ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆಗಸ್ಟ್ 24ಕ್ಕೆ ಮದುವೆ ನಡೆಯುತ್ತಿದೆ. 

ಸ್ಯಾಂಡಲ್‌ವುಡ್ ಮತ್ತೊಂದು ಮದುವೆಗೆ ಸಜ್ಜಾಗಿದೆ. ಕನ್ನಡದ ನಟಿ ಹರ್ಷಿಕಾ ಪೂಣಚ್ಚ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಬಹುಕಾಲದ ಗೆಳೆಯ ಬುವನ್ ಪೊನ್ನಣ್ಣ ಜೊತೆ ಹರ್ಷಿಕಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಬ್ಬರೂ ಅನೇಕ ವರ್ಷಗಳ ಸ್ನೇಹಿತರು. ಇದೇ ಸ್ನೇಹ ಪ್ರೀತಿಯಾಗಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅಂದಹಾಗೆ ಇಬ್ಬರ ಮದುವೆ ಆಗಸ್ಟ್​ 24ರಂದು ನಡೆಯುತ್ತಿದೆ. ತಮ್ಮ ಹುಟ್ಟೂರಿನಲ್ಲೇ ಈ ಜೋಡಿ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. 

ವಿರಾಜಪೇಟೆಯ ಅಮ್ಮತ್ತಿಯಲ್ಲಿ ಹರ್ಷಿಕಾ ಮತ್ತು ಭುವನ್​ ಜೋಡಿಯ ಮದುವೆ ನಡೆಯುತ್ತಿದೆ. ಈಗಾಗಲೇ ಇಬ್ಬರ ವಿವಾಹದ ಆಮಂತ್ರಣ ಪತ್ರಿಕೆ ಲಭ್ಯವಾಗಿದೆ. ಕೊಡವ ಭಾಷೆಯಲ್ಲಿ ಮಂಗಳ ಪತ್ರ ಮುದ್ರಿಸಲಾಗಿರುವುದು ವಿಶೇಷವಾಗಿದೆ. ತಮ್ಮ ಜೀವನದ ಹೊಸ ಅಧ್ಯಾಯ ಆರಂಭ ಆಗುತ್ತಿರುವ ಹರ್ಷಿಕಾ ಮತ್ತು ಭುವನ್​ಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಇಬ್ಬರ ಮದುವೆಗೆ ಚಿತ್ರರಂಗದ ಗಣ್ಯರು, ಆಪ್ತರು ಭಾಗಿಯಾಗುವ ಸಾಧ್ಯತೆ ಇದೆ. ಈಗಾಗಲೇ ಆಮಂತ್ರಣ ಪತ್ರಿಕೆ ಕೊಡುವಲ್ಲಿ ಈ ಜೋಡಿ ನಿರತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹರ್ಷಿಕಾ ಮತ್ತು ಭುವನ್ ಜೋಡಿ ನೀಡಬೇಕಿದೆ.

ನಾನು ರೈತನನ್ನೇ ಮದ್ವೆ ಆಗ್ತೇನೆ: ಹರ್ಷಿಕಾ ಪೂಣಚ್ಚ

ಹರ್ಷಿಕಾ ಪೂಣಚ್ಚ ಸಿನಿಮಾ ಜೀವನ

ಹರ್ಷಿಕಾ ಪೂಣಚ್ಚ 2008ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. PUC ಸಿನಿಮಾ ಮೂಲಕ ಹರ್ಷಿಕಾ ಮಿಂಚಿದರು. ಬಳಿಕ ಕೊಡುವ ಸಿನಮಾಗಳಲ್ಲೂ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಭೋಜಪುರಿ ಮತ್ತು ತಮಿಳು ಸಿನಿಮಾಗಳಲ್ಲಿ ಹರ್ಷಿಕಾ ಮಿಂಚಿದ್ದಾರೆ. ಕೊನೆಯದಾಗಿ ಹರ್ಷಿಕಾ ಬೇರಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. 

'ಬೇರ' ನಿಜ ಅರ್ಥದ ಕರಾ‍ವಳಿ ಫೈಲ್ಸ್: ಹರ್ಷಿಕಾ ಪೂಣಚ್ಚ ಬಿಚ್ಚಿಟ್ಟ ಸತ್ಯಗಳು

ಭುವನ್ ಪೊನ್ನಣ್ಣ ಸಿನಿ ಪಯಣ

ಭುವನ್ ಪೊನ್ನಣ್ಣ ಸಿನಿಮಾ ಜೀವನದ ಬಗ್ಗೆ ಹೇಳುವುದಾದರೆ, ಜಸ್ಟ್ ಮಾತ್ ಮಾತಲ್ಲಿ ಸಿನಿಮಾ ಮೂಲಕ ಮೊದಲ ಬಾರಿಗೆ ತೆರೆಮೇಲೆ ಮಿಂಚಿದರು. 2010ರಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಕೂಲ್ ಸಖತ್ ಹಾಟ್ ಮಗ, ಕುಚಿಕು ಕುಚಿಕು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೊನೆಯದಾಗಿ ರಾಂದವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬಳಿಕ ಮತ್ತೆ ಭುವನ್ ತೆರೆಮೇಲೆ ಕಾಣಿಸಿಕೊಂಡಿಲ್ಲ. ಇದೀಗ ಹರ್ಷಿಕಾ ಜೊತೆ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ.