ಮುಖ್ಯಮಂತ್ರಿ ಚಂದ್ರು ಅವರು ನಟಿ ತಾರಾ ಅವರ ಪೂರ್ವಜರ ಜಮೀನು ಕನಕಪುರದಿಂದ ನೆಲಮಂಗಲಕ್ಕೆ ಹೋಯಿತು ಎಂದು ಹೇಳಿದ ಪ್ರಸಂಗವನ್ನು ವಿವರಿಸಿದ್ದಾರೆ. ಗಣೇಶೋತ್ಸವ ಕಾರ್ಯಕ್ರಮಕ್ಕೆ ಹೋಗುವಾಗ ತಾರಾ ಕೇಳಿದ ಪ್ರಶ್ನೆಗೆ ಚಂದ್ರು ಉತ್ತರ ನೀಡಿದರು.

ಬೆಂಗಳೂರು: ಸ್ಯಾಂಡಲ್‌ವುಡ್ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಸಂದರ್ಶನವೊಂದರಲ್ಲಿ ನಟಿ ತಾರಾ ಅನುರಾಧಾ ಅವರ ಪೂರ್ವಜರ ಜಮೀನು ಕನಕಪುರದಿಂದ ನೆಲಮಂಗಲಕ್ಕೆ ಹೋದ ಕಥೆಯೊಂದನ್ನು ಹೇಳಿದ್ದಾರೆ. 1980ರ ಕಾಲದಿಂದಲೂ ಸಿನಿಮಾ ರಂಗದಲ್ಲಿರುವ ಮುಖ್ಯಮಂತ್ರಿ ಚಂದ್ರು ಹಲವು ಕಲಾವಿದರೊಂದಿಗೆ ನಟಿಸಿದ್ದಾರೆ. ಹಿರಿಯರಾಗಿರುವ ಮುಖ್ಯಮಂತ್ರಿ ಚಂದ್ರು ಅವರು ತುಂಬಾ ತಮಾಷೆಯ ವ್ಯಕ್ತಿ ಎಂದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಸಂದರ್ಶನವೊಂದರಲ್ಲಿ ನಟ ಸಿಹಿಕಹಿ ಚಂದ್ರು, ನಟಿಯರಾದ ವಿನಯ ಪ್ರಸಾದ್ ಮತ್ತು ತಾರಾ ಅನುರಾಧ ಜೊತೆಯಲ್ಲಿ ಗಣೇಶೋತ್ಸವ ಕಾರ್ಯಕ್ರಮಕ್ಕೆ ತೆರಳಿದ ಸಂದರ್ಭವನ್ನು ನೆನಪು ಮಾಡಿಕೊಂಡಿದ್ದಾರೆ. 

ಕಲಾವಿದರನನ್ನು ಗಣೇಶೋತ್ಸವ, ಜಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತದೆ. ಈ ಸಂದರ್ಭದಲ್ಲಿ ಕಾಣಿಕೆಯಾಗಿ ಒಂದಿಷ್ಟು ಹಣ ಸಿಗೋದರಿಂದ ನಾವು ಹೋಗುತ್ತಿದ್ದೇವು. ಕಲಾವಿದರು ಕಾರ್ಯಕ್ರಮಕ್ಕೆ ಬಂದ್ರೆ ತಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ ಎಂದು ಆಯೋಜಕರು ಸಹ ನಮ್ಮನ್ನು ಆಹ್ವಾನಿಸುತ್ತಿದ್ದರು. ಹೀಗೆ ಒಮ್ಮೆ ಗಣೇಶೋತ್ಸವಕ್ಕಾಗಿ ನಮ್ಮನ್ನು ರಾಮನಗರದ ಹಾರೋಹಳ್ಳಿಯ ಆಹ್ವಾನಿಸಲಾಗಿತ್ತು ಎಂದು ಹೇಳಿದರು. ಶೂಟಿಂಗ್ ಸ್ಪಾಟ್‌ಗೆ ಕಾರ್ ಬರುತ್ತೆ, ನೀವೆಲ್ಲರೂ ಬರಬೇಕು ಎಂದು ಹೇಳಿದ್ದರು. 

