ಸಿನಿಮಾಗಳಲ್ಲಿ ನಟಿಸುವ ರಾಗಿಣಿ ದ್ವಿವೇದಿ ಅವರು, ಹೊಸ ಆಲ್ಬಮ್ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಸಾಹಿತ್ಯ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ʼಅವಳ ವ್ಯೂ ನನಗೆ ಇಷ್ಟ, ಅವಳ ಬೂ ನನಗೆ ಇಷ್ಟ. ಅವಳ ಬೂ ಬ್ಯೂಟಿಫುಲ್ʼ ಎಂಬ ಹಾಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಟಬ್ಬಿ ( ಅಭಿಷೇಕ್ ) ಎನ್ನುವವರು ಈ ಹಾಡಿನ ಸಾಹಿತ್ಯ ಬರೆದು, ಸಂಗೀತ ಸಂಯೋಜನೆ ಮಾಡಿದ್ದಾರೆ.
ಈ ತಂಡದಲ್ಲಿ ಯಾರಿದ್ದಾರೆ?
ದಿನೇಶ್ ಅವರು ಈ ಹಾಡಿನ ನಿರ್ಮಾಣ ಮಾಡಿದ್ದಾರೆ. ರಾಗಿಣಿ ದ್ವಿವೇದಿ, ಟಬ್ಬಿ ಅವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಉದಾಸ್ ಕೊಯ ಅವರ ಕ್ಯಾಮರಾ ಕೆಲಸ ಈ ಹಾಡಿಗಿದೆ. ಪ್ರೀತಂ ಅವರು ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.
ನಟಿ ರನ್ಯಾ ಆಯ್ತು, ಈಗ ಸ್ಯಾಂಡಲ್‌ವುಡ್ ನ ಇಬ್ಬರು ನಟಿಯರಿಗೆ ಸುಪ್ರೀಂನಿಂದ ಬಿಗ್ ಶಾಕ್!
ನಶೆ ಏರಿಸುವಂತಿದೆ ಹಾಡು!
ಈ ಹಾಡು ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಈ ಹಾಡಿನ ಬಗ್ಗೆ ಈ ತಂಡ ಅಷ್ಟಾಗಿ ಪ್ರಚಾರ ಮಾಡಿದಂತಿಲ್ಲ. ಆದರೆ ಈ ರ್ಯಾಪ್ ಸಾಂಗ್ ನಶೆ ಏರಿಸುವಂತಿದೆ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಈ ಹಾಡು ಬ್ರೇಕ್ ಕೊಡತ್ತಾ?
ಇನ್ನು ರವಿಚಂದ್ರನ್ ಜೊತೆಗೆ ʼತುಪ್ಪ ಬೇಕಾ ತುಪ್ಪʼ ಎಂದು ಹಾಡು ಕುಣಿದಿದ್ದ ರಾಗಿಣಿ ದ್ವಿವೇದಿಗೆ ಈ ಹಾಡು ಬ್ರೇಕ್ ಕೊಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಸಾಕಷ್ಟು ಐಟಮ್ ಸಾಂಗ್‌ಗಳಲ್ಲಿ ರಾಗಿಣಿ ಕಾಣಿಸಿಕೊಂಡರೂ ಕೂಡ ʼತುಪ್ಪ ಹಾಡಿನ ನಂತರ ಈ ಹಾಡು ಕಿಕ್ ಏರಿಸಿದೆʼ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ರನ್ಯಾ ರಾವ್ ಜಾಮೀನು ತೀರ್ಪು ಬಾಕಿ: ಬಂಧನಕ್ಕೆ ಅರೆಸ್ಟ್ ಮೆಮೋದಲ್ಲಿ ತನಿಖಾಧಿಕಾರಿ ಸೂಕ್ತ ಕಾರಣ ನೀಡಿಲ್ಲ
ಅಸಮಾಧಾನ ಯಾಕೆ?
ಇಂಗ್ಲಿಷ್ ಹಾಗೂ ಕನ್ನಡ ಮಿಶ್ರಿತ ಸಾಹಿತ್ಯ ಇಲ್ಲಿದೆ. ದೇಹದ ಅಂಗಾಂಗಳ ಬಗ್ಗೆ ಪರೋಕ್ಷವಾಗಿ ಇಲ್ಲಿ ಮಾತನಾಡಲಾಗಿದೆ. ಇನ್ನು ಈ ಸಾಹಿತ್ಯದ ಬಗ್ಗೆ ಕೆಲವರು ಅಸಮಾಧಾನ ಕೂಡ ವ್ಯಕ್ತಪಡಿಸುತ್ತಿದ್ದಾರೆ. ಈ ಹಾಡು ರಿಲೀಸ್ ಆಗಿ ಇನ್ನು ಇಪ್ಪತ್ನಾಲ್ಕು ಗಂಟೆ ಕಳೆದಿಲ್ಲ. ಮುಂದಿನ ದಿನಗಳಲ್ಲಿ ಈ ಹಾಡಿಗೆ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂದು ಕಾದು ನೋಡಬೇಕಿದೆ.
ಮೋಹನ್ ಲಾಲ್ ಜೊತೆ ಸಿನಿಮಾ!
ನಟಿ ರಾಗಿಣಿ ದ್ವಿವೇದಿ ಅವರು ಚಿತ್ರರಂಗದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ. ʼಗಜರಾಮʼ, ʼಸಂಜು ವೆಡ್ಸ್ ಗೀತಾ 2ʼ ಸಿನಿಮಾದಲ್ಲಿ ಅವರು ಕಾಣಿಸಿಕೊಂಡಿದ್ದರು. ಇನ್ನು ಮಲಯಾಳಂ ನಟ ಮೋಹನ್ ಲಾಲ್ ಅವರ ಜೊತೆ ಸಿನಿಮಾ ಮಾಡುತ್ತಿದ್ದು, ಇತ್ತೀಚೆಗೆ ಕೇರಳದ ಅವರ ಮನೆಗೆ ಭೇಟಿ ಕೊಟ್ಟಿದ್ದರು. ರಾಗಿಣಿಗೋಸ್ಕರ ಭರ್ಜರಿ ಭೋಜನ ರೆಡಿ ಮಾಡಲಾಗಿತ್ತು. ಅಷ್ಟೇ ಅಲ್ಲದೆ ರಾಗಿಣಿ ಅವರ ಕೆಲ ಫೋಟೋಗಳನ್ನು ಮೋಹನ್‌ಲಾಲ್ ಅವರೇ ತೆಗೆದಿದ್ದಾರಂತೆ.

