ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ನೋವು ಮರೆ ಮಾಡಿದ್ದು, ಜೂನಿಯರ್ ಚಿರು ಆಗಮನದಿಂದ. ಸಂತೋಷ ಸಂಭ್ರಮದಲ್ಲಿದ್ದ ಸುಂದರ್ ರಾಜ್‌ ಕುಟುಂಬಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ಅದುವೇ ಮಹಾಮಾರಿ  ಕೊರೋನಾ ವೈರಸ್. ಹೌದು ಹಿರಿಯ ಕಲಾವಿದೆ ಪ್ರೇಮಿಳಾ ಜೋಷಾಯ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಹಿತಿ ಹೊರ ಬಂದ ನಂತರ ಅನಾರೋಗ್ಯದ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿದೆ. 

ಹಿರಿಯ ನಟಿ, ಮೇಘನಾ ತಾಯಿ ಪ್ರಮಿಳಾ ಜೋಷಾಯ್ ಆಸ್ಪತ್ರೆಗೆ ದಾಖಲು

ನಟ ಸುಂದರ್ ರಾಜ್ ಹಾಗೂ ಪುತ್ರಿ ಮೇಘನಾ ರಾಜ್‌ಗೂ ಕೊರೋನಾ ಸೋಂಕು ತಾಗಿದೆ. ಇಬ್ಬರು ಅಸಿಪ್ಟಮ್ಯಾಟಿಕ್ ಆಗಿರುವ ಕಾರಣ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯದ ಬಗ್ಗೆ ಮುಂಜಾಗೃತ ಕ್ರಮವಾಗಿ ಪ್ರಮೀಳಾರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜೂನಿಯರ್‌ ಚಿರುಗೆ ಯಾವುದೇ ಪರೀಕ್ಷೆ ಮಾಡಿಸುವುದು ಬೇಡ ಎಂದು ವೈದ್ಯರು ಹೇಳಿದ್ದಾರೆ.  'ಯಾವುದೇ ತೊಂದರೆ ಇಲ್ಲದೆ, ಎಲ್ಲರೂ ಹುಷಾರಾಗಿದ್ದೀವೆ' ಎಂದು ಮೇಘನಾ ತಿಳಿಸಿದ್ದಾರೆ. 

ಕೆಲವು ತಿಂಗಳುಗಳ ಹಿಂದೆ ಜೂನಿಯರ್ ಚಿರುಗೆ ತೊಟ್ಟಿಲು ಶಾಸ್ತ್ರ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಆಪ್ತರು ಮಾತ್ರ ಭಾಗಿಯಾಗಿದ್ದರು. ಮನೆಯಲ್ಲಿ ಮಗುವಿದ್ದ ಕಾರಣ ಹೆಚ್ಚಾಗಿ ಹೊರಗಿ ಸಂಪರ್ಕ ಹೊಂದಿರಲಿಲ್ಲ. ಆದರೂ ಸೋಂಕು ತಾಗಿರುವ ವಿಚಾರ ಕೇಳಿ ಅಭಿಮಾನಿಗಳಿಗೆ ಬೇಸರವಾಗಿದೆ. 'ಇನ್ನು ಮುಂದೆಯಾದರೂ ಈ ಕುಟುಂಬಕ್ಕೆ ಯಾವುದೇ ತೊಂದರೆ ಆಗದಂತೆ ಕಾಪಾಡು,' ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದಾರೆ. 

ಮೇಘನಾ ರಾಜ್‌ ಈ ಹಾಡು ಹಾಡುದ್ರೇನೆ ಜೂನಿಯರ್ ಚಿರು ಮಲಗುವುದು! 

ಬಾಣಂತಿ ಮೇಘನಾ ಹಾಗೂ ಪುಟ್ಟ ಕಂದಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಚಿಂತೆ ಶುರುವಾಗಿದೆ. ಸುಂದರ್ ರಾಜ್‌, ಮೇಘನಾ ರಾಜ್‌, ಪ್ರಮೀಳಾ ಹಾಗೂ ಚಿಂಟು ಆದಷ್ಟು ಬೇಗ ಆರೋಗ್ಯವಂತರಾಗಲಿ ಎಂದು ನಾವೂ ಪ್ರಾರ್ಥಿಸೋಣ.