Asianet Suvarna News Asianet Suvarna News

Sandalwood Cinderella ರಾಧಿಕಾ ಪಂಡಿತ್​ ಯುಗಾದಿಗೆ ವಿಷ್​ ಮಾಡಿದ್ದು ಹೀಗೆ!

ಬೆಳ್ಳಿ ಪರದೆಯಿಂದ ತುಸು ದೂರವಾಗಿರುವ ನಟಿ ರಾಧಿಕಾ ಪಂಡಿತ್​ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿದ್ದು, ಇದೀಗ ಇನ್​ಸ್ಟಾಗ್ರಾಮ್​ನಲ್ಲಿ ಯುಗಾದಿಯ ಶುಭ ಕೋರಿದ್ದಾರೆ. ಅವರು ಹೇಳಿದ್ದೇನು? 
 

Actress Radhika Pandit wishes for Ugadi through Social Media
Author
First Published Mar 22, 2023, 7:57 PM IST

ಹೊಸ ವರ್ಷದ ಯುಗಾದಿ ಹಬ್ಬದ ಸಡಗರ ಎಲ್ಲೆಲ್ಲೂ ಮನೆಮಾಡಿದೆ. ಬಹುತೇಕ ಮನೆಗಳಲ್ಲಿ ಬೆಳಗ್ಗೆಯಿಂದಲೂ ಭಾರಿ ಸಡಗರ-ಸಂಭ್ರಮ ಜರುಗಿದ್ದು, ಹಲವಾರು ನಟ-ನಟಿಯರೂ ತಮ್ಮ ಮನೆಗಳಲ್ಲಿ ಯುಗಾದಿ ಹಬ್ಬವನ್ನು ಆಚರಿಸಿದ್ದಾರೆ. ಬಗೆ ಬಗೆಯ ರೀತಿಯ  ಹೊಸ ಹೊಸ ಬಟ್ಟೆಗಳನ್ನು ತೊಟ್ಟುಕೊಂಡು ಯುಗಾದಿ ಸಂಭ್ರಮದ ಫೋಟೋಗಳನ್ನು ಹಲವು ನಟಿಯರು ಶೇರ್​ ಮಾಡಿಕೊಂಡಿದ್ದಾರೆ.   ಸ್ಯಾಂಡಲ್‌ವುಡ್ ಸ್ಟಾರ್‌ಗಳ ಮನೆಯಲ್ಲೂ ಹಬ್ಬ ಜೋರಾಗಿದೆ. ಕಿರುತೆರೆ ಕಲಾವಿದೆಯರಿಂದ ಹಿಡಿದು ಹಲವು ನಟಿಯರು ಹೊಸ ವಸ್ತ್ರ, ಆಭರಗಳನ್ನು ತೊಟ್ಟು ಯುಗಾದಿಗೆ ವಿಷ್​ ಮಾಡಿದ್ದಾರೆ. ಯುಗಾದಿ ಅಥವಾ ಇನ್ನಾವುದೇ ಹಬ್ಬ ಎಂದಾಕ್ಷಣ ಮೊದಲು ನೆನಪಿಗೆ ಬರುವುದು  ರಾಕಿಂಗ್ ಸ್ಟಾರ್ ದಂಪತಿ. ಬಹುತೇಕ ಎಲ್ಲಾ ಹಬ್ಬ-ಹರಿದಿಗಳನ್ನು ಯಶ್​ ಮತ್ತು ರಾಧಿಕಾ ದಂಪತಿ ಬಲು ಸಡಗರದಿಂದ ಆಚರಿಸುತ್ತಾರೆ.  

ಮಕ್ಕಳಾದ ಬಳಿಕ ಸ್ವಲ್ಪ  ಬೆಳ್ಳಿತೆರೆಯಿಂದ ದೂರ ಸರಿದಿದ್ದ ನಟಿ ಸ್ಯಾಂಡಲ್​ವುಡ್​ ಸಿಂಡ್ರೆಲ್ಲಾ (Sandalwood Cinderella) ರಾಧಿಕಾ ಪಂಡಿತ್​,  ಕಮ್ ಬ್ಯಾಕ್ (Come Back) ಮಾಡಲು  ಭರ್ಜರಿ ತಯಾರಿ ನಡೆಸುತ್ತಾರೆ ಎನ್ನಲಾಗಿದೆ. ಮನೆ, ಸಂಸಾರ ಎಂದು ಮಕ್ಕಳ ಜೊತೆ ಫುಲ್ ಟೈಮ್ ಬ್ಯುಸಿಯಾಗಿದ್ದ ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಮಕ್ಕಳ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುವ ಇವರು,  ಹಬ್ಬಗಳ ಶುಭಾಶಯ ಕೋರುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಕಳೆದ ವರ್ಷ ಯಶ್​ ಮತ್ತು ರಾಧಿಕಾ ದಂಪತಿ  (Yash, Radhika Pandith) ಹೊಸ ಮನೆಯಲ್ಲಿ ಯುಗಾದಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು.  ರೇಷ್ಮೆ ಪಂಚೆ ಹಳದಿ ಶರ್ಟ್‌ನಲ್ಲಿ ಯಶ್, ಪಿಂಕ್ ಬಣ್ಣದ ರೇಶ್ಮೆ ಸೀರೆಯಲ್ಲಿ ರಾಧಿಕಾ ಪಂಡಿತ್ ಕಾಣಿಸಿಕೊಂಡಿದ್ದರು. ಇನ್ನು ಇಬ್ಬರು ಸ್ಟಾರ್ ಕಿಡ್‌ಗಳು ಒಂದೇ ಕಾಂಬಿನೇಷನ್‌ ರೆಡ್‌ ಆಂಡ್‌ ವೈಟ್‌ನಲ್ಲಿ ಮಿಂಚಿದ್ದರು. ಇವರ ಮನೆಯಲ್ಲಿ ಹಬ್ಬದ ಊಟ ಭರ್ಜರಿಯಾಗಿ ನಡೆದಿತ್ತು. ಬಾಳೆ ಎಲೆ ಊಟ ಮಾಡಿದ್ದ ಫೋಟೋ ಶೇರ್​ ಮಾಡಿಕೊಂಡಿದ್ದರು.  ಒಬ್ಬಟ್ಟು, ಕೋಸಂಬರಿ ಸೇರಿದಂತೆ ವೆರೈಟಿ ವೆರೈಟಿ ಅಡುಗೆ ಮಾಡಿದ್ದರು. 'ಈ ವರ್ಷ ಬೇವಿಗಿಂತ ಬೆಲ್ಲ ಜಾಸ್ತಿ ಇರಲಿ. ತುಂಬಾ ಒಬ್ಬಟ್ಟು ತಿನ್ನಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶುಯಗಳು' ಎಂದು ರಾಧಿಕಾ ಬರೆದುಕೊಂಡಿದ್ದರು. 

