Asianet Suvarna News Asianet Suvarna News

ಪತಿ ವಿದ್ಯಾಸಾಗರ್ ಅಂಗಾಗ ದಾನ: ಮೌನ ಮುರಿದ ನಟಿ ಮೀನಾ

ಸೋಷಿಯಲ್ ಮೀಡಿಯಾದಲ್ಲಿ ಮಹತ್ವದ ನಿರ್ಧಾರದ ಬಗ್ಗೆ ಮೊದಲ ಬಾರಿ ಬರೆದುಕೊಂಡ ನಟಿ ಮೀನಾ. 
 

Actress Meena decided to donate her organs vcs
Author
Bangalore, First Published Aug 17, 2022, 2:11 PM IST

1982ರಲ್ಲಿ ಬಾಲನಟಿಯಾಗಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಮೀನಾ 23 ಸಿನಿಮಾಗಳಲ್ಲಿ ನಟಿಸಿದ್ದಾರೆ. 1990ರಲ್ಲಿ ತೆಲುಗು ನವಯುಗಂ ಚಿತ್ರದ ಮೂಲಕ ನಾಯಕಿಯಾಗಿ ಬಣ್ಣದ ಜರ್ನಿ ಅರಂಭಿಸಿದ್ದರು. 1995ರಲ್ಲಿ ರವಿಚಂದ್ರನ್ ಜೊತೆ ಪುಟ್ಟನಂಜ ಸಿನಿಮಾ ಮೂಲಕ ಕರ್ನಾಟಕಕ್ಕೆ ಕಾಲಿಟ್ಟರು. ಸುಮಾರು 20ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನೆ ಮಗಳಾದರು. ಮೀನಾ ಇದ್ರೆ ಸಿನಿಮಾ ಸೂಪರ್ ಹಿಟ್ ಅನ್ನೋ ಲೆಕ್ಕಕೂಡ ಶುರುವಾಗಿತ್ತು. ವೃತ್ತಿ ಜೀವನ ಪೀಕ್‌ನಲ್ಲಿರುವಾಗಲೇ ಮೀನಾ ಮದುವೆಯಾಗಿದ್ದು ಮತ್ತೊಂದು ಅಚ್ಚರಿ. 

ಬೆಂಗಳೂರಿನ ಉದ್ಯಮಿ ವಿದ್ಯಾಸಾಗರ್‌ ಅವರನ್ನು 2009, 12 ಜುಲೈನಲ್ಲಿ ಮೀನಾ ಮದುವೆಯಾದರು. ದೇವಸ್ಥಾನದಲ್ಲಿ ಮದುವೆಯಾದ ಕಾರಣ ಚೆನ್ನೈನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಹಮ್ಮಿಕೊಂಡಿದ್ದರು. ಇವರಿಗೆ ನೈನಿಕಾ ಎಂಬ ಮುದ್ದಾದ ಮಗಳಿದ್ದು ಅಕೆ ಕೂಡ 5 ವರ್ಷವಿದ್ದಾಗ ತೇರಿ ಸಿನಿಮಾದಲ್ಲಿ ಅಭಿನಯಿಸಿದ್ದಾಳೆ. ನಗು ನಗುತ್ತಾ ಖುಷಿಯಾಗಿದ್ದ ಈ ಸಂಸಾರಕ್ಕೆ ಯಾರ ಕಣ್ಣು ಬಿತ್ತೋ ಏನೋ 2022ರ ಜೂನ್ 28ರಂದು ವಿದ್ಯಾಸಾಗರ್ ಕೊನೆ ಉಸಿರೆಳೆಯುತ್ತಾರೆ. 

