ನಾನು ರೈತನನ್ನೇ ಮದ್ವೆ ಆಗ್ತೇನೆ: ಹರ್ಷಿಕಾ ಪೂಣಚ್ಚ
ಕಾಸಿನ ಸರ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ಕೃಷಿಕನನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿದ ಹರ್ಷಿಕಾ ಪೂಣಚ್ಚ
ವಿಜಯ್ ರಾಘವೇಂದ್ರ ಮತ್ತು ಹರ್ಷಿಕಾ ಪೂಣಚ್ಚ ನಟನೆಯ ಕಾಸಿನ ಸರ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡು ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಮಾಡಿದೆ. ಹೀಗಾಗಿ ಚಿತ್ರತಂಡ ಸಕ್ಸಸ್ ಮೀಟ್ ಹಮ್ಮಿಕೊಂಡಿದ್ದರು.
‘ಈ ಸಿನಿಮಾದಲ್ಲಿ ಮಾಡಿದ ಮೇಲೆ ನಾನೂ ರೈತನನ್ನೇ ಮದ್ವೆ ಆಗ್ಬೇಕು ಅಂದುಕೊಂಡಿದ್ದೇನೆ’ ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದಾರೆ. ಜೊತೆಗೆ ‘ಕಾಫಿ ಪ್ಲಾಂಟರ್‌ನನ್ನೂ ರೈತ ಅಂತಲೇ ಹೇಳಬಹುದಲ್ವಾ?’ ಅಂತ ಪಕ್ಕದಲ್ಲಿದ್ದ ನಿರ್ದೇಶಕರನ್ನು ವಿಚಾರಿಸಿದ್ದಾರೆ.
‘ಈ ಸಿನಿಮಾದಲ್ಲಿ ಮಾಡಿದ ಮೇಲೆ ನಾನೂ ರೈತನನ್ನೇ ಮದ್ವೆ ಆಗ್ಬೇಕು ಅಂದುಕೊಂಡಿದ್ದೇನೆ’ ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದಾರೆ. ಜೊತೆಗೆ ‘ಕಾಫಿ ಪ್ಲಾಂಟರ್‌ನನ್ನೂ ರೈತ ಅಂತಲೇ ಹೇಳಬಹುದಲ್ವಾ?’ ಅಂತ ಪಕ್ಕದಲ್ಲಿದ್ದ ನಿರ್ದೇಶಕರನ್ನು ವಿಚಾರಿಸಿದ್ದಾರೆ.
ಸಿಟಿ ಹುಡುಗರನ್ನೇ ಬಯಸ್ತಾರೆ’ ಅಂದದ್ದನ್ನು ಕೇಳಿದ ಹರ್ಷಿಕಾ ತಮ್ಮ ಮಾತಿನ ವೇಳೆ ತಾನು ರೈತನನ್ನು ಮದುವೆ ಆಗೋ ನಿರ್ಧಾರವನ್ನು ಹೇಳಿದರು. ‘ಕಾಸಿನ ಸರ’ ಸಿನಿಮಾ ಮಾಡಿದ ಮೇಲೆ ಅವರು ಈ ನಿರ್ಧಾರಕ್ಕೆ ಬಂದಿದ್ದಾರಂತೆ.
‘ಈ ಸಿನಿಮಾದಲ್ಲಿ ನಾನು ಮಾಡಿರುವ ಸಂಪಿಗೆ ಪಾತ್ರದಷ್ಟುನಾನು ಒಳ್ಳೆಯವಳಲ್ಲ’ ಅನ್ನೋ ಮಾತನ್ನೂ ಅವರು ಹೇಳಿದರು. ನಿರ್ದೇಶಕ ಎನ್ ಆರ್ ನಂಜುಂಡೇಗೌಡ, ‘ಎರಡನೇ ವಾರವೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಈ ಸಿನಿಮಾವನ್ನು ಇನ್ನಷ್ಟುರೈತರಿಗೆ ತಲುಪಿಸುವ ಬಗ್ಗೆ ಸರ್ಕಾರದ ಜೊತೆ ಮಾತನಾಡುವೆ’ ಎಂದರು.
ಸಂಭಾಷಣೆ ಬರೆದ ಎಸ್ ಜಿ ಸಿದ್ಧರಾಮಯ್ಯ, ಹಿರಿಯ ನಿರ್ದೇಶಕ ಬಿ ರಾಮಮೂರ್ತಿ, ಚಿತ್ರ ಸಾಹಿತಿ ಜೆ ಎಂ ಪ್ರಹ್ಲಾದ್ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.
ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, ನನ್ನ ಕೆರಿಯರ್ ನ ವಿಶೇಷ ಚಿತ್ರ ಇದಾಗಿದೆ. ಇತ್ತೀಚಿನ ಚಿತ್ರಗಳಲ್ಲಿ ಸಂದೇಶ, ಮೌಲ್ಯಗಳು ಇಲ್ಲವಾಗಿದ್ದು, ಮನೋರಂಜನೆಯೇ ಮುಖ್ಯವಾಗಿದೆ. ನಮ್ಮ ಈ ಚಿತ್ರದಲ್ಲಿ ಮನೋರಂಜನೆ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವೂ ಇದೆ. ಸಾಂಪ್ರದಾಯಿಕ ಕೃಷಿಯ ಕುರಿತು ಬೆಳಕು ಚೆಲ್ಲಲಾಗಿದೆ ಎಂದರು.