ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ನಟಿ ಜಯಸುಧಾ. ಇಂಡಸ್ಟ್ರಿಯಲ್ಲಿರುವ ತಾರತಮ್ಯದ ಬಗ್ಗೆ ಮಾತನಾಡಿದ ನಟಿ...

ನಾಯಕಿಯಾಗಿ ಸಿನಿಮಾ ಜರ್ನಿ ಆರಂಭಿಸಿದ ನಟಿ ಜಯಸುಧಾ ಈಗ ಪಂಚಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಸ್ಟಾರ್ ನಟರು ಮತ್ತು ನಿರ್ದೇಶಕರ ಜೊತೆ ಕೆಲಸ ಮಾಡಿರುವ ಜಯಸುಧಾ ನಿಧಾನವಾಗಿ ಪೋಷಕ ಪಾತ್ರಗಳತ್ತ ಸೆರೆದಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು 50 ವರ್ಷ ಪೂರೈಸಿದ ಪ್ರಯುಕ್ತ ಜಯಸುಧಾ ಖಾಸಗಿ ವೆಬ್‌ವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಚಿತ್ರರಂಗದಲ್ಲಿರುವ ತಾರತಮ್ಯದ ಬಗ್ಗೆ ಚರ್ಚೆ ಮಾಡಿದ್ದಾರೆ. 

ಜಯಸುಧಾ ಮಾತು:

'ಬಾಲಿವುಡ್‌ ನಟಿಯರು ಬಂದರೆ ಅವರಿಗೆ ನೀಡುವ ಆತಿಥ್ಯವೇ ಬೇರೆ. ಅವರು ಜೊತೆಗೆ ಕರೆದುಕೊಂಡು ಬರುವ ನಾಯಿಗಳಿಗೂ ರೂಮ್ ಬುಕ್ ಮಾಡಿ ಕೊಡುತ್ತಾರೆ. ಆದರೆ ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ' ಎಂದು ಜಯಸುಧಾ ಹೇಳಿದ್ದಾರೆ. 50 ವರ್ಷಗಳ ಜರ್ನಿಯಲ್ಲಿ ಸುಮಾರು 300 ಸಿನಿಮಾಗಳಲ್ಲಿ ಜಯ ಅಭಿನಯಿಸಿದ್ದಾರೆ. ಸುಲಭವಾದ ಜರ್ನಿ ಇದಲ್ಲದ ಕಾರಣ ಪದ್ಮಶ್ರೀ ಗೌರವ ಸಿಕ್ಕಿಲ್ಲ ಅನ್ನೋ ಬೇಸರ ಅವರನ್ನು ಕಾಡುತ್ತಿದೆ. ಸೌತ್‌ ಸಿನಿಮಾ ರಂಗದವರು ಬಾಲಿವುಡ್‌ನಿಂದ ಬರುವ ನಟಿಯರನ್ನು ತುಂಬಾನೇ ವಿಭಿನ್ನವಾಗಿ ಟ್ರೀಟ್ ಮಾಡುತ್ತಾರೆ ಸ್ಥಳೀಯ ನಟಿಯರಿಗೆ ಸರಿಯಾಗಿ ಗೌರವ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

'ಬಾಲಿವುಡ್‌ನಲ್ಲಿ ಕಂಗನಾ ರಣಾವತ್‌ಗೆ ಪದ್ಮಶ್ರೀ ಕೊಟ್ಟಿದ್ದಾರೆ. ನನಗಿಲ್ಲ. ಒಂದು ವೇಳೆ ನಾನು ಬಾಲಿವುಡ್‌ನಲ್ಲಿ 50 ವರ್ಷ ಸೇವೆ ಸಲ್ಲಿಸಿದ್ದರೆ ಇಂಡಸ್ಟ್ರಿಯವರು ಒಂದು ಹೂಗುಚ್ಛವನ್ನಾದರೂ ಕಳುಹಿಸುತ್ತಿದ್ದರು. ಆದರೆ ಟಾಲಿವುಡ್‌ನಲ್ಲಿ ಅದೂ ಇಲ್ಲ. ಇದೇ ಹೀರೋ ಆಗಿದ್ದರೆ ಅವರಿಗೆ ದೊಡ್ಡ ಅಬ್ಬರ ಮಾಡಿ ಬಿಡುತ್ತಿದ್ದರು' ಎಂದು ಜಯಸುಧಾ ಮಾತನಾಡಿದ್ದಾರೆ. 

ಕನ್ನಡಿಗರ ತಾಕತ್ತು ಏನೆಂದು ಎಲ್ರಿಗೂ ಗೊತ್ತು: ಗೀತಾ ಕೃಷ್ಣಗೆ ಟಾಂಕ್‌ ಕೊಟ್ಟ ರಾಘವೇಂದ್ರ ರಾಜ್‌ಕುಮಾರ್

ನಟಿಯಾಗಿ ಮಾತ್ರವಲ್ಲದೆ 80ರ ದಶಕದಲ್ಲೂ ಜಯಸುಧಾ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದರು. 'ಆಗ ನಟ ಶೋಭನ್ ಬಾಬು ಹಣ ಕೊಡಿಡುವಂತೆ, ಜಮೀನು ಕೊಂಡುಕೊಳ್ಳುವಂತೆ ಸಾಕಷ್ಟು ಬಾರಿ ಹೇಳಿದ್ದರು. ನಾನು ಕೇಳಿಲ್ಲ. ನಟಿ ಸಾವಿತ್ರಿಯವರ ರೀತಿಯಲ್ಲಿ ನಾನು ಸಾಕಷ್ಟು ಹಣ ಕಳೆದುಕೊಂಡಿರುವೆ' ಎಂದಿದ್ದಾರೆ.

Casting Couch ಸಂತ್ರಸ್ತರು ನಟಿಯರಷ್ಟೇ ಅಲ್ಲ, ಬಾಲಿವುಡ್‌ ನಟರೂ ಅನುಭವಿಸಿದ್ದಾರಂತೆ

ಸಹಜ ನಟಿ ಎಂದೇ ಬಿರುದು ಪಡೆದುಕೊಂಡಿರುವ ಜಯಸುಧಾ 1985ರಲ್ಲಿ ಸಾಹಸ ಸಿಂ ವಿಷ್ಣುವರ್ಧನ್‌ ನಟನೆಯ ನೀ ತಂಡ ಕಾಣಿಕೆ, ಮೊಂಡ, ತಾಯಿಯ ಮಡಿಲು, ವಜ್ರಕಾಯ ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 

'ಹೀರೋಗಳಿಗೆ ಸಮಸ್ಯೆ ಇದ್ದರೆ ಅದನ್ನು ಹೀರೋಯಿನ್ ಮೇಲೆ ಹಾಕುತ್ತಾರೆ. ಅವರಿಗೆ ಏನೂ ಬರೋಲ್ಲ ಅಂದ್ರೆ ಪಕ್ಕದಲ್ಲಿರುವವರು ಹೆಚ್ಚಿಗೆ ಮಾಡಬೇಕು ಎಂದು ನಿರೀಕ್ಷೆ ಮಾಡುತ್ತಾರೆ. ದೊಡ್ಡ ನಟರಿಗೆ ನೃತ್ಯ ಮಾಡಲು ಬರೋಲ್ಲ ಅಂದ್ರೆ ಅವರ ಪಕ್ಕದಲ್ಲಿರುವ ನಟಿಯರ ಬಳಿ ಬಂದು ನೀವು ಸರಿಯಾಗಿ ಮೂವ್ಮೆಂಟ್ ಮಾಡುತ್ತಿಲ್ಲ ಎಂದು ಹೇಳುತ್ತಾರೆ. ಇದರಿಂದ ಬಾಲಿವುಡ್‌ ನಟಿಯರಿಗೆ ಮಾತ್ರ ಪದ್ಮಶ್ರೀ ಸಿಗುತ್ತಿರುವುದು ಯಾಕೆ ತೆಲುಗು ನಟಿಯರಿಗೆ ಕೊಡಲು ಯೋಚನೆ ಮಾಡುತ್ತೀರಾ?' ಎಂದು ಜಯಸುಧಾ ಹೇಳಿದ್ದಾರೆ.