Actress Meena decided to donate her organs vcs

ಹಲವು ವರ್ಷಗಳಿಂದ ವಿದ್ಯಾಸಾಗರ್ ತ್ರೀವ ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿದ್ದರು. ಸಾವಿಗೂ ಕೆಲವು ದಿನಗಳ ಹಿಂದೆ ಚೆನ್ನೈನ ಆಸ್ಪತ್ರೆವೊಂದರಲ್ಲಿ ದಾಖಲಾಗಿದ್ದರು. ಸಾಗರ್ ಶ್ವಾಸಕೋಶ ಅಲರ್ಜಿಗೆ ಕಾರಣವಾಗಿದ್ದು ಪಾರಿವಾಳದ ಹಿಕ್ಕೆ ಎನ್ನುವ ಆಘಾತಕಾರಿ ಅಂಶ ಎನ್ನಲಾಗಿದೆ. ಪಾರಿವಾಳದ ಹಿಕ್ಕೆಯ ವಾಸನೆಯ ಗಾಳಿಯನ್ನು ಅವರು ಹಲವು ವರ್ಷಗಳ ಕಾಲ ಉಸಿರಾಡಿದ್ದ ಕಾರಣಕ್ಕೆ ಅವರಿಗೆ ಶ್ವಾಸಕೋಶದ ಅಲರ್ಜಿ ಉಂಟಾಗಿತ್ತು ಎನ್ನುವ ಮಾಹಿತಿ ಬಹಿರಂಗವಾಗಿದೆ.

ಆಗಸ್ಟ್‌ 13 ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ ಮೊದಲ ಬಾರಿ ಸೋಷಿಯಲ್ ಮೀಡಿಯಾದಲ್ಲಿ ಮೀನಾ ಪೋಸ್ಟ್ ಹಾಕುವ ಮೂಲಕ ಮೌನ ಮುರಿದಿದ್ದಾರೆ. 'ಒಂದು ಜೀವ ಉಳಿಸುವುದಕ್ಕಿಂತ ದೊಡ್ಡ ಕೆಲಸ ಬೇರೇನೂ ಇಲ್ಲ. ಅಂಗಾಂಗ ದಾನ ಮಾಡಿದರೆ ಒಂದು ಜೀವ ಉಳಿಯುತ್ತದೆ. ಅನಾರೋಗ್ಯದಿಂದ ಕಷ್ಟ ಪಡುತ್ತಿರುವವರಿಗೆ ಅವಶ್ಯಕತೆ ಇರುವವರಿಗೆ ಅಂಗಾಂಗ ದಾನ ಮಾಡುವುದರಿಂದ ಅವರ ಕುಟುಂದಲ್ಲಾಗುವ ಬದಲಾವಣೆಯನ್ನು ನಾನು ಕಣ್ಣಾರೆ ನೋಡಿದ್ದೇನೆ. ನನ್ನ ಸಾಗರ್‌ಗೆ ದಾನಿಗಳು ಸಿಕ್ಕಿದ್ದರೆ ನನ್ನ ಜೀವನ ಮತ್ತೊಂದು ರೀತಿ ಇರುತ್ತಿತ್ತು. ಒಬ್ಬ ಅಂಗಾಂಗ ದಾನಿ 8 ಜೀವಗಳನ್ನು ಉಳಿಸಬಹುದು. ಅಂಗಾಗಂ ದಾನ ಮಹತ್ವವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. ಅಂಗಾಗ ದಾನ ಕೇಲವ ವೈಧ್ಯರು ಮತ್ತು ರೋಗಿಗಳ ನಡುವಿನ ಸಂಬಂಧವಲ್ಲ. ಸ್ನೇಹಿತರು ಮತ್ತು ಕುಟುಂಬದವರು ಎಲ್ಲರಿಗೂ ಸಂಬಂಧವಿದೆ. ನಾನು ನನ್ನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದೇನೆ' ಎಂದು ಮೀನಾ ಬರೆದುಕೊಂಡಿದ್ದಾರೆ

ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ 'ಸ್ವಾತಿಮುತ್ತು' ನಟಿ ಮೀನಾರ ರೋಚಕ ಸಿನಿ ಪಯಣ

ಅಂಗಾಂಗ ದಾನ ಮಾಡಲು ಮೀನಾ ನೊಂದಣಿ ಮಾಡಿಸಿರುವ ವಿಚಾರ ಕೇಳಿ ನೆಟ್ಟಿಗರು ಸಂತಸ ವ್ಯಕ್ತ ಪಡಿಸಿದ್ದಾರೆ.

