ನಾನು ಬದುಕಬೇಕು ದಯವಿಟ್ಟು ನನ್ನನ್ನು ಉಳಿಸಿಕೋ, ಕೊನೆ ಕ್ಷಣ ಆ ನಟನ ಬಳಿ ಆಂಗಲಾಚಿ ಬೇಡಿಕೊಂಡಿದ್ದ ನಟಿ ಮಂಜುಳಾ!
ಕನ್ನಡ ಚಿತ್ರರಂಗದಲ್ಲಿ ಉತ್ತಂಗದ ನಟಿಯಲ್ಲಿ ಎಂದಿಗೂ ಅಜರಾಮರಾಗಿ ಉಳಿವ ನಟಿ ಮಂಜುಳಾ. 80ರ ದಶಕದ ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ನಟಿ ದುರಂತ ಅಂತ್ಯ ಕಂಡರು. ಅವರ ಸಾವಿನ ಬಗ್ಗೆ ಇಂದಿಗೂ ಅನೇಕ ಗೊಂದಲಗಳಿವೆ. ಆದರೆ ಸಾವಿನ ಕೊನೆ ಕ್ಷಣದಲ್ಲಿ ಆಕೆ ಆಡಿದ ಮಾತು ಎಂತವರ ಕಣ್ಣಲ್ಲೂ ನೀರು ತರಿಸುತ್ತೆ.
ಸಣ್ಣ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಬಂದ ಮಂಜುಳಾ ತನ್ನ ಅಮೋಘ ನಟನೆ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದನೆ ಮಾಡಿದರು. ಸಣ್ಣ ವಯಸ್ಸಿನಲ್ಲೇ ಅಗಲಿದರು. ಖಾಸಗಿ ಜೀವನದಲ್ಲಿ ಏರಿಳಿತಗಳನ್ನು ಕಂಡ ನಟಿ ತನ್ನ 34ನೇ ವಯಸ್ಸಿಗೆ ಇಹಲೋಕ ತ್ಯಜಿಸಿದರು.
ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟಿ ಬೆಂಕಿಯಿಂದ ಬೆಂದು ಆಸ್ಪತ್ರೆಯಲ್ಲಿ ಒಂದು ವಾರ ಇದ್ದರು. ಸಾಯುವ ಮುನ್ನ ಕೊನೆ ಗಳಿಗೆಯಲ್ಲಿ ತನ್ನನ್ನು ನೋಡಲು ಬಂದ ಅತ್ಯಾಪ್ತ ನಟನ ಬಳಿ ನನಗೆ ಸಾಯಲು ಇಷ್ಟವಿಲ್ಲ ಕೈ ಮುಗಿದು ಬೇಡಿ ಕೊಳ್ಳುತ್ತೇನೆ ನನ್ನನ್ನು ಉಳಿಸಿಕೋ ಎಂದು ಅಂಗಲಾಚಿ ಬೇಡಿಕೊಂಡರಂತೆ. ಆ ನಟ ಯಾರು? ಸಂಬಂಧ ಏನು ಎಂಬ ಬಗ್ಗೆ ಮುಂದೆ ಓದಿ ತಿಳಿಯಿರಿ.
ವರನಟ ಡಾ.ರಾಜ್ ಕುಮಾರ್, ಡಾ ವಿಷ್ಣುವರ್ಧನ್, ಪ್ರಣಯರಾಜ ಶ್ರೀನಾಥ್, ಅಂಬರೀಶ್, ಶಂಕರ್ ನಾಗ್ ಸೇರಿದಂತೆ ಅನೇಕ ಮೇರು ನಟರ ಜೊತೆಗೆ ಕನ್ನಡ, ತಮಿಳು ಹಾಗೂ ತೆಲುಗು ಸೇರಿ ಸುಮಾರು 102 ಸಿನಿಮಾಗಳಲ್ಲಿ ನಟಿಸಿದ್ದಾರೆ. ಹೀಗಿದ್ದಾಗ ಬೆಂಕಿ ಬೆಂದು ಆಸ್ಪತ್ರೆಯಲ್ಲಿದ್ದ ಮಂಜುಳಾರನ್ನು ನೋಡಲು ಕನ್ನಡದ ಖ್ಯಾತ ನಟನೊಬ್ಬ ಬರುತ್ತಾರೆ. ಅವರಿಬ್ಬರು ಒಟ್ಟಿಗೆ ಅಭಿನಯಿಸಿದ್ದರು.
