ಕೋರೋನಾ ಸೋಂಕಿನ ಕುರಿತ ಸುದ್ದಿಯನ್ನು ನಟಿ ಮೇಘನಾ ರಾಜ್ ದೃಢ ಪಡಿಸಿದ್ದಾರೆ. ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಕೊರೋನಾ ಸೋಂಕಿನ ಬಗ್ಗೆ ತಿಳಿಸಿದ್ದಾರೆ ಮೇಘನಾ. ನನಗೆ, ಮಗುವಿಗೆ ಹಾಗೂ ತಂದೆ, ತಾಯಿ ನಾಲ್ವರಿಗೂ ಕೊರೋನಾ ಸೋಂಕು ತಗುಲಿರೋದಾಗಿ ಹೇಳಿದ್ದಾರೆ.

"

ನಾವು ಹುಷಾರಾಗಿದ್ದೆವೆ ಆದಷ್ಡು ಬೇಗ ಈ ಹೋರಾಟದಲ್ಲಿ ಗೆದ್ದು ಬರುತ್ತೇವೆ. ಯಾರು ಕೂಡ ಗಾಬರಿ ಆಗುವುದು ಬೇಡ ಎಂದು ಅವರು ಫ್ಯಾನ್ಸ್‌ಗಳಲ್ಲಿ ಮನವಿ ಮಾಡಿದ್ದಾರೆ. ನಮ್ಮ ಸಂಪರ್ಕದಲ್ಲಿ ಬಂದವರಿಗೆ ಚೆಕಪ್ ಮಾಡಿಸಿಕೊಳ್ಳಲು ತಿಳಿಸಿದ್ದೇವೆ ಎಂದೂ ಹೇಳಿದ್ದಾರೆ.

ನಟಿ ಮೇಘನಾ ರಾಜ್‌, ಸುಂದರ್‌ ರಾಜ್‌ಗೆ ಕೊರೋನಾ ಪಾಸಿಟಿವ್; 'ಮಗುವಿಗೆ ಪರೀಕ್ಷೆ ಬೇಡ'

ಹೆಲೋ, ನನ್ನ ತಂದೆ, ತಾಯಿ, ನನಗೆ, ನನ್ನ ಪುಟ್ಟ ಕಂದ ಕೊರೋನಾ ಟೆಸ್ಟ್ ಪಾಸಿಟಿವ್ ಬಂದಿದೆ. ನಮ್ಮ ಕೊರೋನಾ ರಿಸಲ್ಟ್ ಬಗ್ಗೆ ನಮ್ಮ ಜೊತೆ ಕಳೆದ ಕೆಲವು ವಾರ ಜೊತೆಗಿದ್ದವರಿಗೆ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ.

 
 
 
 
 
 
 
 
 
 
 
 
 
 
 

A post shared by Meghana Raj Sarja (@megsraj)

ನನ್ನ ಮತ್ತು ಚಿರು ಫ್ಯಾನ್ಸ್‌ ಬಳಿ ಹೇಳೋದೇನಂದ್ರೆ ನಾವು ಹುಷಾರಾಗಿದ್ದೇವೆ, ಚಿಕಿತ್ಸೆ ನಡೆಯುತ್ತಿದೆ. ಗಾಬರಿಯಾಗಬೇಕಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಜ್ಯೂನಿಯರ್ ಚಿರು ಹುಷಾರಾಗಿದ್ದಾನೆ, ಪ್ರತಿ ಕ್ಷಣವೂ ನನ್ನೊಂದಿಗಿದ್ದಾನೆ. ನಾವು ಈ ಕೊರೋನಾ ಗೆದ್ದು ಬರುತ್ತೇವೆ ಎಂದಿದ್ದಾರೆ,