'ಕಿರಿಕ್‌ ಪಾರ್ಟಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಈಗ ಪರಭಾಷೆಯಲ್ಲಿ, ಅದರಲ್ಲಿಯೂ ತೆಲುಗಿನಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಗ್ಲಾಮರ್‌ ಕಾಪಾಡಿಕೊಳ್ಳಲು ಸಿಕ್ಕಾಪಟ್ಟೆ ಎಫೋರ್ಟ್ ಹಾಕುತ್ತಿರುವ ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಸೇರಿಕೊಂಡ್ರಾ? 

ಹೌದು. ಕೆಲವು ತಿಂಗಳುಗಳಿಂದ ರಶ್ಮಿಕಾ ಮಂದಣ್ಣ ಒಂದಲ್ಲೊಂದು ಕಾರಣದಲ್ಲಿ ಸುದ್ದಿಯಲ್ಲಿರುತ್ತಾರೆ. IT Raid ಆದ ಬಳಿಕ ಯಾವುದೇ ಸಂದರ್ಶನದಲ್ಲಿ ಭಾಗಿಯಾಗದ ರಶ್ಮಿಕಾ ಸೋಷಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವುದನ್ನು ಮಾತ್ರ ತಪ್ಪಿಸುವುದಿಲ್ಲ. ನೀವು ದಪ್ಪಗಾಗಿದ್ದೀರೆಂದು ಅಭಿಮಾನಿಗಳು ಆಗಾಗ ಕಾಲೆಳೆಯುತ್ತಲೇ ಇದ್ದರು. ಅದಕ್ಕೀಗ ಬಾಡಿ ಶೇಪಿಂಗ್ ಬಗ್ಗೆ ತುಸು ಗಮನ ಹರಿಸುತ್ತಿದ್ದಾರೆ ಕರುನಾಡ ಕ್ರಶ್. 

ನಾಯಿ ಬಿಸ್ಕೆಟ್ ತಿನ್ನುತ್ತಾರಂತೆ ರಶ್ಮಿಕಾ; ಅಯ್ಯೋ.. ಏನಾಯ್ತು ಕ್ರಶ್‌ಗೆ..!?

ವರ್ಕೌಟ್‌ ಮಾಡುವಾಗ ಟ್ರೈನರ್‌ಗಳು ಸಲಹೆ ನೀಡುವ ಪ್ರಕಾರ ದೇಹಕ್ಕೆ ಪ್ರೋಟಿನ್‌ ಸಿಗುವುದೇ ಮಾಂಸಹಾರದಿಂದ. ಆದರೆ ಈಗ ರಶ್ಮಿಕಾ ಪ್ಯೂರ್ ವೆಜಿಟೇರಿಯನ್‌ ಆಗುತ್ತಿದ್ದಾರೆ. ಇತ್ತೀಚಿಗೆ ಅವರು ತಟ್ಟೆ ತುಂಬಾ ಚಿಕನ್‌ ಹಾಕ್ಕೊಂಡು ತಿನ್ನುತ್ತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ವೈರಲ್‌ ಆಗಿತ್ತು. ಅದನ್ನು ಪ್ರಶ್ನಿಸಿದ ನೆಟ್ಟಿಗರಿಗೆ 'ಇಲ್ಲ ಅದು ಕೇವಲ ಫೋಟೋಗೆ ಮಾತ್ರ' ಎಂದು ಪ್ರತಿಕ್ರಿಯೆ ನೀಡಿದ್ದರು.

Photos: ಭಾರತೀಯ ಸೀರೆಯಲ್ಲಿ ಸೌಂದರ್ಯದ ಖನಿ ಈ ಕನ್ನಡ ನಟಿಯರು!

ತೆಲುಗು ಚಿತ್ರರಂಗದಲ್ಲಿ ರಶ್ಮಿಕಾ ಬ್ಯುಸಿಯಾದ ನಂತರ ಹೆಚ್ಚು ಸಮಯವನ್ನು ಹೈದರಾಬಾದಿನಲ್ಲಿಯೇ ಕಳೆಯುತ್ತಾರೆ. ಅಲ್ಲಿ ಕೇಳಬೇಕಾ? ಬಿರಿಯಾನಿ ಪ್ರಿಯರಿಗೆ ಸ್ವರ್ಗ. ಸರಿ, ರಶ್ಮಿಕಾ ಸಹ ಅದನ್ನು ಸವಿಯೋದು ಹೆಚ್ಚಾಗಿತ್ತು. ಅದರಲ್ಲಿ ಹೆಚ್ಚಿನ ಕ್ಯಾಲೊರೀಸ್‌ ಇದೆ ಎಂದು ತಮ್ಮ ಪ್ರಿಯ ಆಹಾರವನ್ನೇ ತ್ಯಜಿಸಲು ನಿರ್ಧರಿಸಿದ್ದಾರಂತೆ! ಈ ನಿರ್ಧಾರ ಜೀವನ ಪೂರ್ತಿ ಪಾಲಿಸುತ್ತಾರಾ ಅಥವಾ ಕೆಲವು ತಿಂಗಳಿಗೆ ಮಾತ್ರಾವೇ ಕಾದು ನೋಡಬೇಕು.