ತೆರೆಯ ಆಚೆಗೆ ಅತ್ಯಂತ ಒಳ್ಳೆಯ ಬಾಂಧವ್ಯ ಹೊಂದಿದ್ದರು. ಅದು ಎಂತಹ ಬಾಂಧವ್ಯ ಎಂದರೆ ಇವರಿಬ್ಬರು ಅಣ್ಣ-ತಂಗಿಯಂತಿದ್ದರು. ನಟಿ ಆ ನಟನನ್ನು ಅಣ್ಣನೆಂದೇ ಸಂಭೋಧಿಸುತ್ತಿದ್ದರು. ಅದೇ ಬಾಂದವ್ಯದಲ್ಲಿ ಕೊನೆವರೆಗೂ ಮಂಜುಳಾರನ್ನು ನೋಡಿಕೊಂಡರು. ಅವರನ್ನು ಬದುಕಿಸಲು ನಾನಾ ವಿಧದ ಪ್ರಯತ್ನ ಮಾಡಿದ್ದರು.
ದೇವರೇ ಈಕೆಗೆ ಈ ರೀತಿಯ ಸಾವನ್ನು ಯಾಕೆ ನೀಡುತ್ತಿದ್ದಿಯಾ? ಅವಳನ್ನು ಉಳಿಸಿಕೊಡು ಎಂದು ದೇವರಲ್ಲಿ ಬೇಡಿಕೊಂಡರಂತೆ. ಅವರು ಮತ್ಯಾರು ಅಲ್ಲ ಪ್ರಣಯರಾಜ ಶ್ರೀನಾಥ್. ಇವರಿಬ್ಬರೂ ಅನೇಕ ಸಿನೆಮಾಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಇವರಿಬ್ಬರದು ಅಣ್ಣ-ತಂಗಿ ಸಂಬಂಧ, ಮಂಜುಳಾ ಏನೇ ತೀರ್ಮಾನ ತೆಗೆದುಕೊಳ್ಳುವುದಿದ್ದರೂ ಶ್ರೀನಾಥ್ ಬಳಿ ಮೊದಲು ಚರ್ಚಿಸುತ್ತಿದ್ದರಂತೆ. ಮಂಜುಳಾ ದುರ್ಘಟನೆ ನಡೆದು ಆಸ್ಪತ್ರೆಯಲ್ಲಿ ಇರುವುದು ಗೊತ್ತಾಗಿ ಶ್ರೀನಾಥ್ ಧಾವಿಸಿ ಬರುತ್ತಾರೆ.
ಈ ವೇಳೆ ಮಂಜುಳಾ ಶ್ರೀನಾಥ್ ಬಳಿ, ಅಣ್ಣಾ ನಾನು ಮತ್ತೆ ಮೊದಲಿನಂತೆ ಆಗುತ್ತೇನೆ ಅಲ್ವಾ? ನಾನು ಬದುಕುತ್ತೇನಾ? ನನಗೆ ಇಷ್ಟುಬೇಗ ಸಾಯಲು ಇಷ್ಟ ಇಲ್ಲ. ಕೈ ಮುಗಿತೀನಿ ನನ್ನನ್ನು ಉಳಿಸಿಕೋ ಎಂದು ಅಂಗಲಾಚಿದರಂತೆ.
ಆಗ ಶ್ರೀನಾಥ್ ಧೈರ್ಯ ಹೇಳಿ ಏನೂ ಆಗುವುದಿಲ್ಲ ಖಂಡಿತಾ ಬದುಕುವೆ, ಮತ್ತೆ ಚೆನ್ನಾಗಿ ಆಗುತ್ತೀಯಾ, ಇನ್ನೂ ನನ್ನ ಜತೆ ನಟಿಸುತ್ತೀ, ಹೆಚ್ಚು ಸಿನೆಮಾ ಮಾಡುತ್ತೀಯಾ. ನೀನು ಅಭಿನಯಿಸಲೇಬೇಕು ಹೆದರಬೇಡ ಧೈರ್ಯವಾಗಿರು ಚೇತರಿಸಿಕೋ ಎಂದರಂತೆ. ಆದರೆ ವಿಧಿಯ ಆಟ ಬೇರೆಯೇ ಇತ್ತು. 1 ವಾರ ಆಸ್ಪತ್ರೆಯಲ್ಲಿ ನರಳಾಡಿದ ಮಂಜುಳಾ ಇಹಲೋಕ ತ್ಯಜಿಸಿದರು.
ಅವರ ಸಾವು ಆತ್ಮಹತ್ಯೆಯೋ ಸಹಜ ಸಾವೋ ಎಂಬ ಬಗ್ಗೆ ಈಗಲೂ ಚರ್ಚೆ ಇದ್ದೇ ಇದೆ. ಇತ್ತೀಚೆಗೆ ಅವರ ಸಹೋದರನ ಪತ್ನಿ ಅಂದರೆ ಅತ್ತಿಗೆ ಮಂಜುಳ ಸಾವಿನ ಬಗ್ಗೆ ಮಾತನಾಡಿ, ಏನು ಮಾಡಲು ಸಾಧ್ಯ ಆ ಕೆಟ್ಟ ಘಟನೆ ನಡೆದು ಹೋಯ್ತು. ಒಂದು ಸೆಕೆಂಡಿನಲ್ಲಿ ಎಲ್ಲವೂ ನಡೆದು ಹೋಯ್ತು. ಸ್ಟವ್ ಹಚ್ಚಿದ್ದರು. ಗ್ಯಾಸ್ ಹಚ್ಚಿದ್ದನ್ನು ಮರೆತು ಹೋದರು. ಮಗ ಬಂದ ಎಂದು ಅವನ ಜೊತೆಗೆ ಹೋಗಿದ್ದಾರೆ. ಸಂಜೆ ಹೊತ್ತಲ್ಲಿ ಸೊಳ್ಳೆ ಬರುತ್ತೆ ಎಂದು ಕಿಟಕಿಯನ್ನು ಬಂದ್ ಮಾಡಲಾಗಿತ್ತು. ಸ್ವಲ್ಪ ಹೊತ್ತಿನ ಬಳಿಕ ಬಂದು ಬೆಂಕಿ ಅಂಟಿಸಿದ್ದಾರೆ. ಸಿಂತೆಟಿಕ್ ಬಟ್ಟೆ ಧರಿಸಿದ್ದರಿಂದ ಬೆಂಕಿ ಹೊತ್ತಿಕೊಂಡಿತು.
ಆ ದಿನ ಮನೆಯಲ್ಲಿ ಯಾರೂ ಇರಲಿಲ್ಲ. ಚಿಕ್ಕ ಮಕ್ಕಳಿದ್ದರು. ಕಿರುಚಿದಾಗ ಏನು ಮಾಡಬೇಕು ತಿಳಿಯದೆ ಹೊದಿಕೆಯಲ್ಲಿ ಸುತ್ತಿದೆವು. ಆಟೋದಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬೆಂಕಿ ಅವಘಡ ಎಂದು ಚಿಕಿತ್ಸೆ ನೀಡಲಿಲ್ಲ. ಬಳಿಕ ಅಲ್ಲಿಂದ ವಿಕ್ಟೋರಿಯಾಗೆ ಕರೆದುಕೊಂಡು ಹೋದೆವು. ರಾತ್ರಿ 8 ಗಂಟೆಯ ಸಮಯವಾಗಿತ್ತು. ಆಟೋದಲ್ಲಿ ಹೋಗುವಾಗ ನೀರು ಕೇಳಿದರು ತಕ್ಷಣ ಗಾಡಿ ನಿಲ್ಲಿಸಿ ನೀರು ತಂದು ಕೊಟ್ಟೆ. ತಣ್ಣಗಾಯ್ತು ಎಂದರು. ಬಳಿಕ ಏನಾಯ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಇದು ಆತ್ಮಹತ್ಯೆಯಲ್ಲ ಅಗ್ನಿ ಅವಘಡ ನಾನೇ ನೋಡಿದ್ದೇನೆ ಎಂದು ಅತ್ತಿಗೆ ಹೇಳಿದ್ದಾರೆ.