Asianet Suvarna News Asianet Suvarna News

ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ; ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೋಷಿಯಲ್ ಮೀಡಿಯಾಗೆ ವಾರ್ನಿಂಗ್

ನಟಿ ರಶ್ಮಿಕಾರದ್ದು ಎಂದು ಯಾರೋ ಕಿಡಿಗೇಡಿಗಳು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟ ಈ ಡೀಪ್‌ಫೇಕ್ (Deepfake) ವೀಡಿಯೋ ಲಕ್ಷಾಂತರ ಸಂಖ್ಯೆಯಲ್ಲಿ ಶೇರ್ ಆಗಿ ಕೊನೆಗೆ ಅದು ಸ್ವತಃ ನಟಿ ರಶ್ಮಿಕಾವರೆಗೂ ತಲುಪಿದೆ. ಈ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಕೂಡ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಬರೆದುಕೊಂಡಿದ್ದಾರೆ. 

Rajeev Chandrasekhar warning to social media platforms on Rashmika Mandanna deepfake video srb
Author
First Published Nov 6, 2023, 6:08 PM IST

ನಟಿ ರಶ್ಮಿಕಾ ಮಂದಣ್ಣರ 'ಡೀಪ್‌ಫೇಕ್ (deepfake videos)ವಿಡಿಯೋ ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಸೌಂಡ್ ಮಾಡುತ್ತಿತ್ತು. ಆದರೆ, 'ಈ ವಿಡಿಯೋ ನಟಿ ರಶ್ಮಿಕಾರದ್ದು ಅಲ್ಲ, ಬದಲಿಗೆ Zara Patel ಎಂಬವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿರುವ ವಿಡಿಯೋವನ್ನು ಎಡಿಟ್ ಮಾಡಿ (Deepfake videos) ರಶ್ಮಿಕಾ ಹೆಸರು ಹಾಕಿ ಹರಿಬಿಡಲಾಗಿದೆ ' ಎಂದು  ಅಭಿಷೇಕ್ ಎಂಬ ಟ್ವಿಟ್ಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದಾರೆ. 

ನಟಿ ರಶ್ಮಿಕಾರದ್ದು ಎಂದು ಯಾರೋ ಕಿಡಿಗೇಡಿಗಳು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟ ಈ ವೀಡಿಯೋ ಲಕ್ಷಾಂತರ ಸಂಖ್ಯೆಯಲ್ಲಿ ಶೇರ್ ಆಗಿ ಕೊನೆಗೆ ಅದು ಸ್ವತಃ ನಟಿ ರಶ್ಮಿಕಾವರೆಗೂ ತಲುಪಿದೆ. ಈ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಕೂಡ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಬರೆದುಕೊಂಡಿದ್ದಾರೆ. 'ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಳ್ಳುವ ಇಂತಹ ಕೃತ್ಯಗಳು ಇತ್ತೀಚೆಗೆ ಹೆಚ್ಚುತ್ತಿವೆ. ಇದನ್ನು ಎಲ್ಲರೂ ಖಂಡಿಸಬೇಕು' ಎಂದಿದ್ದಾರೆ. 

ನಟಿ ರಶ್ಮಿಕಾ ಮಂದಣ್ಣರ ಫೇಕ್ ವಿಡಿಯೋ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಬರೆದುಕೊಂಡಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು 'ಮೋದಿ ಸರ್ಕಾರ ಎಲ್ಲ ಡಿಜಿಟಲ್ ಮತ್ತು ಅಂತರ್‌ಜಾಲ ತಾಣಗಳ ಬಳಕೆದಾರರ ಸುರಕ್ಷತೆ ಬಗ್ಗೆ ಕಾಳಜಿ ಹೊಂದಿದೆ. ಆದರೆ, ತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವ ಈ ಯುಗದಲ್ಲಿ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರಂಗಳು ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ' ಎಂದಿದ್ದಾರೆ. 

ಸ್ಕೂಲ್ ಅಥವಾ ಕಾಲೇಜಿನಲ್ಲಿ ಹೀಗೆ ನನ್ನ ಅಶ್ಲೀಲ ವಿಡಿಯೋ ವೈರಲ್ ಆಗಿದ್ದರೆ ಗತಿ ಏನಾಗಿರುತ್ತಿತ್ತೋ!

ಇಂತಹ ಕೃತ್ಯಗಳು ಖಂಡನೀಯ. ಸಾಕ್ಷಿ ಸಮೇತ ಇದು ಡೀಪ್‌ಫೇಕ್ ವಿಡಿಯೋ ಎಂದು ಸಾಬೀತಾಗಿದೆ. ಆದರೆ, ಕಾನೂನು ರೀತ್ಯ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಿದೆ' ಎಂದು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕೂಡ ಈ ಕೃತ್ಯವನ್ನು ಖಂಡಿಸಿ ನಟಿ ರಶ್ಮಿಕಾ ಪರ ನಿಂತಿದ್ದಾರೆ. 

ಬಾತ್ ರೂಮಿನಲ್ಲಿ ಫೇಮಸ್ ವ್ಯಕ್ತಿ ಜತೆ ಟವೆಲ್ ಫೈಟ್ ಮಾಡಿದ್ರು ಕತ್ರಿನಾ ಕೈಫ್; ಭಾರೀ ವೈರಲ್ ಆಯ್ತು ವಿಡಿಯೋ!

ಇಂದಿನ ತಂತ್ರಜ್ಞಾನದ ಯುಗದಲ್ಲಿ, ಇಂತಹ ಕೃತ್ಯಗಳು ನಡೆಯುತ್ತಿರುವುದು ಹೊಸದೇನಲ್ಲ. ಆದರೆ, ಇಂತಹ ದುಷ್ಕೃತ್ಯಗಳನ್ನು ತಡೆಯಲು ಸೂಕ್ತ ಕಾನೂನು ಬೇಕಾಗಿದೆ. ಏಕೆಂದರೆ, ಯಾರದೋ ಮಾನ ಹರಾಜು ಹಾಕಲು ಯಾರನ್ನೋ ಬಳಿಸಿಕೊಳ್ಳುವ ಇಂತ ನಡೆಗಳು ಸ್ವಾಗತಾರ್ಹವಲ್ಲ. ಇಂದು ನಟಿ ರಶ್ಮಿಕಾ ಫೇಕ್ ವಿಡಿಯೋ ಬಂದಂತೆ ನಾಳೆ ಹಲವರದು ಬರಬಹುದು. ಡೀಪ್‌ಫೇಕ್ ವಿಡಿಯೋ ಎಂದು ಸಾಬೀತಾಗುವವರೆಗೆ ಅವರು ಅನುಭವಿಸುವ ಮಾನಸಿಕ ಯಾತನೆಗೆ, ಹರಾಜಾದ ಮಾನಕ್ಕೆ ಜವಾಬ್ಧಾರಿ ಯಾರು?

Follow Us:
Download App:
  • android
  • ios