ನನ್ನ ಪಾತ್ರಗಳು ಬದಲಾಗುತ್ತಿವೆ. ನಾನು ಈಗ ಸಾಫ್ಟ್ ನಟಿ ಅಲ್ಲ.
- ಹೀಗೆ ಹೇಳಿದ್ದು ನಟಿ ಮಯೂರಿ. ಅವರ ಈ ಮಾತಿಗೆ ಕಾರಣ ‘ಮೌನಂ’ ಚಿತ್ರ. ಮತ್ತೊಮ್ಮೆ ಇಲ್ಲೂ ಸಿಕ್ಕಾಪಟ್ಟೆರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಮಯೂರಿ ಮತ್ತೊಮ್ಮೆ ತಮ್ಮ ಕೈಯಲ್ಲಿ ಸಿಗರೇಟು ಹಿಡಿದು ನಿಂತಿದ್ದಾರೆ. ಇದು ‘ಮೌನಂ’ ಚಿತ್ರದ ಝಲಕ್.
ಮಯೂರಿ ಚಿತ್ರದ ಟೈಟಲ್ ಹೇಳಿ 5 ಲಕ್ಷ ಗೆಲ್ಲಿ!
‘ನನಗಿಲ್ಲಿ ಎರಡು ರೀತಿಯ ಪಾತ್ರ. ತುಂಬಾ ಗ್ಲಾಮರ್ ಪಾತ್ರ. ಬೈಕ್ ಓಡಿಸುವ ಟಾಮ್ ಬಾಯ್‌ನಂತೆ ಕಾಣಿಸಿಕೊಂಡು ಹುಡುಗರಂತೆ ಧಮ್ ಎಳೆಯುತ್ತೇನೆ. ಮತ್ತೊಂದು ಪಾತ್ರ ಪಕ್ಕಾ ಮನೆ ಮಗಳು ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಹೀಗೆ ಎರಡು ಶೇಡ್ ಇರುವ ಮೌನಂ ಸಿನಿಮಾ ನನಗೆ ಈ ವರ್ಷದ ಭರವಸೆಯ ಚಿತ್ರಗಳಲ್ಲಿ ಒಂದು ಎನಿಸುತ್ತಿದೆ’ ಎನ್ನುತ್ತಾರೆ ಮಯೂರಿ.
ಹೀಗೆ ತುಂಬಾ ಮಾಸ್ ಲುಕ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತ ತಮ್ಮ ಇಮೇಜ್ ಬದಲಾಯಿಸಿಕೊಳ್ಳುತ್ತಿರುವ ದಾರಿಯಲ್ಲಿ ಮಯೂರಿ ಹೆಜ್ಜೆ ಹಾಕಿದ್ದಾರೆ. ‘ಮೌನಂ’ ಇದಕ್ಕೆ ಹೊಸ ಸೇರ್ಪಡೆ. ರಾಜ್ ಪಂಡಿತ್ ನಿರ್ದೇಶನದ ಸಿನಿಮಾ. ತಂದೆ-ಮಗಳ ಬಾಂಧವ್ಯದ ದೃಶ್ಯ ಚಿತ್ರದ ಹೈಲೈಟ್. ಶ್ರೀಹರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅವಿನಾಶ್ ಮುಖ್ಯ ಪಾತ್ರಧಾರಿ. ಯುವನಟ ಬಾಲಾಜಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ, ಹನುಮಂತೇಗೌಡ ತಾರಾಬಳಗದಲ್ಲಿದ್ದಾರೆ.
