Asianet Suvarna News Asianet Suvarna News

ಜಿಂಕೆ ಮರಿ ನಾ... ಹಾಡಿನ ಮೂಲಕ ಮನಗೆದ್ದ ನಟಿ ನಂದಿತಾ ಶ್ವೇತಾಗೆ ಗಂಭೀರ ಕಾಯಿಲೆ!

ನಂದ ಲವ್ಸ್‌ ನಂದಿತಾ ಮೂಲಕ ಮನೆಮಾತಾಗಿರುವ ಬಹುಭಾಷಾ ನಟಿ ನಂದಿತಾ ಶ್ವೇತಾ ಅವರು ತಮಗಿರುವ ಕಾಯಿಲೆಯ ಕುರಿತು ನೋವು ತೋಡಿಕೊಂಡಿದ್ದಾರೆ. 
 

Actress Nandita Shweta is suffering from Fibromyalgia disorder suc
Author
First Published Jul 16, 2023, 10:41 PM IST

‘ನಂದ ಲವ್ಸ್‌ ನಂದಿತಾ’ (Nanda Loves Nandita) ಚಿತ್ರದ  ಜಿಂಕೆ ಮರಿ ನಾ.. ನೀನು ಜಿಂಕೆ ಮರಿನಾ ಹಾಡು ಎವರ್​ಗ್ರೀನ್​ ಆಗಿದೆ. ಅದರಲ್ಲಿಯೂ ಯುವಕ ಬಾಯಲ್ಲಿ ಇಂದಿಗೂ ಈ ಹಾಡು ನಲಿದಾಡುತ್ತಿದೆ. ಇದರ ಶ್ರೇಯಸ್ಸು ಸಲ್ಲಬೇಕಾದದ್ದು ನಟಿ ನಂದಿತಾ ಶ್ವೇತಾ ಅವರಿಗೆ. ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಬಹುಭಾಷಾ ನಟಿ ನಂದಿತಾ ಶ್ವೇತಾ. ಚಾನೆಲ್​ ಒಂದರಲ್ಲಿ ಆ್ಯಂಕರ್​ ಆಗಿ ಕಿರುತೆರೆ ಪಯಣ ಆರಂಭಿಸಿದ ನಂದಿತಾ 2008 ರಲ್ಲಿ ತೆರೆಕಂಡ `ನಂದ ಲವ್ಸ ನಂದಿತಾ' ಚಿತ್ರದಿಂದ ಸಕತ್​ ಹಿಟ್​ ಆದರು. ಸ್ಯಾಂಡಲ್​ವುಡ್​ಗೆ ಪ್ರವೇಶಿಸಿದ ಮೊದಲ ಚಿತ್ರದಲ್ಲಿಯೇ ಈಕೆಯ ಯಶಸ್ಸು ಸಿಕ್ಕಿದೆ. ಅಲ್ಲಿಯವರೆಗೆ ಶ್ವೇತಾ ಎಂದು ಹೆಸರಿದ್ದ ನಟಿಗೆ ನಂದ ಲವ್ಸ್​ ನಂದಿತಾ ಚಿತ್ರದಲ್ಲಿ ಹೆಸರು ಕೂಡ ಬದಲಾಗಿ `ನಂದಿತಾ' ಶ್ವೇತಾ ಎಂದಾಯಿತು. 

