ನನಗೆ 8 ಮಕ್ಕಳು ಬೇಕಿತ್ತು... ಆದ್ರೆ... ನಟಿ ಪ್ರಿಯಾಂಕಾ ಉಪೇಂದ್ರ ರಿವೀಲ್ ಮಾಡಿದ ಗುಟ್ಟೇನು?
ನಟಿ ಪ್ರಿಯಾಂಕಾ ಉಪೇಂದ್ರ ಅವರು ತಮಗೆ ಮಕ್ಕಳ ಮೇಲೆ ಇರುವ ಪ್ರೀತಿಯ ಬಗ್ಗೆ ಮಾತನಾಡುತ್ತಲೇ ಗುಟ್ಟೊಂದನ್ನು ರಿವೀಲ್ ಮಾಡಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಮೋಸ್ಟ್ ಬ್ಯೂಟಿಫುಲ್ ಜೋಡಿ ಎಂದೇ ಬಿಂಬಿತವಾಗಿರುವ ಕೆಲವು ಸೆಲೆಬ್ರಿಟಿಗಳ ಪೈಕಿ ಉಪೇಂದ್ರ ಮತ್ತು ಪ್ರಿಯಾಂಕಾ ಜೋಡಿಯೂ ಒಂದು. ಉಪೇಂದ್ರ ಅವರು ಸದ್ಯ ಯುಐ ಚಿತ್ರದ ಖುಷಿಯಲ್ಲಿದ್ದಾರೆ. ಇನ್ನು ಪ್ರಿಯಾಂಕಾ ಅವರ ಕುರಿತು ಹೇಳುವುದಾದರೆ, ಜನಿಸಿದ್ದು ಕೋಲ್ಕತಾದ ಬಂಗಾಳಿ ಫ್ಯಾಮಿಲಿಯಲ್ಲಿ. ಮಾಡೆಲಿಂಗ್ನಲ್ಲಿ ಮಿಂಚಿದವರು. 1996 ರಲ್ಲಿ ಮಿಸ್ ಕೊಲ್ಕತ್ತಾ ಆದವರು. ಕೊನೆಗೆ ಸಿನಿಮಾಗಳು ಅರಸಿ ಬಂದವು. ಕನ್ನಡ, ತಮಿಳು,ತೆಲುಗು, ಬೆಂಗಾಲಿ, ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರೋ ನಟಿ ಎಚ್2ಓ ಚಿತ್ರದ ಹೂವೇ ಹೂವೇ ಹಾಡಿನಿಂದಲೇ ಸಕತ್ ಫೇಮಸ್ ಆಗಿದ್ದಾರೆ. ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ಪ್ರಿಯಾಂಕಾ ಅವರು, ಇದೀಗ ತಮ್ಮ ಮತ್ತು ಉಪೇಂದ್ರ ಅವರ ದಾಂಪತ್ಯ ಜೀವನದ ಕೆಲವು ಗುಟ್ಟುಗಳನ್ನು ತಿಳಿಸಿದ್ದಾರೆ.
ಕಲಾ ಮಾಧ್ಯಮ ಯೂಟ್ಯೂಬ್ ಚಾನೆಲ್ಗೆ ಮಾತನಾಡಿರುವ ನಟಿ, ನನಗೆ ಮಕ್ಕಳೆಂದರೆ ತುಂಬಾ ಇಷ್ಟ. ಏಳೆಂಟು ಮಕ್ಕಳನ್ನು ಮಾಡಿಕೊಳ್ಳಬೇಕು ಎಂಬ ಆಸೆ ಇತ್ತು. ಆದರೆ ಉಪೇಂದ್ರ ಅದಕ್ಕೆ ಬಿಡಲಿಲ್ಲ. ಎರಡೇ ಸಾಕು ಎಂದರು. ನನಗೆ ಮಾತ್ರ ತುಂಬಾ ವರ್ಷ ಆ ಆಸೆ ಇತ್ತು ಎಂದು ಗುಟ್ಟೊಂದು ರಿವೀಲ್ ಮಾಡಿದ್ದಾರೆ. ಅಂದಹಾಗೆ, ಇವರ ಮಕ್ಕಳ ಹೆಸರು ಐಶ್ವರ್ಯ ಮತ್ತು ಆಯುಷ್. ಈಚೆಗಷ್ಟೇ ಮಕ್ಕಳು ಕಾಲೇಜಿಗೆ ಹೋಗುತ್ತಿರುವ ಫೋಟೋ ಶೇರ್ ಮಾಡಿದ್ದ ಪ್ರಿಯಾಂಕಾ ಅವರು, ಕಾಲ ಎಷ್ಟು ಬೇಗ ಓಡ್ತಿದೆ. ಇನ್ನೂ ಸ್ಕೂಲಿಗೆ ಡ್ರಾಪ್ ಮಾಡಿ ಬರುವ ಭಾವನೆಯಲ್ಲಿರುವೆ. ಎಷ್ಟು ಬೇಗ ಕಾಲೇಜಿಗೆ ಹೋದರು ಎಂದು ಹೇಳಿದ್ದರು.
'ಲಕ್ಷ್ಮೀ ನಿವಾಸ' ನಟಿ ಮಾನಸಾಗೆ ಊಟ, ತಿಂಡಿ, ಟೀ ಎಲ್ಲವೂ ತಣ್ಣಗಿರ್ಬೇಕಂತೆ! 2ನೇ ಪತಿಯಿಂದ ರಟ್ಟಾಯ್ತು ಗುಟ್ಟು...
