Asianet Suvarna News Asianet Suvarna News

ರೈತ ಮಹಿಳೆ ಪಾತ್ರದಲ್ಲಿ ಮಾನ್ವಿತಾ ಹರೀಶ್‌!

ತುಂಬಾ ದಿನಗಳ ನಂತರ ನಟಿ ಮಾನ್ವಿತಾ ಹರೀಶ್‌ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಪಿ ಸಿ ಶೇಖರ್‌ ನಿರ್ದೇಶನದ ಹೊಸ ಚಿತ್ರಕ್ಕಾಗಿ ಹೊಸ ಫೋಟೋಶೂಟ್‌ ಕೂಡ ಮಾಡಿಸಿಕೊಂಡಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಚಿತ್ರದ ನಾಯಕನ ಪಾತ್ರದಲ್ಲಿ ಹೊಸ ನಟ ಕಾಣಿಸಿಕೊಳ್ಳಲಿದ್ದಾರೆ.

Actress Manvitha Kamath to star in director PC Shekhar film as farmer girl vcs
Author
Bangalore, First Published Jul 31, 2021, 1:50 PM IST
  • Facebook
  • Twitter
  • Whatsapp

ಪಾತ್ರಕ್ಕಾಗಿ ವಿಶೇಷ ತಯಾರಿ

ನಟಿ ಮಾನ್ವಿತಾ ಚಿತ್ರದಲ್ಲಿನ ಪಾತ್ರಕ್ಕಾಗಿ ವಿಶೇಷವಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ‘ಪಿ ಸಿ ಶೇಖರ್‌ ಹೇಳಿದ ಕತೆ ನನಗೆ ತುಂಬಾ ಇಷ್ಟವಾಯಿತು. ಅವರ ಚಿತ್ರಗಳಲ್ಲಿ ನಿರೂಪಣೆ ಹಾಗೂ ಕಲಾವಿದರ ಸ್ಕ್ರೀನ್‌ ಪ್ರೆಸೆನ್ಸ್‌ ಚೆನ್ನಾಗಿರುತ್ತದೆ. ನಾನು ಪ್ರತಿ ಚಿತ್ರದಲ್ಲೂ ಹೊಸ ನಟಿಯಂತೆ ಕೆಲಸ ಮಾಡುತ್ತೇನೆ. ಇಲ್ಲೂ ಅದೇ ಹೊಸತನದಿಂದ ತೊಡಗಿಸಿಕೊಂಡಿದ್ದೇನೆ. ನನ್ನ ಪಾತ್ರ ಹಳ್ಳಿ ಹೆಣ್ಣುಮಗಳು. ಆ ಕಾರಣಕ್ಕೆ ಪಾತ್ರಕ್ಕಾಗಿ ಈಗ ವೆಟ್ರಿಮಾರನ್‌ ಹಾಗೂ ಧನುಷ್‌ ಚಿತ್ರಗಳನ್ನು ನೋಡುತ್ತಿದ್ದೇನೆ. ಇವರ ಚಿತ್ರಗಳಲ್ಲಿ ನಟಿಯರ ಪಾತ್ರಗಳೂ ಸಹ ಸ್ಟ್ರಾಂಗ್‌ ಆಗಿರುತ್ತವೆ. ಅದೇ ರೀತಿಯ ಗಟ್ಟಿಗಿತ್ತಿಯ ಪಾತ್ರ ನನ್ನದು’ ಎನ್ನುತ್ತಾರೆ ಮಾನ್ವಿತಾ ಹರೀಶ್‌.

ತುಂಬಾ ದಿನಗಳ ನಂತರ ಹೊಸ ಚಿತ್ರ ಒಪ್ಪಿಕೊಂಡಿದ್ದೇನೆ. ಇದರ ಜತೆಗೆ ಮತ್ತೆರಡು ಚಿತ್ರಗಳಿಗೆ ಸಹಿ ಮಾಡಿದ್ದೇನೆ. ಸದ್ಯದಲ್ಲೇ ಅವುಗಳ ಬಗ್ಗೆ ಹೇಳುತ್ತೇನೆ. ಧೀರನ್‌ ರಾಮ್‌ಕುಮಾರ್‌ ಜತೆ ‘ಶಿವ 143’ ಹಾಗೂ ಮರಾಠಿ ಹಾಗೂ ಕನ್ನಡದಲ್ಲಿ ಮೂಡಿ ಬಂದಿರುವ ‘ರಾಜಸ್ಥಾನ್‌ ಡೈರೀಸ್‌’ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ.- ಮಾನ್ವಿತಾ ಹರೀಶ್‌, ನಟಿ

ಲಾಕ್‌ಡೌನ್‌ನಲ್ಲಿ ಸ್ನಾತಕೋತ್ತರ ಪದವಿ; ಎರಡು ಸೆಮಿಸ್ಟರ್ ಮುಗಿಸಿದ ನಟಿ ಮಾನ್ವಿತಾ ಕಾಮತ್

ಪ್ರಬುದ್ಧ ನಟಿ ಪಾತ್ರ

ಎಸ್‌ ಆರ್‌ ವೆಂಕಟೇಶ್‌ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ‘ಈ ಕತೆಗೆ ಪ್ರಬುದ್ಧ ನಟಿ ಬೇಕಿತು. ಆ ಕಾರಣಕ್ಕೆ ಮಾನ್ವಿತಾ ಅವರನ್ನು ಆಯ್ಕೆ ಮಾಡಿಕೊಂಡೆ. ಹಳ್ಳಿ ಹಿನ್ನೆಲೆಯಲ್ಲಿ ಬರುವ ರೈತ ಮಹಿಳೆಯ ಪಾತ್ರದಲ್ಲಿ ಮಾನ್ವಿತಾ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಪಾತ್ರಕ್ಕೆ ಆ್ಯಕ್ಷನ್‌ ಕೂಡ ಇದೆ. ರೊಮ್ಯಾಂಟಿಕ್‌ ಥ್ರಿಲ್ಲರ್‌ ಜಾನರ್‌ ಚಿತ್ರವಾದರೂ ನಾಯಕಿ ಪ್ರಧಾನ ಚಿತ್ರವಾಗಿಯೂ ಕಾಣುತ್ತದೆ’ ಎನ್ನುತ್ತಾರೆ ನಿರ್ದೇಶಕ ಪಿ ಸಿ ಶೇಖರ್‌. ಶಕ್ತಿ ಶೇಖರ್‌ ಕ್ಯಾಮೆರಾ ಹಾಗೂ ಸಚಿನ್‌ ಜಗದೀಶ್ವರ್‌ ಎಸ್‌ ಬಿ ಅವರು ಡೈಲಾಗ್‌ ಬರೆಯುತ್ತಿದ್ದಾರೆ. ಅರ್ಜುನ್‌ ಜನ್ಯಾ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

Follow Us:
Download App:
  • android
  • ios