ಅಂದಹಾಗೆ ನಟಿ ಶ್ವೇತಾ (Nandita Shweta) ಸ್ಯಾಂಡಲ್​ವುಡ್​ ಪ್ರವೇಶಿಸುವ ಮುನ್ನ ತಮಿಳು ಚಿತ್ರದಲ್ಲಿ ಸಕ್ರಿಯರಾದವರು. 2012 ರಲ್ಲಿ ತಮಿಳು ಚಿತ್ರರಂಗ ಪದಾರ್ಪಣೆ ಮಾಡಿದ್ದ ಅವರು ಅಲ್ಲಿಯೂ ಯಶಸ್ಸು ಪಡೆದು  2016 ರಲ್ಲಿ ತೆರೆ ಕಂಡ `ಎಕ್ಕಡಕಿ ಪೊಥಾವು ಚಿನ್ಸವಡ' ಚಿತ್ರದ ಮೂಲಕ ಟಾಲಿವುಡ್​ಗೆ ಪದಾರ್ಪಣೆ ಮಾಡಿ ಅಲ್ಲಿಯೂ ಯಶಸ್ಸು ಕಂಡರು. ಮೊದಲ ಚಿತ್ರದಲ್ಲಿಯೇ  `ಅತ್ಯುತ್ತಮ ಪೋಷಕ ನಟಿ' ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಪಡೆದರು. ಈ ನಡುವೆ ನಂದ ಲವ್ಸ್​ ನಂದಿತಾದಲ್ಲಿ ಯಶಸ್ಸು ಕಂಡರು. ಈಗ ಯಶ್ ಅವರ ಕಿರಾತಕ ಚಿತ್ರದ ಸಿಕ್ವೆಲ್ ಮೈ ನೇಮ್ ಇಜ್ ಕಿರಾತಕ ಚಿತ್ರದಲ್ಲೂ   ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಅವರ ಅಭಿನಯದ ತೆಲಗು ಚಿತ್ರ ಹಿಡಿಂಬ ಇದೇ 20ರಂದು ಬಿಡುಗಡೆಗೆ ಸಿದ್ಧವಾಗಿದೆ.  ಅನಿಲ್ ನಿರ್ದೇಶನದ ಹಿಡಿಂಬ ಸಿನಿಮಾದಲ್ಲಿ ಓಂಕಾರ್ ಸಹೋದರ ಅಶ್ವಿನ್ ಬಾಬು ನಾಯಕನಾಗಿ ಹಾಗೂ ನಂದಿತಾ ಶ್ವೇತಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಪರಿಕಲ್ಪನೆಯಲ್ಲಿ ನಿರ್ಮಿಸಲಾದ ಹಿಡಿಂಬಾ ಚಿತ್ರದ  ಟ್ರೇಲರ್​ ಇತ್ತೀಚೆಗೆ ಬಿಡುಗಡೆಯಾಗಿದ್ದು, ಉತ್ತಮ ರೆಸ್​ಪಾನ್ಸ್​ ಸಿಕ್ಕಿದೆ. 

ರಹಸ್ಯವಾಗಿ ಮದ್ವೆಯಾದ್ರಾ ಕೆಜಿಎಫ್​ ನಟಿ ಶ್ರೀನಿಧಿ ಶೆಟ್ಟಿ? ಫೋಟೋ ನೋಡಿ ಫ್ಯಾನ್ಸ್​ ಖುಷ್​!

ಆದರೆ ಇದರ ನಡುವೆಯೇ ನಟಿ ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಹಿಡಿಂಬಾ (Hidimba) ಚಿತ್ರದ ಪ್ರಮೋಷನ್​ಗೆ ಬಂದ ಸಂದರ್ಭದಲ್ಲಿ ತಮ್ಮ ಆರೋಗ್ಯದ ಕುರಿತ ಅಂಶವೊಂದನ್ನು ನಟಿ ಹೇಳಿಕೊಂಡಿದ್ದು, ಫ್ಯಾನ್ಸ್​ಗೆ ಶಾಕ್​ ಆಗಿದೆ. ಅಷ್ಟಕ್ಕೂ ನಟಿ ಈ ಸಂದರ್ಶನದ ಸಮಯದಲ್ಲಿ ತಮಗಿರುವ ವಿಚಿತ್ರ ಕಾಯಿಲೆಯ ಕುರಿತು ಹೇಳಿಕೊಂಡಿದ್ದಾರೆ. ಹೌದು!  ಬಹುಭಾಷಾ ನಟಿ ನಂದಿತಾ ಶ್ವೇತಾ ಅವರು ತಮ್ಮ ಹಿಡಿಂಬಾ ಚಿತ್ರದಲ್ಲಿ ಪವರ್‌ಫುಲ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಚಿತ್ರಕ್ಕಾಗಿ ಸಕತ್​ ವರ್ಕ್​ಔಟ್​ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.  ಈ ಚಿತ್ರಕ್ಕಾಗಿ  ತೂಕ ಇಳಿಸಿಕೊಳ್ಳುವ ಅನಿವಾರ್ಯತೆ ಇದ್ದ ಹಿನ್ನೆಲೆಯಲ್ಲಿ ತುಂಬಾ ಕಷ್ಟಪಟ್ಟುದುದಾಗಿ ಹೇಳಿದ್ದಾರೆ. 

