ಮಹಿಳಾ ದಿನಾಚರಣೆಯನ್ನು ಒಬ್ಬೊಬ್ಬರು ಒಂದೊಂದು ರೀತಿ ಆಚರಿಸಿಕೊಳ್ಳುತ್ತಿದ್ದಾರೆ. ನಟಿ ರೂಪಿಕಾ ಈ ಬಾರಿಯ ಮಹಿಳಾ ದಿನಾಚರಣೆಗೆ ತಮ್ಮದೇ ಆದ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. 

ಬೆಂಗಳೂರು (ಮಾ. 08): ಮಹಿಳಾ ದಿನಾಚರಣೆಯನ್ನು ಒಬ್ಬೊಬ್ಬರು ಒಂದೊಂದು ರೀತಿ ಆಚರಿಸಿಕೊಳ್ಳುತ್ತಿದ್ದಾರೆ. ನಟಿ ರೂಪಿಕಾ ಈ ಬಾರಿಯ ಮಹಿಳಾ ದಿನಾಚರಣೆಗೆ ತಮ್ಮದೇ ಆದ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಡ್ಯ ಚುನಾವಣೆ: ದರ್ಶನ್ ಇರುವಾಗ‌ ಅಲ್ಲಿ ನಾನ್ಯಾಕೆ ಎಂದ ಸುದೀಪ್

ಮಹಿಳಾ ದಿನಾಚರಣೆಗೆಂದು ಸುಮ್ಮನೆ ಫೋಟೋ ತೆಗೆಸಿಕೊಂಡಿಲ್ಲ. ಈ ಫೋಟೋ ಮಹಿಳೆಯ ಸಾಮರ್ಥ್ಯದ ಬಗ್ಗೆ ಹೇಳುತ್ತದೆ. ಕೆಂಪು ಬಣ್ಣದ ಸೀರೆಯಲ್ಲಿ ದೇವಿಯ ಅವತಾರದಂತೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಆದರೆ ಇದು ಮಾಡರ್ನ್ ದೇವಿಯಷ್ಟೇ!

View post on Instagram

ಮಹಿಳೆಗೆ ತನ್ನದೇ ಆದ ಜವಾಬ್ದಾರಿಗಳಿವೆ. ಸೌಟು ಹಿಡಿದು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಾಳೆ. ಬ್ರಷ್ ಹಿಡಿದು ಮನೆ ಕ್ಲೀನ್ ಮಾಡುತ್ತಾಳೆ. ದೇವರ ಮನೆಯಲ್ಲಿ ದೀಪ ಬೆಳಗುತ್ತಾಳೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಹಿಂದೆ ಬಿದ್ದಿಲ್ಲ. ಆಧುನಿಕ ತಂತ್ರಜ್ಞಾನಗಳಲ್ಲಿ ಅಪ್ ಡೇಟ್ ಆಗುತ್ತಾ ಹೊರ ಜಗತ್ತಿನಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುತ್ತಾಳೆ. ಈಗ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆದಿದ್ದಾಳೆ. ದೇವಿಯ ಅವತಾರದಂತೆ ಎಲ್ಲಾ ವೇಷಗಳನ್ನು ಹಾಕಬಲ್ಲಳು ಎಂದು ಈ ಫೋಟೋಶೂಟ್ ಮೂಲಕ ಹೇಳಲು ಹೊರಟಿದ್ದಾರೆ ನಟಿ ರೂಪಿಕಾ.