ಪಾರಿವಾಳ ಹಿಕ್ಕೆ?

ಪಾರಿವಾಳದ ಹಿಕ್ಕೆಗಳು ರಿನಿಟಿಸ್, ಸೈನುಟಿಸ್ ಮತ್ತು ಕಾಂಜಂಕ್ಟಿವಿಟಿಸ್‌ನಂತಹ ಅಲರ್ಜಿಯನ್ನು ಉಂಟುಮಾಡಬಹುದು ಎಂದು ಸಂಸ್ಥೆಯು ನಡೆಸಿದ ಸಂಶೋಧನೆಯು ಕಂಡುಹಿಡಿದಿದೆ. ಕೆಟ್ಟ ಪರಿಸ್ಥಿತಿಗಳಲ್ಲಿ, ಸೋಂಕಿತ ಜನರು ತಮ್ಮ ಶ್ವಾಸಕೋಶದ ಕಾರ್ಯನಿರ್ವಹಣೆಯೊಂದಿಗೆ ಸಮಸ್ಯೆಗಳನ್ನು ಎದುರಿಸಬಹುದು ಮತ್ತು ಮೀನಾ ಅವರ ಪತಿ ವಿದ್ಯಾಸಾಗರ್ ಅವರಲ್ಲೂ ಅದೇ ಸಂಭವಿಸಿದೆ ಎಂದು ನಂಬಲಾಗಿದೆ.ಆದರೆ, ವಿದ್ಯಾಸಾಗರ್ ಸಾವಿಗೆ ಕಾರಣ ಎಂದು ಪಾರಿವಾಳದ ಹಿಕ್ಕೆಯ ಸುದ್ದಿಗೆ ಕುಟುಂಬವು ಇನ್ನೂ ಪ್ರತಿಕ್ರಿಯಿಸಿಲ್ಲ. ಸಾವಿಗೆ ಸಂಬಂಧಿಸಿದಂತೆ ಕುಟುಂಬವು ಪ್ರತಿಕ್ರಿಯಿಸಿ ಯಾವುದೇ ಪತ್ರಿಕಾ ಪ್ರಕಟಣೆಯನ್ನು ನೀಡಿಲ್ಲ. ಹಾಗೇನಾದರೂ ನೀಡಿದಲ್ಲಿ ಈ ಕುರಿತಾಗಿ ಸ್ಪಷ್ಟನೆ ಬರಬಹುದು ಎನ್ನಲಾಗಿದೆ.

7 ಜನರಿಗೆ ಬದುಕು ಕೊಟ್ಟು ಉಸಿರು ನಿಲ್ಲಿಸಿದ ಸಂಚಾರಿ ವಿಜಯ್!

ಪುಟ್ಟನಂಜ ಸಿನಿಮಾ ನಂತರ ಮೊಮ್ಮಗ, ಚೆಲುವ, ಶ್ರೀ ಮಂಜುನಾಥ, ಗ್ರಾಮದೇವತೆ, ಸೈಯಾದ್ರಿ ಸಿಂಹ, ಸ್ವಾತಿ ಮುತ್ತು,ಗೇಮ್ ಆಫ್ ಲವ್, ಗೌಡ್ರು, ಮಹಸಾದ್ವಿ ಮಲ್ಲಮ್ಮ, ಮೈ ಆಟೋಗ್ರಾಫಿ, ಹೆಂಡತೀರಾ ದರ್ಬಾರ್ ಸೇರಿಂದತೆ ಹಲವಾರು ಸಿನಿಮಾಗಳಲ್ಲಿ ಮೀನಾ ಅಭಿನಯಿಸಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Meena Sagar (@meenasagar16)

Follow Us:
Download App:
  • android
  • ios