1. ಮೊದಲ ಬಾರಿಗೆ ಬ್ಲೈಂಡ್‌ ಪಾತ್ರ

ರೋಮಿಯೋ, ಸ್ಟೈಲ್‌ ಕಿಂಗ್‌, ಜೂಮ್‌, ಚಡ್ಡಿದೋಸ್‌್ತ, ಚಿತ್ರಗಳಿಗೆ ಅಸೋಸಿಯೇಟ್‌ ಆಗಿ ಕೆಲಸ ಮಾಡಿರುವ ನಟರಾಜ್‌ ಒಂದು ಚಿತ್ರವನ್ನು ನಿರ್ದೇಶಿಸುತ್ತಿದ್ದು, ಇದು ಜೂನ್‌ 15 ರಿಂದ ಚಿತ್ರೀಕರಣಕ್ಕೆ ಹೊರಡಲಿದೆ. ಇಲ್ಲಿ ಮಯೂರಿ ಹೊರತಾಗಿ ಬಹುತೇಕರು ಹೊಸಬರೇ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಚಿತ್ರದ ಕತೆ ಹಾಗೂ ಪಾತ್ರದ ಕಾರಣಕ್ಕೆ ಮಯೂರಿ ಅವರು ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ‘ಈ ಚಿತ್ರದಲ್ಲಿ ನಾನು ಬ್ಲೈಂಡ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಟರಾಜ್‌ ಅವರು ತುಂಬಾ ಚೆನ್ನಾಗಿ ಕತೆ ಮಾಡಿಕೊಂಡಿದ್ದಾರೆ. ಚಿತ್ರದ ಪ್ರತಿ ಕ್ಯಾರೆಕ್ಟರ್‌ ಅನ್ನೂ ಗಾಢವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಹೀಗಾಗಿ ನಾನು ಈ ಚಿತ್ರವನ್ನು ಒಪ್ಪಿಕೊಂಡೆ’ ಎನ್ನುತ್ತಾರೆ ಮಯೂರಿ. ಈ ಚಿತ್ರಕ್ಕೆ ರಾಮ್‌ ಚೇತನ್‌ ಹೀರೋ. ಬಿ ಜೆ ಭರತ್‌ ಸಂಗೀತ, ಸಂತೋಷ್‌ ಪಾಂಡಿ ಕ್ಯಾಮೆರಾ ಹಿಡಿಯುತ್ತಿದ್ದಾರೆ.

2. ಶೀರ್ಷಿಕೆ ಪತ್ತೆ ಮಾಡಿ 5 ಲಕ್ಷ ಗೆಲ್ಲಿ

ಮೌನೇಶ್‌ ಗೌಡ ನಿರ್ದೇಶಿಸಿ, ಮಯೂರಿ ನಾಯಕಿಯಾಗಿ, ನಾನಿ ಮಧು ನಾಯಕನಾಗಿ ನಟಿಸುತ್ತಿರುವ ಮತ್ತೊಂದು ಚಿತ್ರದ ವಿಭಿನ್ನವಾದ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಲಾಗಿದೆ. ನಾಯಕ ಮತ್ತು ಒಂದಿಷ್ಟುಇಂಗ್ಲಿಷ್‌ ಅಕ್ಷರಗಳನ್ನು ಒಳಗೊಂಡ ಪೋಸ್ಟರ್‌ ಇದಾಗಿದೆ. ಇಲ್ಲಿರುವ ಶೀರ್ಷಿಕೆ ಪತ್ತೆ ಮಾಡಿ ಹೇಳಿದವರಿಗೆ ಮುಖ್ಯಮಂತ್ರಿಗಳಿಂದ ಬಹುಮಾನ ಕೊಡಲಾಗುತ್ತದೆ. ಹಾಗಂತ ಚಿತ್ರತಂಡವೇ ಘೋಷಣೆ ಮಾಡಿದೆ. ಈ ಚಿತ್ರದ ಟೈಟಲ್‌ ಹೇಳಿದವರಿಗೆ 5 ಲಕ್ಷ ರುಪಾಯಿ ನಗದು ಬಹುಮಾನ ಸಿಗಲಿದ್ದು, ಈ ಚಿತ್ರದ ಧ್ವನಿ ಸುರಳಿ ಬಿಡುಗಡೆಯ ದಿನದಂದು ಮುಖ್ಯಮಂತ್ರಿಗಳಿಂದ ಈ ನಗದು ಬಹುಮಾನ ದೊರೆಯಲಿದೆ. ವಿಜೇತರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು. ಈ ಚಿತ್ರದಲ್ಲಿ ಮಯೂರಿ ಹಳ್ಳಿ ಹುಡುಗಿ ಪಾತ್ರ ಮಾಡಿರುವುದು ವಿಶೇಷ.

3. ರಾಜಮೌಳಿ ಸಹಾಯಕನ ಚಿತ್ರ

ಥಿಲ್ಲರ್‌ ನೆರಳಿನಲ್ಲಿ ಮೂಡಿ ಬರುತ್ತಿರುವ ‘ಅನಾಥಿ’ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದು, ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಪುನೀತ್‌ ಶರ್ಮಾ. ಇವರು ನಿರ್ದೇಶಕ ರಾಜಮೌಳಿ ಅವರ ಜತೆಗೆ ಸಹಾಯಕರಾಗಿ ಕೆಲಸ ಮಾಡಿದವರು.

ಮೂರು ಚಿತ್ರಗಳು ಶೂಟಿಂಗ್‌ ಹಂತದಲ್ಲಿ, ಮತ್ತೊಂದು ಮೂರು ಚಿತ್ರಗಳು ಬಿಡುಗಡೆಗೆ ಬಂದಿದ್ದು, ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎನ್ನುವ ಸಿನಿಮಾ ಡಬ್ಬಿಂಗ್‌ ಮಾಡಿಕೊಳ್ಳುತ್ತಿದೆ. ಹೀಗೆ 7 ಚಿತ್ರಗಳಲ್ಲಿ ನಟಿ ಮಯೂರಿ ಬ್ಯುಸಿಯಾಗಿದ್ದು, ಸದ್ಯ ‘ರುಸ್ತುಂ’ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.