ಗಂಡು ದಿಕ್ಕಿಲ್ಲದ ಸಂಸಾರವನ್ನು ನಾನೇ ನೋಡಿಕೊಂಡೆ; 'ಶಾಸ್ತ್ರಿ' ನಟಿ ಮಾನ್ಯ ಭಾವುಕ

ತಂದೆ ಸ್ಥಾನದಲ್ಲಿ ನಿಂತ ಸಾಯಿ ಬಾಬ. ಗಂಡು ದಿಕ್ಕಿಲ್ಲದ ಮನೆ ಅಂತ ಸಮಾಜ ನೋಡುವ ರೀತಿ ಸರಿಯಾಗಿರಲಿಲ್ಲ ಎಂದ ನಟಿ......

Actress Manya talks about family responsibility and sai baba vcs

2006ರಲ್ಲಿ ವರ್ಷ, ಶಾಸ್ತ್ರಿ, ಶಂಬು, ಬೆಳ್ಳಿ ಬೆಟ್ಟ, ಅಂಬಿ, ಈ ಪ್ರೀತಿ ಒಂಥರಾ ಹೀಗೆ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಟಿ ಮಾನ್ಯ ಸದ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದಾಗ ತಮ್ಮ ಫ್ಯಾಮಿಲಿ, ಸಿನಿಮಾ ಜರ್ನಿ ಅಂತ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 

ತಂದೆ ಕಳೆದುಕೊಂಡ ಘಟನೆ:

ಮಾನ್ಯ ಸಿನಿಮಾರಂಗದಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿದ್ದ ಸಮಯದಲ್ಲಿ ತಂದೆಯನ್ನು ಕಳೆದುಕೊಂಡು. ಸಣ್ಣ ವಯಸ್ಸಿನ ಹುಡುಗಿ ಆಗಿದ್ದರೂ ಧೈರ್ಯ ಕೆಡದೆ ಸಂಸಾರವನ್ನು ಸಾಗಿಸಲು ಮುಂದಾಗುತ್ತಾರೆ. ಒಮ್ಮೆ ಕುಟುಂಬಸ್ಥರು ಶಿರಡಿಗೆ ಪ್ರಯಾಣ ಮಾಡಿದಾಗ ಅವರಿಂದ ಸಾಯಿ ಬಾಬ ಪುಸ್ತಕ ತರಿಸಿಕೊಳ್ಳುತ್ತಾರೆ. ಅದನ್ನು ನೋಡಿ ನನ್ನ ಜೀವನವೇ ಬದಲಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಮಾನ್ಯ.

ಸ್ಟಾರ್ ನಟಿ ಆದ್ಮೇಲೆ ನಾನು ಸ್ಟಾರ್ ನಟನ ಪತ್ನಿ ಆಗಿದ್ದು; ಡಿವೋರ್ಸ್‌ಗೂ ಮುನ್ನ ಅಮೃತಾ ಸಿಂಗ್ ಫುಲ್ ಖಡಕ್!

'ಸಿನಿಮಾ ಇಂಡಸ್ಟ್ರಿಯಲ್ಲಿ ಅವಕಾಶ ಕೊಟ್ಟಿದ್ದಕ್ಕೆ ನನ್ನ ಫ್ಯಾಮಿಲಿಯನ್ನು ನೋಡಿಕೊಳ್ಳಲು ಸಾಧ್ಯವಾಗಿದ್ದು. ಆಗ ನಾನು ಕೇವಲ 13-14 ವರ್ಷದ ಹುಡುಗಿ ಬೇರೆ ಏನೂ ಕೆಲಸ ಮಾಡಲು ಗೊತ್ತಿಲ್ಲ ನನ್ನ ಕೈ ಹಿಡಿದಿದ್ದು ಸಿನಿಮಾ ಮಾತ್ರ. ನನ್ನ ತಾಯಿ ಪಾಪದವರು ತುಂಬಾ ಅಮಾಯಕರು ಏನು ಅಂದ್ರೆ ಏನೂ ಗೊತ್ತಾಗುವುದಿಲ್ಲ, ನನ್ನ ತಂಗಿ ತುಂಬಾ ಚಿಕ್ಕ ಹುಡುಗಿ ಆಗಿದ್ದಳು.ತಂದೆಯನ್ನು ಕಳೆದುಕೊಂಡಾಗ ಮನೆಯಲ್ಲಿ ದೊಡ್ಡವರು ಅಂತ ಯಾರೂ ಇಲ್ಲ ಒಬ್ರು ಗಂಡು ದಿಕ್ಕಿಲ್ಲ ಆ ಸಮಯದಲ್ಲಿ ಸೊಸೈಟಿ ನೋಡುವ ದೃಷ್ಟಿ ಬದಲಾಗುತ್ತದೆ' ಎಂದು ರಘುರಾಮ್‌ ಯೂಟ್ಯೂಬ್‌ ಸಂದರ್ಶನದಲ್ಲಿ ಮಾನ್ಯ ಮಾತನಾಡಿದ್ದಾರೆ.

'ಗುಡ್ ನ್ಯೂಸ್‌ ಯಾವಾಗ' ಅಂತ ಜನರು ಕೇಳೋದು ನಿಲ್ಲಿಸಿದರೆ ಜೀವನ ಸಾರ್ಥಕ ಆಗುತ್ತೆ: ಅನು ಪ್ರಭಾಕರ್

' ಅಪ್ಪ ಇಲ್ಲದ ಕುಟುಂಬ ಅಂತ ಮಾತನಾಡುವ ಮುನ್ನ ಒಂದು ನಿಮಿಷನೂ ಯೋಚನೆ ಮಾಡುವುದಿಲ್ಲ. ಹೆಣ್ಣು ಮಕ್ಕಳ ಮನಸ್ಸಿ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದು ಯಾರೂ ಯೋಚನೆ ಮಾಡಲಿಲ್ಲ. ನಾನು ಎಂದೂ ಸಿನಿಮಾ ಹುಡುಕಿಕೊಂಡು ಹೋಗಿಲ್ಲ ಆ ಸಮಯದಲ್ಲಿ ಸಾಯಿ ಬಾಬ ಅವಕಾಶ ಮಾಡಿಕೊಟ್ಟರು ಅದಾದ ಮೇಲೆ ನಾನು ತುಂಬಾ ಬ್ಯುಸಿಯಾಗಿ ಬಿಟ್ಟಿ. ಓದುವುದು ಅಂದ್ರೆ ತುಂಬಾನೇ ಇಷ್ಟ ಆದರೆ ಮನೆ ಜವಾಬ್ದಾರಿ ತೆಗೆದುಕೊಳ್ಳಬೇಕು ಅಂತ ಓದುವುದನ್ನು ಅರ್ಧಕ್ಕೆ ನಿಲ್ಲಿಸಿಬಿಟ್ಟೆ' ಎಂದು ಮಾನ್ಯ ಹೇಳಿದ್ದಾರೆ. 

Latest Videos
Follow Us:
Download App:
  • android
  • ios