ʼತುಪ್ಪದ ಬೆಡಗಿʼ ರಾಗಿಣಿ ದ್ವಿವೇದಿ ಅವರು ಪೌರಕಾರ್ಮಿಕರನ್ನು ಭೇಟಿಯಾಗಿದ್ದಾರೆ, ಅಷ್ಟೇ ಅಲ್ಲದೆ ಅವರ ಕಾಲಿಗೂ ಕೂಡ ಬಿದ್ದಿದ್ದಾರೆ. 

ಐಟಂ ಸಾಂಗ್‌ ಮಾಡುತ್ತ, ಸಿನಿಮಾಗಳಲ್ಲಿ ನಟಿಸುತ್ತಿರುವ ರಾಗಿಣಿ ದ್ವಿವೇದಿ ಅವರು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್‌ ಆಗಿದ್ದಾರೆ. ʼನಿನ್ನ ಬೂ ಅಂದ್ರೆ ಇಷ್ಟʼ, ʼಅವಳು ವ್ಯೂ ನನಗೆ ಇಷ್ಟʼ ಎಂದು ಇತ್ತೀಚೆಗೆ ರ್ಯಾಪ್‌ ಸಾಂಗ್‌ನಲ್ಲಿ ಕುಣಿದಿದ್ದ ರಾಗಿಣಿ ದ್ವಿವೇದಿ ಈಗ ಪೌರಕಾರ್ಮಿಕರ ಕಾಲಿಗೆ ಬಿದ್ದಿದ್ದಾರೆ.

ಪೌರಕಾರ್ಮಿಕರ ಜೊತೆ ರಾಗಿಣಿ ದ್ವಿವೇದಿ! 
ಬೆಂಗಳೂರಿನ ರಾಗಿಣಿ ದ್ವಿವೇದಿಯ ಮನೆಯ ಮುಂದೆ ಪೌರಕಾರ್ಮಿಕರು ಸೇರಿದ್ದಾರೆ. ಆಗ ಅವರೆಲ್ಲರನ್ನು ರಾಗಿಣಿ ಅಪ್ಪಿಕೊಂಡು, ಕುಶಲ ವಿಚಾರಿಸಿದ್ದಾರೆ. ಅಷ್ಟೇ ಅಲ್ಲದೆ ಹಿರಿಯ ಪೌರ ಕಾರ್ಮಿಕನ ಕಾಲಿಗೆ ಬಿದ್ದಿದ್ದಾರೆ. ಈ ವಿಡಿಯೋವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಾಗಿಣಿ ದ್ವಿವೇದಿ ಅವರ ಈ ನಡೆ ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. 

ʼಅವಳ ಬೂ ನನಗೆ ಇಷ್ಟʼ-ʼತುಪ್ಪ ಬೇಕಾ ತುಪ್ಪʼ ಬಳಿಕ ನಶೆ ಏರಿಸಿದ ರಾಗಿಣಿ ದ್ವಿವೇದಿ ಹೊಸ ಹಾಡು!

ʼಅವಳ ಬೂ ನನಗೆ ಇಷ್ಟʼ ಹಾಡಿನಲ್ಲಿ ರಾಗಿಣಿ ದ್ವಿವೇದಿ! 
ರಾಗಿಣಿ ದ್ವಿವೇದಿ ಅವರು ʼಅವಳ ಬೂ ನನಗೆ ಇಷ್ಟʼ, ʼಅವಳ ವ್ಯೂ ನನಗೆ ಇಷ್ಟʼ ಎಂಬ ರ್ಯಾಪ್‌ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು. ʼತುಪ್ಪ ಬೇಕು ತುಪ್ಪʼ ಹಾಡಿನ ಬಳಿಕ ಈ ಹಾಡು ನಿಜಕ್ಕೂ ಪಡ್ಡೆಹುಡುಗರ ನಶೆ ಏರಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇಂಗ್ಲಿಷ್‌, ಕನ್ನಡ ಮಿಶ್ರಿತ ಸಾಹಿತ್ಯ ಈ ಹಾಡಿನಲ್ಲಿದೆ. ಇಲ್ಲಿ ಹೆಣ್ಣಿನ ದೇಹದ ಅಂಗಾಂಗಳ ಬಗ್ಗೆ ಮಾತನಾಡಲಾಗಿದೆ. ಹೆಣ್ಣು ಮಕ್ಕಳ ದೇಹದ ಭಾಗದ ಬಗ್ಗೆ ಮಾತನಾಡಿದ್ದು, ಕೆಲವರಿಗೆ ಇಷ್ಟವಾಗಿಲ್ಲ. ಟಬ್ಬಿ ಅವರು ಈ ಹಾಡಿಗೆ ಸಾಹಿತ್ಯ ಬರೆದು, ಸಂಗೀತ ಸಂಯೋಜನೆ ಮಾಡಿದ್ದಾರೆ. ಉದಾಸ್‌ ಕೊಯ ಅವರ ಕ್ಯಾಮರಾ ಕೈಚಳಕ ಈ ಹಾಡಿಗೆ ಇದೆ. ಈ ಹಾಡಿಗೆ ಪ್ರೀತಂ ನೃತ್ಯ ಸಂಯೋಜನೆ ಮಾಡಿರುವರು. 

ʼಅವಳ ಬೂ ನನಗೆ ಇಷ್ಟʼ-ʼತುಪ್ಪ ಬೇಕಾ ತುಪ್ಪʼ ಬಳಿಕ ನಶೆ ಏರಿಸಿದ ರಾಗಿಣಿ ದ್ವಿವೇದಿ ಹೊಸ ಹಾಡು!

ಸಿನಿಮಾಗಳಲ್ಲಿ ರಾಗಿಣಿ ದ್ವಿವೇದಿ ನಟನೆ!
ಬ್ಯಾಕ್‌ ಟು ಬ್ಯಾಕ್‌ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡ ರಾಗಿಣಿ ದ್ವಿವೇದಿ ಅವರು ಇತ್ತೀಚೆಗೆ ರಾಜವರ್ಧನ್‌ ನಟನೆಯ ʼಗಜರಾಮʼ, ಶ್ರೀನಗರ ಕಿಟ್ಟಿ, ರಚಿತಾ ರಾಮ್‌ ಜೊತೆಗೆ ʼಸಂಜು ವೆಡ್ಸ್‌ ಗೀತಾ 2ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮಲಯಾಳಂ ನಟ ಮೋಹನ್‌ ಲಾಲ್‌ ಮನೆಗೆ ರಾಗಿಣಿ ಭೇಟಿ ಕೊಟ್ಟಿದ್ದರು. ಮೋಹನ್‌ಲಾಲ್‌ ಮನೆಯಲ್ಲಿ ಅವರು ಭರ್ಜರಿ ಭೋಜನ ಸವಿದಿದ್ದರು. ಮೋಹನ್‌ಲಾಲ್‌ ಮನೆಯ ಆತೀಥ್ಯದ ಬಗ್ಗೆ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದರು.