ಹಿಟ್ ಚಿತ್ರಗಳ ನಟಿ ಮಾರಿಯಾ ಆಶಿತಾ, ಚಿತ್ರರಂಗದಿಂದ ದೂರ ಸರಿದ ಬಳಿಕ, ತಮ್ಮ ದಾಂಪತ್ಯದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಆರು ವರ್ಷಗಳ ಪ್ರೀತಿ, ಒಂದೂವರೆ ವರ್ಷದ ದಾಂಪತ್ಯದಲ್ಲಿ ಹೊಂದಾಣಿಕೆ ಸಮಸ್ಯೆ, ಪತಿಯ ಇನ್ಫಿರಿಯಾರಿಟಿ ಕಾಂಪ್ಲೆಕ್ಸ್ ಕಾರಣ ವಿಚ್ಛೇದನ ಪಡೆದಿದ್ದಾಗಿ ಯೂಟ್ಯೂಬ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ಬಾಲ್ಯದಿಂದಲೂ ಕೆಲಸದ ಒತ್ತಡ, ಸಾಮಾಜಿಕ ನಿರೀಕ್ಷೆಗಳನ್ನು ಪಾಲಿಸಿದ್ದೂ ಸಮಸ್ಯೆಗೆ ಕಾರಣ ಎಂದಿದ್ದಾರೆ.

ಬಾ ಬಾರೋ ರಸಿಕ, ಗ್ರೀನ್‌ ಸಿಗ್ನಲ್‌, ಮೈ ಗ್ರೀಟಿಂಗ್ಸ್‌, ತವರಿನ ಸಿರಿ, ಆಕಾಶ್‌ ಸೇರಿದಂತೆ ಹಲವಾರು ಹಿಟ್​ ಚಿತ್ರಗಳನ್ನು ನೀಡಿರುವ ನಟಿ ಮಾರಿಯಾ ಆಶಿತಾ ಕ್ರಾಸ್ತಾ ಸದ್ಯ ಚಿತ್ರರಂಗದಿಂದ ದೂರವಾಗಿದ್ದಾರೆ. 'ರೋಡ್ ರೋಮಿಯೋ' ಬಳಿಕ ಅವರು ಬೆಳ್ಳಿತೆರೆಯಿಂದ ಹಿಂದಕ್ಕೆ ಸರಿದಿದ್ದಾರೆ. ಬಳಿಕ ಇವರು ಸದ್ದು ಮಾಡಿದ್ದು ಮೀ ಟೂ ದಿಂದಾಗಿ. ತಾವು ಚಿತ್ರರಂಗದಿಂದ ದೂರ ಇರುವುದಕ್ಕೆ ಇದೂ ಕಾರಣ ಎಂದು ಆಶಿತಾ ಸಂದರ್ಶನದಲ್ಲಿ ಹೇಳಿದ್ದರು, ಅಡ್ಜಸ್ಟ್​ ಮಾಡಿಕೊಳ್ಳುವಂತೆ ನಿರ್ದೇಶಕರು, ನಿರ್ಮಾಪಕರು ಹೇಳುತ್ತಿದ್ದ ಬಗ್ಗೆ ವಿವರಿಸಿದ್ದರು. ಇದೀಗ ರಾಜೇಶ್​ ಗೌಡ ಯುಟ್ಯೂಬ್​ ಚಾನೆಲ್​ನಲ್ಲಿ ತಮ್ಮ ದಾಂಪತ್ಯದ ಜೀವನದ ಬಗ್ಗೆ ನಟಿ ಮಾತನಾಡಿದ್ದಾರೆ. ಆರು ವರ್ಷಗಳ ಪ್ರೀತಿ, ಪ್ರೇಮ ಒಂದೂವರೆ ವರ್ಷದ ದಾಂಪತ್ಯ ಜೀವನದಲ್ಲಿ ಹೇಗೆ, ಯಾಕೆ ಮುರಿದುಬಿತ್ತು ಎನ್ನುವುದನ್ನು ಅವರು ತೆರೆದಿಟ್ಟಿದ್ದಾರೆ. ಮದುವೆಯೆನ್ನುವ ಕಾನ್ಸೆಪ್ಟ್​ ಹೇಗೆ ಬಹುತೇಕರ ಜೀವನದಲ್ಲಿ ಕಹಿ ಅನುಭವ ನೀಡುತ್ತಿದೆ ಎಂಬ ಬಗ್ಗೆ ಅವರು ವಿವರಿಸಿದ್ದಾರೆ. 