ಈ ಸಂದರ್ಭದಲ್ಲಿ ತಮಗಿರುವ ಕಾಯಿಲೆಯ ಕುರಿತೂ ಹೇಳಿಕೊಂಡಿದ್ದು, ವರ್ಕ್​ಔಟ್​ ಮಾಡಲು ತಾವು ಈ ಕಾಯಿಲೆಯಿಂದಾಗಿ ಪಟ್ಟಿರುವ ಶ್ರಮದ ಕುರಿತು ಮಾಹಿತಿ ನೀಡಿದ್ದಾರೆ. ನಾನು ಫೈಬ್ರೊಮ್ಯಾಲ್ಗಿಯಾ (Fibromyalgia) ಎಂಬ ಸ್ನಾಯು ಅಸ್ವಸ್ಥತೆಯಿಂದ ಬಳಲುತ್ತಿದ್ದೇನೆ. ಇದರಿಂದಾಗಿ ನನ್ನ ಆರೋಗ್ಯದಲ್ಲಿ ಏರುಪೇರಾಗುತ್ತಿರುತ್ತದೆ. ಸ್ವಲ್ಪ ಕೆಲಸ ಮಾಡಿದರೂ ಸ್ನಾಯುಗಳಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ  ಭಾರವಾದ ವ್ಯಾಯಾಮಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಭಾವುಕರಾಗಿರುವ ನಟಿ, ತಾವು ಈ ರಹಸ್ಯ ವಿಷಯವನ್ನು  ಮೊದಲ ಬಾರಿಗೆ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.  ಫೈಬ್ರೊಮ್ಯಾಲ್ಗಿಯಾ ಎಂಬುದು ಸ್ನಾಯುಗಳ ಸಮಸ್ಯೆಯ ಕಾಯಿಲೆಯಾಗಿದ್ದು, ಇದರಿಂದ ಬಳಲುತ್ತಿರುವ ವ್ಯಕ್ತಿಯ ದೇಹದ ಸ್ನಾಯುಗಳು ಮತ್ತು ಕೀಲುಗಳಲ್ಲಿ ನೋವನ್ನು ಉಂಟುಮಾಡುತ್ತದೆ. ಇದರಿಂದ ತೀವ್ರವಾಗಿ ಬಲು ಬೇಗನೆ  ಆಯಾಸವಾಗುತ್ತದೆ. ಅಷ್ಟೇ ಅಲ್ಲದೇ ನೆನಪಿನ ಶಕ್ತಿ ಕುಂದಿ  ಮಾನಸಿಕ ರೋಗಲಕ್ಷಣಗಳನ್ನು ಉಂಟುಮಾಡಬಹುದು ಎಂದು ನಟಿ ಹೇಳಿಕೊಂಡಿದ್ದಾರೆ. ಆದರೆ ಹಿಡಿಂಬಿ ಚಿತ್ರಕ್ಕಾಗಿ ಇದನ್ನೆಲ್ಲಾ ಮೀರಿ  ಕಸರತ್ತು ಮಾಡಿದ್ದೇನೆ.  ನಿದ್ದೆಯಿಲ್ಲದೆ ದುಡಿದಿದ್ದೇನೆ.  ಚಿತ್ರಕ್ಕಾಗಿ ಇಷ್ಟೆಲ್ಲ ಸಹಿಸಿಕೊಂಡು ತೂಕ ಇಳಿಸಿಕೊಂಡೆ ಎಂದಿದ್ದಾರೆ.

ಮದ್ವೆಯಾಗದೇ ಪ್ರೆಗ್ನೆಂಟ್​ ಆದ್ರಾ ಸಾಯಿ ಪಲ್ಲವಿ? ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​!

Follow Us:
Download App:
  • android
  • ios