೇ ತಿಳಿಸಿದ್ದಾರೆ. ತಮ್ಮ ಕುಡಿತದ ಚಟದಿಂದ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ 2008ರಲ್ಲಿ ಮನೋಜ್ ಊರ್ವಶಿ ವಿರುದ್ಧ ವಿಚ್ಛೇದನದ ಮೊಕದ್ದಮೆ ಹೂಡಿದ್ದರು. ನ್ಯಾಯಾಲಯವು ಮನೋಜ್ ಅವರ ಮನವಿಯನ್ನು ಒಪ್ಪಿಕೊಂಡಿತು.  2009 ರಲ್ಲಿ ಊರ್ವಶಿಗೆ ವಿಚ್ಛೇದನವನ್ನು ನೀಡಿತು.

ವಿಚ್ಛೇದನದ ನಂತರ ಊರ್ವಶಿ (Urvashi) ಮತ್ತೆ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. 2013 ರಲ್ಲಿ ಊರ್ವಶಿ ಅವರು ನಿರ್ಮಾಣ ಗುತ್ತಿಗೆದಾರ ಶಿವಪ್ರಸಾದ್ ಅವರನ್ನು ವಿವಾಹವಾದರು. ಅವರಿಗೆ ಒಬ್ಬ ಮಗನಿದ್ದಾನೆ. ಚಿತ್ರರಂಗದಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಊರ್ವಶಿ ಅವರ ವೈಯಕ್ತಿಕ ಜೀವನದಲ್ಲಿ ಹಲವು ಸಮಸ್ಯೆಗಳಿದ್ದವು. ಮದ್ಯಪಾನ ಮತ್ತು ವಿಚ್ಛೇದನ ಅವರ ಜೀವನದ ಮೇಲೆ ಪರಿಣಾಮ ಬೀರಿತು. ಆದರೆ, ಊರ್ವಶಿ ತಮ್ಮ ಪ್ರತಿಭೆಯಿಂದ ಚಿತ್ರರಂಗದಲ್ಲೇ ಉಳಿದರು.

ಸುಳ್ಳಿಗೆ ಹೈಪ್‌ ತರ್ಬೇಕು, ಸತ್ಯಕ್ಕೆ ತಾನಾಗೇ ಹೈಪ್‌ ಸಿಗುತ್ತೆ: ಉಪೇಂದ್ರ ವಿಡಿಯೋ ರಿಲೀಸ್​

ಅವರು ಈಗ ತಾವು ಹೇಗೆ ಕುಡಿತದ ದಾಸರಾಗಿದ್ದೆವು ಎಂಬ ಬಗ್ಗೆ ವಿವರಿಸಿದ್ದಾರೆ.  2000ನೇ ಇಸ್ವಿಯ ಮೇ 2ರಂದು  ಊರ್ವಶಿ ಮಲಯಾಳಂ ಮತ್ತು ನಟ ಮನೋಜ್ ಕೆ. ಜಯನ್ ಮದುವೆಯಾಗಿತ್ತು. ಮದುವೆಯಾಗಿ ಎಂಟು ವರ್ಷ ಅಂತೂ ಇಂತೂ ಸಂಸಾರ ಸಾಗಿಸುತ್ತಿದ್ದರು ಇವರಿಬ್ಬರು. ಅಷ್ಟರಲ್ಲಿಯೇ ಊರ್ವಶಿ ಕುಡಿತದ ಚಟ ಅಂಟಿಸಿಕೊಂಡಿದ್ದರು. ಆ ಬಗ್ಗೆ ವಿವರಿಸಿರುವ ನಟಿ,  'ನಾನು, ಮನೋಜ್ ದೂರಾಗಲು ಒಂದೇ ಒಂದು ಕಾರಣ ಕುಡಿತ. ಆತನ ಮನೆಯಲ್ಲಿ ಎಲ್ಲರೂ ಮದ್ಯ ಸೇವಿಸುತ್ತಾರೆ. ನನಗೂ ಕುಡಿಯುವಂತೆ ಬಲವಂತ ಮಾಡುತ್ತಿದ್ದರು. ಪ್ರತಿದಿನ ಕುಡಿದು ನಾನು ಕುಡಿತಕ್ಕೆ ದಾಸಿಯಾಗಿದ್ದೆ. ಆತನಿಂದಲೇ ನಾನು ಕುಡಿತದ ಚಟಕ್ಕೆ ಬಿದ್ದಿದ್ದೆ. ಅದೇ ನಮ್ಮ ಡಿವೋರ್ಸ್‌ಗೂ ಕಾರಣವಾಯಿತು. ನನ್ನ ಮಗಳು ನನಗೆ ಸಿಗದಂತೆ ಮಾಡಿದ ಎಂದಿದ್ದಾರೆ. ಇವರಿಗೆ ತೇಜ ಲಕ್ಷ್ಮಿ ಎನ್ನುವ ಮಗಳು ಇದ್ದಾಳೆ. 

