ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಕಡಲೆಕಾಯಿ ಪರಿಷೆ ಸುತ್ತಿದ್ದಾರೆ. ಮುಖಕ್ಕೆ ವಿಚಿತ್ರ ಮುಖವಾಡ ಹಾಕಿದ್ದ ಅವರನ್ನು ಯಾರೂ ಗುರುತಿಸಲಿಲ್ಲ. ರಚಿತಾ ಯಾವ ಗೆಟಪ್ ನಲ್ಲಿ ಬಂದಿದ್ರೂ? ನಿಮ್ಮ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದು ಅವರೇನಾ? ಚೆಕ್ ಮಾಡಿ.

ಸೆಲೆಬ್ರಿಟಿಗಳಿಗೆ ಮನಸ್ಸು ಬಂದಲ್ಲಿ ಸುತ್ತಾಡೋದು ಕಷ್ಟ. ಅವರು ಬೀದಿಗಿಳಿದ್ರೆ ಜನ ಮುಗಿ ಬೀಳ್ತಾರೆ. ಸಾಮಾನ್ಯರಂತೆ ಶಾಪಿಂಗ್, ಜಾತ್ರೆ ಅಂತ ಅವರು ಓಡಾಡೋಕೆ ಸಾಧ್ಯವಿಲ್ಲ. ಇಂಥ ಟೈಂನಲ್ಲಿ ಸೆಲೆಬ್ರಿಟಿಗಳು ಹೊಸ ಹೊಸ ಐಡಿಯಾ ಮಾಡ್ತಾರೆ. ಹೆಲ್ಮೆಟ್ ಹಾಕಿ, ಮಾಸ್ಕ್ ಧರಿಸಿ, ಜನಸಾಮಾನ್ಯರ ಮಧ್ಯೆ ಸೆಲೆಬ್ರಿಟಿಗಳು ಓಡಾಟ ನಡೆಸ್ತಾರೆ. ಈಗ ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್, ಬಸವನಗುಡಿಯಲ್ಲಿ ನಡೆಯುತ್ತಿರುವ ಕಡಲೆಕಾಯಿ ಪರಿಷೆ ಸುತ್ತಿದ್ದಾರೆ. ಅವರು ಮುಖಕ್ಕೆ ಮಾಸ್ಕ್ ಹಾಕಿ ಪರಿಷೆ ಎಂಜಾಯ್ ಮಾಡಿದ್ದು ಯಾರಿಗೂ ಅವ್ರ ಗುರುತು ಸಿಕ್ಕಿಲ್ಲ.

ಕಡಲೆಕಾಯಿ ಪರಿಷೆ (kadalekai parishe) ಎಂಜಾಯ್ ಮಾಡಿದ ರಚಿತಾ ರಾಮ್ (Rachita Ram) :

ಬಸವನಗುಡಿಯಲ್ಲಿ ಐದು ದಿನಗಳ ಕಾಲ ನಡೆಯುವ ಕಡಲೆಕಾಯಿ ಪರಿಷೆ ಜೋರು ಪಡೆದಿದೆ. ಲಕ್ಷಾಂತರ ಮಂದಿ ಪರಿಷೆಗೆ ಬರ್ತಿದ್ದಾರೆ. ಬಗೆ ಬಗೆಯ ಕಡಲೆಕಾಯಿ ಜೊತೆ ಸ್ಟ್ರೀಟ್ ಶಾಪಿಂಗ್ ಇಷ್ಟಪಡುವವರಿಗೆ ಇದು ಹೇಳಿ ಮಾಡಿಸಿದ ಜಾಗ. ಸೆಲೆಬ್ರಿಟಿಗಳೂ ಇಂಥ ಜಾಗಕ್ಕೆ ಹೋಗಲು ಇಷ್ಟಪಡ್ತಾರೆ. ಆದ್ರೆ ಇದು ಕಷ್ಟ ಸಾಧ್ಯ. ಈಗ ರಚಿತಾ ರಾಮ್ 18 ವರ್ಷಗಳ ನಂತ್ರ ಕಡಲೆ ಕಾಯಿ ಪರಿಷೆಗೆ ಭೇಟಿ ನೀಡಿದ್ದಾರೆ. ಅವರು ಬಂದಿದ್ದು, ಹೋಗಿದ್ದು ಯಾರಿಗೂ ತಿಳಿಯಲಿಲ್ಲ.

ಸುಧಿ ನಿದ್ರೆ ಹಾಳು ಮಾಡಿದ ರಿಷಾ ಕೈ, ಹೆಂಡ್ತಿ ಕೆಂಗಣ್ಣಿಗೆ ಗುರಿಯಾದ ಕಾಕ್ರೋಚ್

ಸಾಮಾನ್ಯವಾಗಿ ಇಂಥ ಪರಿಷೆ, ಜಾತ್ರೆಗಳಲ್ಲಿ ಅನೇಕರು ಮಾಸ್ಕ್ ಧರಿಸಿ ಓಡಾಡ್ತಾರೆ. ಹಾಗಾಗಿ ಮಾಸ್ಕ್ ಒಳಗಿರುವ ಮುಖ ಯಾವ್ದು ಅಂತ ಜನರು ನೋಡೋದಿಲ್ಲ. ಇದನ್ನೇ ರಚಿತಾ ಟೀಂ ಬಳಸಿಕೊಂಡಿದೆ. ರಚಿತಾ ರಾಮ್ ಸಿಂಹದ ಮುಖ ಧರಿಸಿ ಪರಿಷೆ ಸುತ್ತಿದ್ದಾರೆ. ಈ ವಿಷ್ಯವನ್ನು ರಚಿತಾ ರಾಮ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ನಂತ್ರವೇ ಜನರಿಗೆ ರಚಿತಾ ರಾಮ್ ಕಡಲೆಕಾಯಿ ಪರಿಷೆಗೆ ಬಂದಿದ್ರು ಅನ್ನೋದು ಗೊತ್ತಾಗಿದೆ.

ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಾಕಿದ ನಟಿ :

ರಚಿತಾ ರಾಮ್ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಾಗೂ ಫೋಟೋ ಪೋಸ್ಟ್ ಮಾಡಿದ್ದಾರೆ. ಪರಿಷೆ ಸುತ್ತಾಡ್ತಾ ಮಾತನಾಡ್ತಿರೋದನ್ನು ನೀವು ಕಾಣಬಹುದು. ಕೇಸರಿ ಬಣ್ಣದ ಸಿಂಹದ ಮುಖವಾಡ ಧರಿಸಿರುವ ರಚಿತಾ ರಾಮ್ ಸುತ್ತಮುತ್ತ ಮುಖವಾಡ ಧರಿಸಿರುವ ಒಂದಿಷ್ಟು ಹುಡುಗರಿದ್ದಾರೆ. ಎಲ್ಲರಿಗೂ ನಮಸ್ಕಾರ. ನಾನು ಕಡಲೆಕಾಯಿ ಪರಿಷೆಯಲ್ಲಿದ್ದೇನೆ. ನಮ್ಮ ಗೆಟಪ್ ಹೇಗಿದೆ? ಎಷ್ಟೋ ವರ್ಷದ ನಂತ್ರ ಹೀಗೆ ಎಲ್ಲರ ಜೊತೆ ಓಡಾಡೋದು ತುಂಬಾ ಖುಷಿ ನೀಡುತ್ತೆ. ಒಂದಿಷ್ಟು ಜನರ ಜೊತೆ ಸೆಲ್ಫಿ ತೆಗೆದುಕೊಂಡಿದ್ದೇನೆ. ಆದ್ರೆ ಯಾರಿಗೂ ನಾನು ಅಂತ ಗೊತ್ತಾಗ್ಲಿಲ್ಲ. ನನ್ನ ಜೊತೆ ಸೆಲ್ಫಿ ತೆಗೆದುಕೊಂಡೋರು ಟ್ಯಾಗ್ ಮಾಡಿ ಅಂತ ರಚಿತಾ ರಾಮ್ ಹೇಳಿದ್ದಾರೆ. ಇವತ್ತು ನನ್ನ ಸಿನಿಮಾ ಕ್ರಿಮಿನಲ್ ಶೂಟಿಂಗ್ ಮುಗುಸ್ಕೊಂಡು ಕಡಲೆಕಾಯಿ ಪರಿಷೆಗೆ ಹೋಗಿದ್ದು ಹೀಗೆ. ಎಷ್ಟು ಮಜಾ ಮಾಡಿದಿನಿ ಗೊತ್ತಾ? , ಬಿಗ್ ಲವ್ ಟು ಮೈ ಬಾಯ್ಸ್ , ಮಾಸ್ಕ್ ಕೊಡಿಸಿದ್ದಕ್ಕೆ ಧನ್ಯವಾದಗಳು ವರುಣ್ ಗೌಡ ಅಂತ ರಚಿತಾ ರಾಮ್ ಶೀರ್ಷಿಕೆ ಹಾಕಿದ್ದಾರೆ. ಅವರ ತಂಡದ ಜೊತೆಗಿರುವ ಫೋಟೋವನ್ನೂ ಹಂಚಿಕೊಂಡಿದ್ದಾರೆ.

Bigg Boss ರಘು ಪತ್ನಿ ಯಾವ ಹೀರೋಯಿನ್‌ಗೂ ಕಮ್ಮಿ ಇಲ್ಲ! ಅವರ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ!

ರಚಿತಾ ರಾಮ್ ಈ ವಿಡಿಯೋ ನೋಡಿದ ಅಭಿಮಾನಿಗಳು, ಇನ್ನೊಂದು ಸ್ವಲ್ಪ ಮೊದಲೇ ಹಾಕ್ಬೇಕಿತ್ತು, ನಾವು ಪರಿಷೆಯಲ್ಲೇ ಇದ್ವಿ ಅಂತ ಕಮೆಂಟ್ ಮಾಡಿದ್ದಾರೆ. ಇದು ಕ್ರಿಮಿನಲ್ ಐಡಿಯಾ ಅಂತ ರಚಿತಾ ರಾಮ್ ಪ್ಲಾನ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ರಚಿತಾ ರಾಮ್, ಕ್ರಿಮಿನಲ್ ಚಿತ್ರಕ್ಕೆ ಸಹಿ ಹಾಕಿದ್ದು, ಧ್ರುವ ಸರ್ಜಾ ಜೊತೆ ಅವರು ನಟಿಸಲಿದ್ದಾರೆ. ಇದು ಹಾವೇರಿ ನೈಜ ಘಟನೆಯನ್ನು ಆಧರಿಸಿದ್ದು, ಎಂಟು ವರ್ಷಗಳ ನಂತ್ರ ರಚಿತಾ – ಧ್ರುವ ಮತ್ತೆ ತೆರೆ ಮೇಲೆ ಒಂದಾಗಿ ಬರ್ತಿದ್ದಾರೆ.

View post on Instagram