Sandalwood Cinderella ರಾಧಿಕಾ ಪಂಡಿತ್​ ಟೀಚರ್​ ಬದ್ಲು ನಟಿಯಾಗಿದ್ದು ಹೇಗೆ?

ಈ ವರ್ಷವೂ ದಂಪತಿ ಮನೆಯಲ್ಲಿ ಹಬ್ಬವನ್ನು ಸೆಲಬ್ರೇಟ್ ಮಾಡಿದ್ದು, ಅದರ ಅಪ್​ಡೇಟ್ಸ್​ ಇನ್ನಷ್ಟೇ ಬರಬೇಕಿದೆ. ಅದಕ್ಕೂ ಮುನ್ನ ರಾಧಿಕಾ ಅವರು ತಮ್ಮ ಇನ್​ಸ್ಟಾಗ್ರಾಮ್​ (Instagram) ಖಾತೆಯಲ್ಲಿ ಎಲ್ಲರಿಗೂ ಯುಗಾದಿ ಶುಭಾಶಯಗಳನ್ನು ತಿಳಿಸಿದ್ದಾರೆ. ಎಲ್ಲರಿಗೂ ಯುಗಾದಿಯ ಶುಭಾಶಯಗಳು ಎಂದು ಬರೆದಿರುವ ನಟಿ,  ಯುಗಾದಿ, ಗುಡಿ ಪಾಡ್ವ ಮತ್ತು ಚೈತ್ರ ನವರಾತ್ರಿಯ ಶುಭ ಸಂದರ್ಭದಲ್ಲಿ, ಎಲ್ಲರಿಗೂ ಹಾರೈಕೆಗಳು. ಎಲ್ಲರ ಬಾಳಿನಲ್ಲಿಯೂ  ಸಮೃದ್ಧಿ, ಯಶಸ್ಸು ತಂದು ಎಲ್ಲರ ಕಾಮನೆಗಳು ಈಡೇರಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
 
ಇವರಂತೆಯೇ ಜೊತೆಜೊತೆಯಲಿ ನಟಿ ಮೇಘಾ ಶೆಟ್ಟಿ ಕೂಡ ರೇಷ್ಮೆ ಸೀರೆಯಲ್ಲಿ ಮಿಂಚಿದ್ದ ಫೋಟೋ ಶೇರ್ ಮಾಡಿಕೊಂಡು ಯುಗಾದಿಯ ಶುಭ ಹಾರೈಕೆ ಮಾಡಿದ್ದಾರೆ. ಅದೇ ರೀತಿ, ವಸಿಷ್ಠ ಮತ್ತು ಹರಿಪ್ರಿಯಾ ಜೋಡಿಗೆ ಮೊದಲ ಯುಗಾದಿ ಸಂಭ್ರಮ. ಮದುವೆಯಾಗಿ ಮೊದಲ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿ ಅಭಿಮಾನಿಗಳಿಗೂ ಯುಗಾದಿ ಶುಭಾಶಯ ತಿಳಿಸಿದ್ದಾರೆ. ಸಿಂಹಪ್ರಿಯಾ ಜೋಡಿ ಇದೇ ವರ್ಷ ಜನವರಿ 26ರಂದು ಮೈಸೂರಿನಲ್ಲಿ (Mysore) ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರೂ ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಮದುವೆಯಾಗಿ ಎರಡು ತಿಂಗಳು ಪೂರೈಸಿದೆ. ಇದೀಗ ಖುಷಿ ಖುಷಿಯಾಗಿ ತಮ್ಮ ಮೊದಲ ಯುಗಾದಿ ಹಬ್ಬವನ್ನ ಆಚರಿಸಿದ್ದಾರೆ. 

ವಸಿಷ್ಠ-ಹರಿಪ್ರಿಯಾ ಜೋಡಿಯ ಮೊದಲ ಯುಗಾದಿ ಸಂಭ್ರಮ ಹೇಗಿದೆ ನೋಡಿ

ಇನ್ನು ರಾಧಿಕಾ ಪಂಡಿತ್​ ಅವರ ಕೆಲಸದ ಕುರಿತು ಹೇಳುವುದಾದರೆ,  ಮೊಗ್ಗಿನ ಮನಸ್ಸು ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರೋ ನಟಿ,  ಕೊನೆಯದಾಗಿ ಅಭಿನಯಿಸಿದ ಚಿತ್ರ ಆದಿ ಲಕ್ಷ್ಮಿ ಪುರಾಣ. 

Follow Us:
Download App:
  • android
  • ios