ರಮ್ಯಾ ನಿರ್ಮಾಣದ ಸಿನಿಮಾ ಹಾಡು ಬಿಡುಗಡೆ; ಪೋಸ್ಟ್ ಹಂಚಿಕೊಂಡು ಸಂಭ್ರಮಿಸಿದ ನಟಿ!
ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಲ್ಲಿ ನಾಯಕ ಹಾಗೂ ನಿರ್ದೇಶಕರಾಗಿ ರಾಜ್ ಬಿ ಶೆಟ್ಟಿ ಇದ್ದಾರೆ. ಚಿತ್ರ ಸೆಟ್ಟೇರಿದಾಗ ರಮ್ಯಾ ರಾಜ್ ಬಿ ಶೆಟ್ಟಿ ಎದುರು ನಾಯಕಿ ಎದು ಸಹ ಹೇಳಲಾಗಿತ್ತು. ಆದರೆ, ಬಳಿಕ ಬೇರೊಬ್ಬರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
'ಮೆಲ್ಲಗೆ ಧ್ಯಾನಿಸು.. ಎಂದು ಶುರುವಾಗುವ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದ ಹಾಡನ್ನು ತಮ್ಮ ಇನ್‌ಸ್ಟಾಗ್ರಾಂ ಪೇಜಿನಲ್ಲಿ ನಟಿ, ಮಾಜಿ ಸಂಸದೆ ರಮ್ಯಾ ಪೋಸ್ಟ್ ಮಾಡಿದ್ದಾರೆ. ‘ಹಗುರಾದೆ ನಾನೀಗ ... ರೆಕ್ಕೆ ಬಲಿದಂತೆ’ಸ್ವಾತಿ ಮುತ್ತಿನ ಮಳೆ ಹನಿಯೇ, 'ಮೆಲ್ಲಗೆ' ಹಾಡು ಈಗ ನಿಮ್ಮ ಮುಂದೆ' ಎಂದು ನಟಿ ರಮ್ಯಾ ಬರೆದುಕೊಂಡಿದ್ದಾರೆ. ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಅವರು ಈ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಲ್ಲಿ ನಾಯಕ ಹಾಗೂ ನಿರ್ದೇಶಕರಾಗಿ ರಾಜ್ ಬಿ ಶೆಟ್ಟಿ ಇದ್ದಾರೆ. ಚಿತ್ರ ಸೆಟ್ಟೇರಿದಾಗ ರಮ್ಯಾ ರಾಜ್ ಬಿ ಶೆಟ್ಟಿ ಎದುರು ನಾಯಕಿ ಎದು ಸಹ ಹೇಳಲಾಗಿತ್ತು. ಆದರೆ, ಬಳಿಕ ಬೇರೊಬ್ಬರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಾಜ್ ಬಿ ಶೆಟ್ಟಿ ಎದುರು ಸಿರಿ ರವಿಕುಮಾರ್ ನಾಯಕಿಯಾಗಿ ನಟಿಸಿದ್ದು, ಅವರೀಗ ತಮ್ಮ ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಈ ಚಿತ್ರದ ಒಂದು ಹಾಡು ಈಗ ಹೊರಜಗತ್ತಿಗೆ ಅನಾವರಣವಾಗಿದೆ.
ಸ್ಕೂಲ್ ಅಥವಾ ಕಾಲೇಜಿನಲ್ಲಿ ಹೀಗೆ ನನ್ನ ಅಶ್ಲೀಲ ವಿಡಿಯೋ ವೈರಲ್ ಆಗಿದ್ದರೆ ಗತಿ ಏನಾಗಿರುತ್ತಿತ್ತೋ!
ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯಾಗಿ ಬಹಳಷ್ಟು ಹೆಸರು ಮಾಡಿರುವ ನಟಿ ರಮ್ಯಾ ಈ ಮೂಲಕ ನಿರ್ಮಾಪಕಿಯೂ ಆಗಿ ಮಿಂಚಲಿದ್ದಾರೆ. ರಾಜ್ ಬಿ ಶೆಟ್ಟಿ ನಿರ್ದೇಶನದ ಈ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ ಈಗಾಗಲೇ ಭಾರೀ ಹೈಪ್ ದೊರೆತಿದೆ. ಸ್ವಾಂಡಲ್‌ವುಡ್ ಸಿನಿಮಾ ಪ್ರಿಯರು ಈ ಚಿತ್ರದ ಬಿಡುಗಡೆಯನ್ನೇ ಎದುರು ನೋಡುವಂತಾಗಿದೆ.
ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ; ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೋಷಿಯಲ್ ಮೀಡಿಯಾಗೆ ವಾರ್ನಿಂಗ್
ಈ ಮೊದಲು ಬಿಡುಗಡೆಯಾಗಿದ್ದ ರಾಜ್ ಬಿ ಶೆಟ್ಟಿ ನಿರ್ದೇಶನದ ಟೋಬಿ ಚಿತ್ರವು ಅಷ್ಟೇನೂ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಮುಂದಿನ ಚಿತ್ರದ ಬಗ್ಗೆ ಅವರ ಅಭಿಮಾನಿಗಳು ಭಾರೀ ಕುತೂಹಲ ಹೊಂದಿದ್ದಾರೆ ಎನ್ನಬಹುದು. ಚಿತ್ರದ ಹಾಡುಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಹರಿಬಿಟ್ಟಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಟೀಮ್, ನಿಧಾನವಾಗಿ ಚಿತ್ರದ ಪ್ರಮೋಶನ್ ಹಂತಕ್ಕೆ ಕಾಲಿಟ್ಟಿದೆ ಎನ್ನಬಹುದು. ನವೆಂಬರ್ 24ಕ್ಕೆ ಸ್ವಾತಿ ಮುತ್ತಿನ ಮಳೆ ಹನಿಯೇ ತೆರೆಗೆ ಬರಲಿದ್ದು, ಈ ಬಗ್ಗೆ ಘೋಷಣೆ ಹೊರಬಿದ್ದಿದೆ.