ಬಹುಭಾಷಾ ನಟಿ, ಹಾಟ್‌ ಲಡ್ಕಿ, ಸದಾ ಸೆನ್ಸೇಷನ್ ಕ್ರಿಯೇಟ್ ಮಾಡುವ ಸುಂದರಿ ನಟಿ  ನಮಿತಾ ಬಾವಿಯಲ್ಲಿ ಬಿದ್ದಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಫೋಟೋ ನೋಡಿ ಶಾಕ್ ಆದ ನೆಟ್ಟಿಗರಿಗೆ ನಿರ್ದೇಶಕರೊಬ್ಬರು ಕ್ಲಾರಿಟಿ ನೀಡಿದ್ದಾರೆ.

ಹಾಟ್ ನಟಿ ನಮಿತಾ ರಾಜಕೀಯಕ್ಕೆ?: ನಂದಮೂರಿ ಬಾಲಕೃಷ್ಣ ಜೋಡಿ!

ಹೌದು, ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ನಮಿತಾ ಫೋನ್‌ ಬಾವಿಯಲ್ಲಿ ಬೀಳುವುದರಲ್ಲಿತ್ತು. ದುಬಾರಿ ಫೋನ್ ಹಾಳಾಗಬಾರದು ಎನ್ನುವ ಕಾರಣಕ್ಕೆ ಪೋನ್ ಹಿಡಿಯಲು ಹೋಗಿ, ನಮಿತಾ ಬಾವಿಗೆ ಜಂಪ್ ಮಾಡುತ್ತಾರೆ. ಬಾವಿಯೊಳಗಿಂದ ಸುತ್ತಮುತ್ತಲಿರುವ ಜನರಿಗೆ ಸಹಾಯ ಬೇಡಿ ಕೂಗಿದ್ದಾರೆ. ಸಹಾಯಕ್ಕೆ ಯಾರು ಬಂದರು, ಆನಂತರ ಏನಾಯ್ತು?

ತೆಳ್ಳಗಾದ್ಲು ತೆಲಗು ನಟಿ, ಅಪ್‌ಸೆಟ್‌ ಆಗೋದ್ರು ಫ್ಯಾನ್ಸ್! ...

ಅಸಲಿ ಕಥೆ:

ಒಂದು ಫೋನ್ ಉಳಿಸಿಕೊಳ್ಳಲು ನಮಿತಾ ನಿಜವಾಗಿಯೂ ಬಾವಿಗೆ ಬಿದ್ದರೇ? ಎಂಬ ಕನ್ಫ್ಯೂಷನ್‌ನಲ್ಲಿದ್ದ ಅಭಿಮಾನಿಗಳಿಗೆ 'ಬೌ ಬೌ' ಚಿತ್ರದ ನಿರ್ದೇಶಕ ಆರ್‌ಎಲ್‌ ರವಿ ಉತ್ತರ ನೀಡಿದ್ದಾರೆ.

ಎಲ್ಲೆಡೆ ಚರ್ಚೆಯಾಗುತ್ತಿರುವ ಈ ದೃಶ್ಯ ನಮಿತಾಳ 'ಬೌ ಬೌ' ಚಿತ್ರದ್ದು ಎನ್ನಲಾಗಿದೆ. ರೀಲ್ ಲೈಫ್ ಕಥೆಯನ್ನು ರಿಯಲ್ ಲೈಫ್ ಘಟನೆ ಎಂದುಕೊಂಡು ಅಭಿಮಾನಿಗಳು ನಮಿತಾಳ ಪರಿಸ್ಥಿತಿ ವಿಚಾರಿಸುತ್ತಿದ್ದಾರೆ.

ನೆಟ್ಟಿಗರು ಮಾತು:
ಇತ್ತೀಚಿನ  ದಿನಗಳಲ್ಲಿ ನಮಿತಾ ಸಿನಿಮಾ ಕಥಗೆಳನ್ನು ಒಪ್ಪಿಕೊಳ್ಳುತ್ತಿರುವುದು ತೀರ ಕಡಿಮೆ. ಅಪರೂಪಕ್ಕೆ ಒಂದು ಸಿನಿಮಾ ಶೂಟಿಂಗ್ ಮಾಡಿದರೆ ಹೀಗೇ ಆಗುವುದು. ನೀವು ಏನೇ ಮಾಡಿದರೂ ಜನರು ತಿಳಿದುಕೊಳ್ಳುವುದೇ ಹೀಗೆ. ಬದಲಿಗೆ ನೀವು ವರ್ಷಕ್ಕೆ 3-4 ಸಿನಿಮಾ ಮಾಡಿ, ಆಮೇಲೆ ಈ ರೀತಿ ಸುದ್ದಿ ಹರಡುವುದಿಲ್ಲ ಎಂದು ನೆಟ್ಟಿಗರ ಪುಕ್ಕಟೆ ಸಲಹೆ ಹರಿದು ಬಂದಿವೆ.