Asianet Suvarna News Asianet Suvarna News

ಸಿಕ್ಸ್ ಪ್ಯಾಕ್ ಮಾಡೋದು ತುಂಬಾ ಕಷ್ಟ; ಮನಬಿಚ್ಚಿ ಮಾತನಾಡಿದ '6 Pack'ಒಡತಿ ಸಂಗೀತಾ ಶೃಂಗೇರಿ

ಡಯಟ್ ಒಬ್ಬೊಬ್ಬರ ಬಾಡಿಗೆ ಒಂದೊಂದು ರೀತಿಯಾಗಿ ಇರುತ್ತೆ, ಒಂದೇ ಡಯಟ್‌ಅನ್ನು ಎಲ್ಲರೂ ಫಾಲೋ ಮಾಡಲು ಆಗುವುದಿಲ್ಲ. ಅವರವರ ಬ್ಲಡ್‌ ಟೆಸ್ಟ್ ಮಾಡಿ, ಯಾವ ಡೆಫಿಸಿಯನ್ಸಿ ಇದೆ ಎಂಬುದನ್ನು ನೋಡಿ ಡಯಟ್ ಫಾಲೋ ಮಾಡಲು ಹೇಳುತ್ತಾರೆ. ಹೀಗಾಗಿ ಯಾರದೋ ಡಯಟ್ ಸೀಕ್ರೆಟ್ ಎನ್ನುತ್ತಾ ಅದನ್ನು ನಾವು ಫಾಲೋ ಮಾಡಲು ಹೋಗಬಾರದು.

Actress Sangeetha Sringeri talks about her six pack and diet plan srb
Author
First Published Nov 27, 2023, 6:16 PM IST

ಸ್ಯಾಂಡಲ್‌ವುಡ್ ನಟಿ, ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ಸಂಗೀತಾ ಶೃಂಗೇರಿ ಅವರು ತಮ್ಮ ಸಿಕ್ಸ್‌ ಪ್ಯಾಕ್ ಬಗ್ಗೆ ಮಾತನಾಡಿದ್ದಾರೆ. ಬಿಗ್ ಬಾಸ್‌ಗೆ ಹೋಗುವುದಕ್ಕೂ ಮೊದಲು ಈ ಬಗ್ಗೆ ಸಂಗೀತಾ ಮಾತನಾಡಿದ್ದು, ಈಗ ಈ ಸಂದರ್ಶನ ವೈರಲ್ ಆಗುತ್ತಿದೆ. ಸ್ಯಾಂಡಲ್‌ವುಡ್ ಮತ್ತು ಕಿರುತೆರೆಯಲ್ಲಿ ಮಿಂಚಿರುವ ನಟಿ ಸಂಗೀತಾ ಶೃಂಗೇರಿ ಅವರ ಚಾರ್ಲಿ, ಶಿವಾಜಿ ಸುರತ್ಕಲ್, ಪಂಪ, ಎ ಪ್ಲಸ್ ಹಾಗೂ ಲಕ್ಕಿ ಮ್ಯಾನ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ, ವಿನಯ್  ಗೌಡ ಜತೆ 'ಹರ ಹರ ಮಹಾದೇವ' ಸೀರಿಯಲ್‌ನಲ್ಲಿ 'ಸತಿ' ಪಾತ್ರದಲ್ಲಿ ಸಹ ನಟಿಸಿದ್ದಾರೆ. 

ನಟಿ ಸಂಗೀತಾ ಶೃಂಗೇರಿ ಹೇಳಿರುವಂತೆ 'ನನಗೆ ಸಿಕ್ಸ್ ಪ್ಯಾಕ್ ಮಾಡಬೇಕೆಂಬುದು ಬಾಲ್ಯದ ಕನಸಾಗಿತ್ತು. 10-12 ವರ್ಷದವಳಿದ್ದಾಗಲೇ ನನಗೆ ಆ ಬಗ್ಗೆ ಒಲವಿತ್ತು, ಆದರೆ ಕಾಲ ಕೂಡಿ ಬಂದಿರಲಿಲ್ಲ. ನಾನು ಮಾಡೆಲಿಂಗ್ ಮಾಡಿ, ಚಿತ್ರರಂಗಕ್ಕೆ ಬಂದ ಮೇಲೆ ನನಗೆ ಸಿಕ್ಸ್ ಪ್ಯಾಕ್ ಮಾಡಲೇಬೇಕು ಎಂಬ ಹಠ ಮೂಡಿತು. ಶಿವಾಜಿ ಸುರತ್ಕಲ್ ಸಿನಿಮಾ ಶೂಟಿಂಗ್ ಮುಗಿದ ಮೇಲೆ ಬೇರೆ ಸಿನಿಮಾ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಹೇಗೂ 3 ತಿಂಗಳು ರಜ ಸಿಗುತ್ತೆ, ಈಗಲೇ ಮಾಡೋಣ ಎಂದು ನಿರ್ಧರಿಸಿ ಹೆಜ್ಜೆ ಇಟ್ಟೆ. ಯಲಹಂಕದಿಂದ ಮುಂಜಾನೆ 6 ಗಂಟೆಗೆ ಮಾಸ್ಕ್ ಧರಿಸಿ ಮೆಟ್ರೋದಲ್ಲಿ ಜಯನಗರಕ್ಕೆ ಹೋಗಿ ಜಿಮ್ ವರ್ಕೌಟ್ ಮಾಡುತ್ತಿದ್ದೆ.

ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ ಮುಂಗಾರು ಮಳೆ ಚೆಲುವೆ ಪೂಜಾ ಗಾಂಧಿ, ಯಾರು ಆ ವರ?

ನಾನು ಜಿಮ್‌ನಲ್ಲಿ ಒಂದೂವರೆ ಗಂಡೆ ವರ್ಕೌಟ್ ಮಾಡುತ್ತಿದ್ದೆ. ನಾನು ಸಿಕ್ಸ್ ಪ್ಯಾಕ್ ಗುರಿ ಇಟ್ಟುಕೊಂಡಿದ್ದರಿಂದ ಸಹಜವಾಗಿ ಕೋರ್ ವ್ಯಾಯಾಮ ಹೊಟ್ಟೆ ಭಾಗಕ್ಕೆ ಇದ್ದೇ ಇರುತ್ತಿತ್ತು. ಉಳಿದಂತೆ ಒಂದೊಂದು ದಿನ  ದೇಹದ ಒಂದೊಂದು ಭಾಗಕ್ಕೆ ಕೆಲಸ ಕೊಡುತ್ತಿದ್ದೆ. ವ್ಯಾಯಾಮಕ್ಕೆ ತಕ್ಕಂತೆ ಡಯಟ್ ಇರುತ್ತಿತ್ತು. ನಾನು ಯಾವುದೇ ಆರ್ಟಿಫೀಶಿಯಲ್ ಪೌಡರ್ ತೆಗೆದುಕೊಂಡು ಸಿಕ್ಸ್ ಪ್ಯಾಕ್ ಮಾಡಿಲ್ಲ, ಬದಲಾಗಿ ಟ್ರೇನರ್ ಹೇಳಿದ ಪ್ರಮಾಣದಲ್ಲೇ ನ್ಯಾಚುರಲ್ ಫೂಡ್ ತೆಗೆದುಕೊಂಡು ಸಿಕ್ಸ್ ಪ್ಯಾಕ್ ಕನಸು ನನಸು ಮಾಡಿಕೊಂಡಿದ್ದೇನೆ. ಟ್ರೇನರ್ ಹೇಳಿದ್ದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದೆ' ಎಂದಿದ್ದಾರೆ.

ನನಗೆ ಪ್ರೀತಿ ಬೇಕಿತ್ತು ಅನುಕಂಪವಲ್ಲ, ಬಿಗ್ ಬಾಸ್ ಮನೆ ಅದನ್ನು ಕೊಟ್ಟಿದೆ; ನೀತು ವನಜಾಕ್ಷಿ

ಡಯಟ್ ಒಬ್ಬೊಬ್ಬರ ಬಾಡಿಗೆ ಒಂದೊಂದು ರೀತಿಯಾಗಿ ಇರುತ್ತೆ, ಒಂದೇ ಡಯಟ್‌ಅನ್ನು ಎಲ್ಲರೂ ಫಾಲೋ ಮಾಡಲು ಆಗುವುದಿಲ್ಲ. ಅವರವರ ಬ್ಲಡ್‌ ಟೆಸ್ಟ್ ಮಾಡಿ, ಯಾವ ಡೆಫಿಸಿಯನ್ಸಿ ಇದೆ ಎಂಬುದನ್ನು ನೋಡಿ ಡಯಟ್ ಫಾಲೋ ಮಾಡಲು ಹೇಳುತ್ತಾರೆ. ಹೀಗಾಗಿ ಯಾರದೋ ಡಯಟ್ ಸೀಕ್ರೆಟ್ ಎನ್ನುತ್ತಾ ಅದನ್ನು ನಾವು ಫಾಲೋ ಮಾಡಲು ಹೋಗಬಾರದು. ನಮ್ಮ ನಮ್ಮ ದೇಹಕ್ಕೆ ಯಾವ ಡಯಟ್ ಬೇಕೋ ಅದನ್ನು ಬಲ್ಲವರಿಂದ ಕೇಳಿ ತಿಳಿದು ಅನುಸರಿಸುವುದು ಒಳ್ಳೆಯದು' ಎಂದಿದ್ದಾರೆ ಸ್ಯಾಂಡಲ್‌ವುಡ್ ಸಿಕ್ಸ್ ಪ್ಯಾಕ್ ಒಡತಿ ನಟಿ ಸಂಗೀತಾ ಶೃಂಗೇರಿ.

ಬೆಳಗಾದರೆ ಭಯವಾಗುತ್ತಿತ್ತು, ದಿನವನ್ನು ಎದುರಿಸಬೇಕಲ್ಲ ಎಂದು ಚಿಂತಿಸುತ್ತಿದ್ದೆ; ದೀಪಿಕಾ ಪಡುಕೋಣೆ

Follow Us:
Download App:
  • android
  • ios