ಹರ್ಷಿಕಾ ಪೂಣಚ್ಚ ಮತ್ತೊಂದು ಭೋಜ್‌ಪುರಿ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಹೆಸರು ‘ಸಾಜನ್ ರೇ ಝೂಟ್ ಮತ್ ಬೋಲೋ’.  

ಸ್ಯಾಂಡಲ್‌ವುಡ್‌ ಸುಂದರಿ ಹರ್ಷಿಕಾ ಪೂಣಚ್ಚ ಕೊರೋನಾ ಲಾಕ್‌ಡೌನ್‌ ಆರಂಭದಿಂದಲ್ಲೂ 'ಭುವನಂ' ಫೌಂಡೇಶನ್ ಮೂಲಕ ಜನರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಹರ್ಷಿಕಾ ಮುಂದಿನ ಭೋಜ್‌ಪುರಿ ಚಿತ್ರದ ಬಗ್ಗೆ ಮಾಹಿತಿ ಸಿಕ್ಕಿದೆ.

ಹಸುಗೂಸಿಗೆ ನಟಿ ಹರ್ಷಿಕಾ ಪೂಣಚ್ಚ ಹೆಸರಿಟ್ಟ ಸವಸುದ್ದಿ ಗ್ರಾಮದ ಲಕ್ಷ್ಮಣ್! 

ಭೋಜ್‌ಪುರಿಯ ಯುವ ನಟ ಪ್ರದೀಪ್ ಪಾಂಡೆ ಚಿಂಟು ಈ ಚಿತ್ರದ ನಾಯಕ. ಈಗಾಗಲೇ ಚಿತ್ರಕ್ಕೆ 15 ದಿನಗಳ ಕಾಲ ಶೂಟಿಂಗ್ ಆಗಿದೆ. ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ ಟಿಕ್‌ಟಾಕ್ ಸ್ಟಾರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕೊಡಗಿನ ಹಳ್ಳಿಹಳ್ಳಿಗೂ ತೆರಳಿ ಸೋಂಕಿತರಿಗೆ ನೆರವು ನೀಡಿದ ಭುವನ್, ಹರ್ಷಿಕಾ! 

‘ಈಗಾಗಲೇ ಒಂದು ಭೋಜ್‌ಪುರಿ ಚಿತ್ರದಲ್ಲಿ ನಟಿಸಿದ್ದು, ಅದು ಬಿಡುಗಡೆ ಆಗುವ ಮುನ್ನವೇ ಮತ್ತೊಂದು ಭೋಜ್‌ಪುರಿ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ತುಂಬಾ ಒಳ್ಳೆಯ ಪಾತ್ರ. ಭೋಜ್‌ಪುರಿಯಲ್ಲಿ ದೊಡ್ಡ ಹೆಸರು ಇರುವ ನಟನ ಜತೆಗೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿ ಇದೆ. ಸದ್ಯದಲ್ಲೇ ಮುಂದಿನ ಹಂತದ ಚಿತ್ರೀಕರಣ ನಡೆಯಲಿದೆ’ ಎನ್ನುತ್ತಾರೆ ಹರ್ಷಿಕಾ ಪೂಣಚ್ಚ.