ಇದೇ ವೇಳೆ, ತಾವು ಮತ್ತು ಉಪೇಂದ್ರ ಮೊದಲು ಭೇಟಿಯಾಗಿದ್ದು ಹೇಗೆ ಎನ್ನುವ ಬಗ್ಗೆಯೂ ನಟಿ ವಿವರಿಸಿದ್ದಾರೆ. ಅದು 2000ನೇ ಇಸ್ವಿ. ತೆಲುಗಿನ ಸೂರಿ ಚಿತ್ರದಲ್ಲಿ ನಟಿಸುತ್ತಿದ್ದೆ. ತುಂಬಾ ಹುಷಾರು ಇರಲಿಲ್ಲ. ಜ್ವರ ಬಂದಿತ್ತು. ಅದೇ ಸಮಯದಲ್ಲಿ ಉಪೇಂದ್ರ ಅವರ ಸೆಟ್ಗೆ ಹೋಗೋಣ ಎಂದು ನಿರ್ದೇಶಕ ಸಾಂಗ್ಲಿ ಕರೆದರು. ಉಪೇಂದ್ರ ಅಂದರೆ ಯಾರು ಎಂದೇ ನನಗೆ ತಿಳಿದಿರಲಿಲ್ಲ. ಅದಾಗಲೇ ಕನ್ನಡ ಬಿಟ್ಟು ಬೇರೆ ಬೇರೆ ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದೆ. ತಮಿಳು, ತೆಲಗು, ಓಡಿಯಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದೆ. ಜ್ವರ ಇದ್ದರೂ ಅಂದು ಉಪೇಂದ್ರ ಅವರು ಫಿಲ್ಮ್ ಶೂಟ್ ಮಾಡ್ತಾ ಇದ್ದ ಕಡೆ ಹೋಗಿದ್ದೆ. ಅಲ್ಲಿ ಸುಮಾರು ನನ್ನಷ್ಟೇ ಉದ್ದ ಕೂದಲು, ಡಿಫರೆಂಟ್ ಲುಕ್ಕು, ಬಿಗ್ ಸ್ಮೈಲ್ ಇದ್ದ ವ್ಯಕ್ತಿಯನ್ನು ನೋಡಿದೆ. ಮಸ್ಟರ್ಡ್ ಕಲರ್ ಔಟ್ಫಿಟ್ ಹಾಕಿದ್ರು. ಅವರನ್ನು ನೋಡಿದರೆ ಡಿಫರೆಂಟ್ ಆಗಿದ್ದರು. ಅವರು ಯಾರಪ್ಪಾ ಅಂದುಕೊಳ್ತಿರುವಾಗಲೇ ಇವರು ಉಪೇಂದ್ರ ಎಂದು ಪರಿಚಯ ಮಾಡಿಕೊಟ್ಟರು ನಿರ್ದೇಶಕರು. ಆಗಲೂ ಇವರು ಯಾರು ಎಂದು ತಿಳಿದಿರಲಿಲ್ಲ ಎನ್ನುತ್ತಲೇ ಮೊದಲ ಬಾರಿಗೆ ಉಪೇಂದ್ರ ಅವರ ಕಣ್ಣಿಗೆ ತಾವು ಬಿದ್ದ ಬಗೆಯನ್ನು ವಿವರಿಸಿದ್ದಾರೆ ಪ್ರಿಯಾಂಕಾ ಉಪೇಂದ್ರ.
ನನಗೆ ಜ್ವರ ಬಂದಿದ್ದರೂ ಸುಮ್ಮನೇ ಶೂಟಿಂಗ್ ನೋಡುತ್ತಾ ಕುಳಿತಿದ್ದೆ. ಮೇಕಪ್ ಕೂಡ ಇರಲಿಲ್ಲ. ಹಾಗೆಯೇ ಇದ್ದೆ. ಆದರೂ ಉಪೇಂದ್ರ ಅವರು ನನ್ನನ್ನು ನೋಡುತ್ತಲೇ ಇದ್ದರು. ಇವರ ಫೋಟೋ ಏನಾದ್ರೂ ಇದೆಯಾ ಎಂದು ನಿರ್ದೇಶಕರನ್ನು ಕೇಳಿದರು. ಅವರ ಬಳಿ ನನ್ನ ಫೋಟೋ ಇತ್ತು. ಆ ಫೋಟೋಗಳನ್ನು ನೋಡುತ್ತಾ, ಅವರು ನನ್ನನ್ನು ನೋಡುತ್ತಿದ್ದರು. ನಂತರ ಅವಳು ಯಾರು ಎಂದು ನಿರ್ದೇಶಕರನ್ನು ಕೇಳಿದರು. ಆಗಲೇ ಅವರ ತಲೆಯಲ್ಲಿ ಅವರ ಮುಂದಿನ ಚಿತ್ರದ ನಾಯಕಿಯ ಪ್ಲ್ಯಾನ್ ಮಾಡಿದಂತಿದ್ದು ಎಂದಿದ್ದಾರೆ ಪ್ರಿಯಾಂಕಾ. ನಿರ್ದೇಶಕರು ನನ್ನ ಪರಿಚಯ ಮಾಡಿಸಿದರು. ಕೋಲ್ಕತಾದ ಮೂಲದವರು. ತಾಯಿ ಪಶ್ಚಿಮ ಬಂಗಾಳದವರು ಮತ್ತು ತಂದೆ ಉತ್ತರ ಪ್ರದೇಶದವರು. ಇದಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಹೇಳಿದರು. ಆಗಲೂ ನನಗೆ ಅವರ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ ಎಂದು ಅಂದಿನ ದಿನಗಳನ್ನು ಪ್ರಿಯಾಂಕಾ ಉಪೇಂದ್ರ ನೆನಪಿಸಿಕೊಂಡಿದ್ದಾರೆ.