Asianet Suvarna News Asianet Suvarna News

'ವಿಕ್ರಾಂತ್ ರೋಣ' ಚಿತ್ರದಲ್ಲಿ ಮಿಲನಾ ನಾಗರಾಜ್!

ವಿಕ್ರಾಂತ್ ರೋಣ ಅಖಾಡಕ್ಕೆ ಎಂಟ್ರಿ ಕೊಟ್ಟ ನಟಿ ಮಿಲನಾ. ಪಾತ್ರ ಮಾತ್ರ ಫುಲ್ ಸಸ್ಪೆನ್ಸ್...

Actress Milana Nagaraj join Kiccha Sudeep Vikrant Rona film team vcs
Author
Bangalore, First Published Oct 1, 2021, 5:08 PM IST
  • Facebook
  • Twitter
  • Whatsapp

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ನಟನೆಯ ವಿಕ್ರಾಂತ್ ರೋಣ (Vikranth Rona) ಸಿನಿಮಾ ದಿನೆ ದಿನೇ ದೊಡ್ಡ ರೆಕಾರ್ಡ್ ಬ್ರೇಕ್ ಮಾಡುತ್ತಿದೆ. ಟ್ರೈಲರ್, ಟೀಸರ್ ಹಾಗೂ  ಪೋಸ್ಟರ್ ಲುಕ್ ಮೂಲಕ ಗಮನ ಸೆಳೆದಿರುವ ವಿಕ್ರಾಂತ್ ರೋಣ ತಂಡಕ್ಕೆ ಲವ್ ಮಾಕ್ಟೇಲ್ (Love Mocktail) ಖ್ಯಾತಿಯ ನಟಿ ಮಿಲನಾ ನಾಗರಾಜ್ (Milana Nagaraj) ಸೇರ್ಪಡೆಯಾಗಿದ್ದಾರೆ.

ವಿಕ್ರಾಂತ್ ರೋಣ ಚಿತ್ರದಲ್ಲಿ ಮಿಲನ ನಾಗರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ (Pan India Movie) ಆಗಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ, ಮಿಲನಾ ಅವರ ಪಾತ್ರ ಹೇಗಿರುತ್ತದೆ ಎಂಬುದು ಸದ್ಯದ suspense. ಹುಟ್ಟುಹಬ್ಬದ (birthday) ದಿನ ಬಿಟ್ಟರೆ, ನಿರ್ದೇಶಕರು ಪಾತ್ರಧಾರಿಗಳ (Characters) ಬಗ್ಗೆ ಯಾವ ಮಾಹಿತಿಯನ್ನೂ ರಿವೀಲ್ ಮಾಡುವುದಿಲ್ಲ. ಕೆಲವು ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಶೀಘ್ರದಲ್ಲಿಯೇ ಮಿಲನಾ ತಂಡದ ಜೊತೆ ಚಿತ್ರೀಕರಣ ಆರಂಭಿಸಲಿದ್ದಾರೆ. 

ಡೆಡ್ ಮ್ಯಾನ್ಸ್ ಆ್ಯಂಥಮ್ ಹಿಂದಿನ ದನಿಗಳು

ಅನೂಪ್ ಭಂಡಾರಿ (Anoop Bhandari) ನಿರ್ದೇಶನದ, ಜಾಕ್ ಮಂಜು (JaCk Manju) ನಿರ್ಮಾಣದ ಈ ಚಿತ್ರದಲ್ಲಿ ನೀತಾ ಅಶೋಕ್ ನಾಯಕಿಯಾಗಿ ಕಾಣಿಸಿಕೊಂಡರೆ, ಸ್ಪೆಷಲ್ ಹಾಡಿನ ಮೂಲಕ ಕಿಚ್ಚನ ಜೊತೆ ಬಾಲಿವುಡ್ ನಟಿ (Bollywood Actress) ಜಾಕ್ವೆಲಿನ್ ಫೆರ್ನಾಂಡಿಸ್ ಹೆಜ್ಜೆ ಹಾಕಿದ್ದಾರೆ. ಸಿನಿಮಾದಲ್ಲಿ ಪ್ರತಿ ಪಾತ್ರಧಾರಿಗೂ ನೀವು ಎಂದೂ ಕಲ್ಪನೆ ಮಾಡಿಕೊಳ್ಳಲಾಗದಂತೆ ಹೆಸರುಗಳನ್ನು ಇಡಲಾಗಿದೆ. ಸಣ್ಣ ಪುಟ್ಟ ವಿಚಾರಗಳ ಬಗ್ಗೆಯೂ ಈ ಚಿತ್ರದಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ. 