2008ರಲ್ಲಿ ಡಿವೋರ್ಸ್​ ಆದ  ಮೇಲೆ ಆರು  ವರ್ಷಗಳ ಬಳಿಕ ಚೆನ್ನೈ ಮೂಲದ ಶಿವಪ್ರಸಾದ್ ಎಂಬುವವರನ್ನು ಊರ್ವಶಿ ಮದುವೆಯಾದರು.   ಎರಡನೆಯ ಮದುವೆಗೂ (Second Marriage) ಮುಂಚೆ ತಾವು ಅನುಭವಿಸಿದ್ದ ನೋವಿನ ಕುರಿತು ಊರ್ವಶಿ ಮಾತನಾಡಿದ್ದಾರೆ. ನನ್ನ ಮಗಳನ್ನು ಕಳುಹಿಸಿಕೊಡುವಂತೆ ಕೋರ್ಟ್​ ಮೊರೆ ಹೋಗಿದ್ದೆ. ಮನೋಜ್​ ನಮ್ಮ ಮಗಳನ್ನು ನನ್ನ ಬಳಿ ಬಿಡುತ್ತಿರಲಿಲ್ಲ. ನಾನು ಕುಡಿತದ ದಾಸಿಯಾಗಿದ್ದೆ ಎಂಬ ಕಾರಣ ಹೇಳುತ್ತಿದ್ದ. ಇದರಿಂದ ನಾನು ಒಂಟಿಯಾಗಿ ಖಿನ್ನತೆಗೆ ಜಾರಿದ್ದೆ ಎಂದಿದ್ದಾರೆ.  ಹೀಗೆ ಆರು ವರ್ಷ ನೊಂದು ಬೆಂದು ಹೋದೆ ಎಂದಿರುವ ನಟಿ, ನಂತರ  ಶಿವಪ್ರಸಾದ್‌ ಅವರ ಜೊತೆ ಮದುವೆಯಾದರು. ಆಗ ನಟಿಗೆ  40 ವರ್ಷ ವಯಸ್ಸಾಗಿತ್ತು. ಇದಕ್ಕೂ ಜನ ಸಾಕಷ್ಟು ಕುಹಕವಾಡಿದರು ಎಂದಿದ್ದಾರೆ.

'ಮುಂಗಾರು ಮಳೆ' ಗಾಯಕ ಅರ್ಮಾನ್​ ಮಲಿಕ್​ ನಿಶ್ಚಿತಾರ್ಥ: ಲಲನೆಯರ ಕನಸಾಯ್ತು ನುಚ್ಚುನೂರು

40ನೇ ವಯಸ್ಸಿನಲ್ಲಿ ಮದುವೆಯಾಗುವುದಕ್ಕೆ ಹಲವಾರು ಟೀಕೆಗಳು ಬಂದವು. ಆದರೆ ನಾನು ಅದ್ಯಾವುದನ್ನೂ ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ನನಗೆ ನನ್ನ ಲೈಫ್​ ಮುಖ್ಯವಾಗಿತ್ತು. ಈಗ ನಾನು  ಪತಿ, ಮಗನ ಜೊತೆ ಸಂತೋಷದಿಂದ ಇದ್ದೇನೆ ಎಂದಿದ್ದಾರೆ ಊರ್ವಶಿ.
 

Latest Videos
Follow Us:
Download App:
  • android
  • ios