ಒಂದು ಅಂಬಾಸಿಡರ್ ಕಾರ್ ಬುಕ್ ಮಾಡಲಾಗಿತ್ತು. ಆ ಕಾರ್‌ನಲ್ಲಿದ್ದವರ ಪೈಕಿ ನಾನೇ ಹಿರಿಯ. ನಟಿ ತಾರಾ ಇನ್ನು ಆಗ ಚಿಕ್ಕ ಹುಡುಗಿ. ನಾನು ಮತ್ತು ಸಿಹಿಕಹಿ ಚಂದ್ರು ಮತ್ತು ವಿನಯಪ್ರಸಾದ್ ಹಿಂದಿನ ಸೀಟ್‌ನಲ್ಲಿ ಕುಳಿತಿದ್ದರು. ಮುಂದಿನ ಸೀಟ್‌ನಲ್ಲಿ ತಾರಾ ಕುಳಿತಿದ್ದರು. ಆಗ ಅಂಕಲ್ ನಾವೆಲ್ಲಿಗೆ ಹೋಗುತ್ತಿದ್ದೇವೆ ಎಂದು ತಾರಾ ಕೇಳಿದರು. ಹಾರೋಹಳ್ಳಿಯ ಗಣೇಶೋತ್ಸವಕ್ಕೆ ಹೋಗುತ್ತಿದ್ದೇವೆ. ಹಾಡು ಬಂದ್ರೆ ಹಾಡು ಹೇಳು. ಡ್ಯಾನ್ಸ್ ಮಾಡೋಕೆ ಬಂದ್ರೆ ಡ್ಯಾನ್ಸ್ ಮಾಡು ಎಂದು ಹೇಳಿದೆ. ಇಲ್ಲಾ ಅಂಕಲ್ ನನಗೆ ಹಾಡು ಮತ್ತು ಡ್ಯಾನ್ಸ್ ಬರಲ್ಲ ಎಂದು ತಾರಾ ಹೇಳಿದರು. 

ನೋಡಮ್ಮಾ.. ನಾನು ವೇದಿಕೆ ಮೇಲೆ ಮಾತನಾಡುತ್ತೇನೆ. ವಿನಯ ಹಾಡು ಹೇಳುತ್ತಾಳೆ. ಚಂದ್ರು ಒಂದಿಷ್ಟು ಮಿಮಿಕ್ರಿ ಎಲ್ಲಾ ಮಾಡ್ತಾನೆ. ನೀನು ನಾಲ್ಕು ಮಾತನಾಡು ಎಂದು ತಾರಾಗೆ ಹೇಳಿದೆ. ಒಂದೆರಡು ಕಿಲೋ ಮೀಟರ್ ದೂರ ಹೋದ ಬಳಿಕ, ಅಂಕಲ್ ನಾವು ಕನಕಪುರದ ಕಡೆಗೆ ಹೋಗ್ತಿದ್ದೀವಾ ಎಂದು ತಾರಾ ಕೇಳಿದಳು. ಅದಕ್ಕೆ ಹೌದಮ್ಮಾ ಅನ್ನುತ್ತಿದ್ದಂತೆ ವಾವ್.. ನಮ್ಮ ಅಜ್ಜನ ಕಾಲದ ಆಸ್ತಿಯೆಲ್ಲಾ ಇಲ್ಲೇ ಇರೋದು. ನಮ್ಮ ತಾತ ಜಮೀನ್ದಾರರು. ಹಾರೋಹಳ್ಳಿಯ ಹತ್ತಿರವೇ ನಮ್ಮ ಜಮೀನು ಇದೆ. ಈಗ ಅದನ್ನು ನೋಡ್ಕೊಂಡು ಬರೋಣವಾ ಎಂದು ತಾರಾ ಕೇಳಿದಳು.

ಇದನ್ನೂ ಓದಿ: ಪಾರ್ವತಿಗೆ ಮಾತ್ರ ಈ ವಿಷ್ಯ ಹೇಳ್ಬೇಡಪ್ಪಾ ಎಂದಿದ್ದ ಡಾ.ರಾಜ್​: ಆ ರಹಸ್ಯದ ಬಗ್ಗೆ ಮುಖ್ಯಮಂತ್ರಿ ಚಂದ್ರು ನೆನಪು..