Actress Milana Nagaraj join Kiccha Sudeep Vikrant Rona film team vcs

ಇಡೀ ಭಾರತೀಯ ಸಿನಿ ರಸಿಕರು (Indian Movie Lovers) ವಿಕ್ರಾಂತ್ ರೋಣ ಸಿನಿಮಾ ವೀಕ್ಷಿಸಲು ಕಾಯುತ್ತಿದ್ದಾರೆ. ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಲಾಗುತ್ತದೆ 10 ದಿನ ಮೊದಲೇ ರಿಲೀಸ್‌ ಡೇಟ್ ಅನೌನ್ಸ್ ಮಾಡುತ್ತೀವಿ ಎಂದು ಜ್ಯಾಕ್ ಮಂಜು ಹೇಳಿದ್ದಾರೆ. 'ಓಟಿಟಿ (OTT)ಗಳಿಂದ ಸಾಕಷ್ಟು ಆಫರ್‌ಗಳು ಬರುತ್ತಿದ್ದರೂ ನಾವು ನೇರ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇವೆ.  ಪ್ರತಿಕ್ರಿಯೆ ಪಡೆದ ಬಳಿಕ ನೋಡಿಕೊಂಡು, ಓಟಿಟಿ ಆಯ್ಕೆ ಮಾಡಿಕೊಳ್ಳುವುದು. ಈಗಾಗಲೇ ಸುದೀಪ್ ಚಿತ್ರದ ಕನ್ನಡ ಡಬ್ಬಿಂಗ್ (Kannada Dubbing) ಮುಗಿಸಿದ್ದಾರೆ. ಮಲಯಾಳಂ (Malayalam) ಬಿಟ್ಟು ತೆಲುಗು (Telagu), ತಮಿಳು (Tamil), ಹಿಂದಿಗೆ ಕಿಚ್ಚ ಅವರ ಧ್ವನಿಯೇ ಇರಲಿದೆ,' ಎಂದು ಮಂಜುನಾಥ್ ಮಾಹಿತಿ ನೀಡಿದ್ದಾರೆ. 

ವಿಕ್ರಾಂತ್ ರೋಣ ಲುಕ್‌ ನೋಡಿ ವಾವ್ಹಾ ಎಂದ ನಟ ಸಲ್ಮಾನ್ ಖಾನ್!

ಗಣೇಶ ಹಬ್ಬದ ದಿನ ಡೆಡ್ ಮ್ಯಾನ್ಸ್ anthem ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಕೇರಳದ ಪ್ರತಿಭಾವಂತ ಹಿನ್ನಲೆ ಗಾಯಕ ನಿರಂಜ್‌ ಧ್ವನಿ ನೀಡಿದ್ದಾರೆ. ಈ ಹಿಂದೆ ವಿಲನ್ ಚಿತ್ರಕ್ಕೂ ಧ್ವನಿ ನೀಡಿದ್ದರು. ಈ ವಿಡಿಯೋದಲ್ಲಿ ಪುಟ್ಟ ಮಗುವಿನ ದನಿ ಇರುವುದು ಬೇಬಿ ಆರಾಧ್ಯಾಳದ್ದು. 

ಸದ್ಯ ಮಿಲನಾ ನಾಗರಾಜ್‌ ಲವ್ ಮಾಕ್ಟೀಲ್ 2 ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಕೆಲವು ದಿನಳ ಹಿಂದೆ ನಡೆದೆ ಸೈಮಾ ಅವಾರ್ಡ್‌ 2020ರಲ್ಲಿ ಬೆಸ್ಟ್‌ ನಟಿ ಪ್ರಶಸ್ತಿ (Best Actress) ಗೆದ್ದಿದ್ದಾರೆ.

Follow Us:
Download App:
  • android
  • ios