'ನಾನೊಬ್ಬ ಉದ್ಯಮಿಯನ್ನು ಮದುವೆಯಾಗಿದ್ದೆ. ಆರೇಳು ವರ್ಷಗಳ ಪ್ರೀತಿ ನಮ್ಮದು. ಅವರು ಉದ್ಯಮಿ. ನಾನು ಬೆಳೆದ ವಾತಾವರಣ ಹೇಗಿತ್ತು ಎಂದರೆ ಶಾಲಾ, ಕಾಲೇಜು ಬಳಿಕ ಕೆಲಸವೇ ಎಲ್ಲಾ ಆಗಿತ್ತು. ಬೇರೆಯವರ ಮಕ್ಕಳಂತೆ ಎಂಜಾಯ್​ ಮಾಡಲಿಲ್ಲ, ಬಾಲ್ಯದಲ್ಲಿಯೂ ಬರೀ ಕೆಲಸ ಕೆಲಸ. ದೊಡ್ಡವಳಾದ ಮೇಲೂ ಷಾಪಿಂಗ್, ಪಾಕೆಟ್​ ಮನಿ ಎಂತೆಲ್ಲಾ ಕಂಡಿದ್ದೇ ಇಲ್ಲ. ಆಗಲೂ ಕೆಲಸ. ಅದಕ್ಕಾಗಿ ಹುಡುಗರ ಜೊತೆ ಬೇರೆಯುವುದು, ಬೇರೆ ಮಕ್ಕಳ ರೀತಿ ಇರುವುದು ಗೊತ್ತಿರಲಿಲ್ಲ. ಬಹುಶಃ 80-90ರ ದಶಕದಲ್ಲಿ ಹುಟ್ಟಿದ ಹಲವರದ್ದು ಇದೇ ಕಥೆ ಇರಬಹುದು' ಎನ್ನುತ್ತಲೇ ಹೀಗೆ ಬೆಳೆದಾಗ ದಿಢೀರ್​ ಎಂದು ಯುವಕನೊಬ್ಬನ ಪರಿಚಯವಾದಾಗ ಏನಾಗುತ್ತದೆ ಎನ್ನುವುದನ್ನು ನಟಿ ತೆರೆದಿಟ್ಟಿದ್ದಾರೆ.

'ನಾನು ಹುಟ್ಟಿದ್ದೇ ನಿನಗಾಗಿ' ಎಂದು ಬರೆದುಕೊಂಡಿದ್ದ ನಟಿ ಅಪರ್ಣಾ, ಎರಡೇ ವರ್ಷದಲ್ಲಿ ಡಿವೋರ್ಸ್​ ಘೋಷಣೆ!

ಆಗ ಇವರ ಪರಿಚಯವಾಯ್ತು. ಏನೋ ಎಲ್ಲಾ ಹೊಸಹೊಸ ಅನುಭವ. ಹುಡುಗರ ಜೊತೆ ಸುತ್ತಾಡಿಯೇ ಗೊತ್ತಿಲ್ಲದ ನನಗೆ ಇವರೇ ಪ್ರಪಂಚ ಆಗಿ ಹೋದರು. ನಮ್ಮ ಮನೆಯಲ್ಲಿ ಯಾವಾಗಲೂ ಹೆಣ್ಣುಮಕ್ಕಳು ಎಂದರೆ ಅಡ್ಜಸ್ಟ್​ ಮಾಡಿಕೊಳ್ಳಬೇಕು ಎನ್ನೋರು. ಅದೇ ನನ್ನ ತಲೆಯಲ್ಲಿ ಇತ್ತು. ನಾವಿಬ್ಬರೂ ಚೆನ್ನಾಗಿಯೇ ಇದ್ವಿ. ರಿಲೇಷನ್​ಷಿಪ್​ ಕೂಡ ಚೆನ್ನಾಗಿತ್ತು. ಆಗೀಗ ನಮ್ಮಿಬ್ಬರ ನಡುವೆ ವ್ಯತ್ಯಾಸ ಆಗುತ್ತಿದ್ದರೂ ಏನೂ ಅನ್ನಿಸ್ತಿರಲ್ಲ, ಆಗ ತಾನೇ ಹೊಸ ಸಂಬಂಧ, ಎಲ್ಲವೂ ಚೆನ್ನಾಗಿ ಎನ್ನಿಸ್ತಿತ್ತು. ಆದರೆ ಈ ರೀತಿ ಸಂಬಂಧದಲ್ಲಿ ನಮ್ಮ ಸೊಸೈಟಿಯಲ್ಲಿ ಇರಲೇಬಾರದಲ್ಲ, ಮದುವೆನೇ ಎಲ್ಲದಲ್ಲೂ ಸೊಲ್ಯೂಷನ್​ ಅಂತ ನನಗೂ ಹೇಳಲು ಶುರುಮಾಡಿದ್ರು, ಏನೇ ಆದ್ರೂ ಅಡ್ಜಸ್ಟ್​ಮೆಂಟ್​ ಅಂದರು.