ನಾನು ಕೊಂಚ ಸೀರಿಯಸ್ ಆಗಿ, ನಿನಗೆ ಸ್ವಲ್ಪಾನೂ ಬುದ್ದಿ ಇಲ್ಲವಲ್ಲಮ್ಮಾ. ಇಷ್ಟೊಂದು ಸಿನಿಮಾ ಮಾಡಿದ್ಮೇಲೆ ಚಿಕ್ಕವಯಸ್ಸಿನಲ್ಲಿ ಓದಿದೆಲ್ಲಾ ಮರೆತು ಬಿಡ್ತಿಯಾ. ಶಾಲೆಯಲ್ಲಿ ಭೂಗೋಳ ಶಾಸ್ತ್ರ ಓದಿಲ್ಲವಾ? ಭೂಮಿ ವೃತ್ತಾಕಾರದಲ್ಲಿದ್ದು, ತಿರುಗುತ್ತಾ ಇರುತ್ತದೆ. ನೀನು ಆ ಕಡೆ ಹೋಗಿ ಹತ್ತನ್ನೆರಡು ವರ್ಷ ಆಗಿದೆ ಅಲ್ಲವಾ? ಈಗ ಆ ಜಮೀನು ಕನಕಪುರದಲ್ಲಿರುತ್ತಾ? ಈಗ ಅದು ನೆಲಮಂಗಲದ ಕಡೆ ಹೋಗಿರುತ್ತೆ ಅಲ್ಲವಾ? ಇನ್ನೊಂದಿಷ್ಟು ವರ್ಷ ಆದ್ರೆ ದೊಡ್ಡಬಳ್ಳಾಪುರದತ್ತ ಹುಡುಕಬೇಕು ಎಂದು ಹೇಳಿದೆ. ಇದಕ್ಕೆ ಸ್ಪಲ್ಪಯೂ ಯೋಚಿಸದೇ ಹೌದಲ್ವಾ ಎಂದು ತಾರಾ ಹೇಳಿದಳು. ನನ್ನ ಪಕ್ಕದಲ್ಲಿ ಕುಳಿತಿದ್ದ ವಿನಯ ಮತ್ತು ಚಂದ್ರು ನಗಲು ಶುರು ಮಾಡಿದರು. 

ನಾನು ತುಂಬಾನೇ ಗಂಭೀರವಾಗಿ ಹೇಳಿದ್ದರಿಂದ ತಾರಾ ಒಂದು ಕ್ಷಣ ಒಪ್ಪಿಕೊಂಡಿದ್ದಳು. ಆನಂತರ ಭೂಮಿ ತನ್ನಪಾಡಿಗೆ ತಾನು ತಿರುಗಿದ್ರೆ ಜಮೀನು ಎಲ್ಲಿ ಹೋಗುತ್ತೆ. ಅದು ಅಲ್ಲಿಯೇ ಇರುತ್ತೆ ಎಂದು ತಿಳಿ ಹೇಳಿದೆ. ಆಗ ನಾನು ಸುಮ್ಮನೇ ತಮಾಷೆಗೆ ಒಪ್ಪಿಕೊಂಡಿದ್ದೆ ಎಂದು ತಾರಾ ಹೇಳಿದಳು. ಆನಂತರ ಕಾರ್ಯಕ್ರಮದಲ್ಲಿಯೂ ಇದೇ ವಿಷಯದ ಬಗ್ಗೆಯೇ ಮಾತನಾಡಲಾಯ್ತು ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು. 

ಇದನ್ನೂ ಓದಿ: ಹೆಂಡ್ತಿಗೂ ನಂಗೂ 10 ವರ್ಷ ವ್ಯತ್ಯಾಸ, ಮೂರ್ನಾಲ್ಕು ಸಲ ಕಠಿಣವಾದ ಜಗಳ ಆಗಿರಬಹುದು: ಮುಖ್ಯಮಂತ್ರಿ ಚಂದ್ರು