ಮದುವೆಯಾದ ಮೇಲೆ ಅವರಿಗೆ ಎಲ್ಲಾ ರೀತಿ ನೆರವಾದೆ. ಅವರ ಉದ್ಯಮದಲ್ಲಿಯೂ ಸಾಕಷ್ಟು ಸಹಾಯ ಮಾಡಿದೆ. ಆದರೆ ನಾನು ಆಗಲೇ ನಟಿಯಾಗಿ ಸಾಕಷ್ಟು ಗುರುತಿಸಿಕೊಂಡಿದ್ದರಿಂದಲೋ ಏನೋ, ಒಟ್ಟಿನಲ್ಲಿ ಅವರಿಗೆ ನನ್ನ ಜೊತೆ ಹೊಂದಾಣಿಕೆ ಸರಿಯಾಗಲಿಲ್ಲ. ಅವರಿಗಾಗಿ ಸಾಕಷ್ಟು ನಾನು ಶ್ರಮಿಸಿದರೂ ಅವರಿಗೆ ಏನೋ ಒಂಥರಾ ಇನ್​ಫಿರಿಯಾರಿಟಿ ಕಾಡತೊಡಗಿತ್ತು. ಆದರೆ ಅಡ್ವಸ್ಟ್​ಮೆಂಟ್​ ಮಾಡ್ಕೋಬೇಕು ಹೆಣ್ಣುಮಕ್ಕಳು ಅಂತ ನಮ್ ಮನೆಯಲ್ಲಿ ತಲೆ ತುಂಬಿದ್ದರಿಂದ ಹಾಗೂ ಹೀಗೂ ಅದನ್ನೇ ಫಾಲೋ ಮಾಡಿದೆ. ಆದರೆ ಕೊನೆಗೆ ಅತಿರೇಕಕ್ಕೆ ಹೋಗಿ ಬಿಡ್ತು. ಇನ್ನು ಇದನ್ನು ಮುಂದುವರೆಸುವಲ್ಲಿ ಅರ್ಥವೇ ಇಲ್ಲ ಎಂದುಕೊಂಡೆ. ಬೇರೆ ಬೇರೆಯಾಗುವ ಅಂದೆ. ಆದರೆ ಅದಕ್ಕೆ ಅವರು ಮನಸ್ಸು ಮಾಡಲಿಲ್ಲ. ಮತ್ತಷ್ಟು ಅಡ್ಜಸ್ಟ್​ಮೆಂಟ್​ ನನಗೆ ಕಷ್ಟವಾಗಿದ್ದರಿಂದ ನಾನೇ ಏಕಾಂಗಿಯಾಗಿ ನಿರ್ಧಾರ ತೆಗೆದುಕೊಂಡು ಹೊರಬಂದೆ ಎಂದಿದ್ದಾರೆ ಆಶಿತಾ.

ಪೆಂಗ್ವಿನ್​ಗಳಲ್ಲೂ ಅಕ್ರಮ ಸಂಬಂಧ, ಡಿವೋರ್ಸ್! ಪಕ್ಷಿ ಪ್ರಪಂಚದ ನಂಬಲಸಾಧ್ಯ ಕೌತುಕ ತೆರೆದಿಟ್ಟ ಸಂಶೋಧಕರು

YouTube video player