ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ದಂಪತಿ ತಮ್ಮ ಮಗುವಿನೊಂದಿಗೆ ಪೆರೆಂಟಿಂಗ್ ಆನಂದಿಸುತ್ತಿದ್ದಾರೆ. ಮದರ್ಸ್ ಡೇ ಅಂಗವಾಗಿ ಹರಿಪ್ರಿಯಾ ಮಗುವಿಗೆ "ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ" ಹಾಡನ್ನು ಹಾಡಿ ತೊಟ್ಟಿಲಲ್ಲಿ ಮಲಗಿಸುವ ವಿಡಿಯೋ ಹಂಚಿಕೊಂಡಿದ್ದಾರೆ.  

ನಟಿ ಹರಿಪ್ರಿಯಾ (Haripriya) ಹಾಗೂ ವಸಿಷ್ಠ ಸಿಂಹ (Vasishtha Simha), ಪೆರೆಂಟಿಂಗ್ ಎಂಜಾಯ್ ಮಾಡ್ತಿದ್ದಾರೆ. ಮುದ್ದು ಮಗನಿಗೆ ಪಾಲಕರಾಗಿರುವ ಸೆಲೆಬ್ರಿಟಿ ಜೋಡಿ, ಮಗು ಜೊತೆಗಿರುವ ಅನೇಕ ವಿಡಿಯೋಗಳನ್ನು ಹಂಚಿಕೊಳ್ತಿರುತ್ತಾರೆ. ಮದರ್ಸ್ ಡೇ ಸಂದರ್ಭದಲ್ಲಿ ಹರಿಪ್ರಿಯಾ ಮುದ್ದಾದ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಎಲ್ಲ ಅಮ್ಮಂದಿರಂತೆ ಹರಿಪ್ರಿಯಾ ಮಗನಿಗೆ ಲಾಲಿ ಹಾಡು ಹೇಳ್ತಾ ಮಲಗಿಸುತ್ತಿರೋದನ್ನು ನೀವು ನೋಡ್ಬಹುದು. ಹರಿಪ್ರಿಯಾ ಹೇಳಿದ ಲಾಲಿ ಹಾಡು ಇಲ್ಲಿ ಎಲ್ಲರ ಗಮನ ಸೆಳೆದಿದೆ.

ಹರಿಪ್ರಿಯಾ ತಮ್ಮ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಅಮ್ಮ. ಹೆಣ್ಣು ಮಗುವಿನಿಂದ ತಾಯಿಯವರೆಗೆ, ಇದು ಮಹಿಳೆಯ ಜೀವನದ ಒಂದು ಪೂರ್ಣ ವೃತ್ತ. ಅಮ್ಮ - ಆ ಮಾತಿಗೆ ತಕ್ಕಂತೆ ಬದುಕಲು ನನಗೆ ತುಂಬಾ ಸಂತೋಷವಾಗುತ್ತದೆ. ನನ್ನ ಮೊದಲ ತಾಯಂದಿರ ದಿನ ಅಮೂಲ್ಯವಾದದ್ದು. ನನ್ನನ್ನು ತನ್ನ ತಾಯಿಯಾಗಿ ಆಯ್ಕೆ ಮಾಡಿದ್ದಕ್ಕಾಗಿ ನನ್ನ ಮಗು ಸಿಂಹನಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಮ್ಮ ಪ್ರತಿಯೊಂದು ಸುಂದರ ಕ್ಷಣಗಳನ್ನು ಸೆರೆಹಿಡಿದಿದ್ದಕ್ಕಾಗಿ ಧನ್ಯವಾದಗಳು ವಚ್ಚು. ಎಲ್ಲರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು ಎಂದು ಹರಿಪ್ರಿಯಾ ಶೀರ್ಷಿಕೆ ಹಾಕಿದ್ದಾರೆ. ಈ ವಿಡಿಯೋದಲ್ಲಿ ಹರಿಪ್ರಿಯಾ, ತೊಟ್ಟಿಲಲ್ಲಿ ಮಗುವನ್ನು ಮಲಗಿಸಿ ತೊಟ್ಟಿಲು ತೂಗ್ತಾ ಹಾಡು ಹಾಡ್ತಿದ್ದಾರೆ. 

ಮಗು ಮಲಗಿಸಲು ಈ ಹಾಡು ಹೇಳಿದ ಹರಿಪ್ರಿಯಾ : ತಮ್ಮ ಮಗುವನ್ನು ಮಲಗಿಸಲು ಹರಿಪ್ರಿಯಾ ರಾಮನ ಹಾಡನ್ನು ಹಾಡಿದ್ದಾರೆ. ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡನ್ನು ಹಾಡ್ತಾ, ಹರಿಪ್ರಿಯಾ ಮಗುವನ್ನು ಮಲಗಿಸುತ್ತಿದ್ದಾರೆ. ಹರಿಪ್ರಿಯಾ, ರಾಮನಾಮ ಹೇಳ್ತಿರೋದು ಫ್ಯಾನ್ಸ್ ಗೆ ಇಷ್ಟವಾಗಿದೆ. ಮೊಬೈಲ್ ನೀಡಿ ಮಗುವನ್ನು ಮಲಗಿಸುವ ಈ ಸಮಯದಲ್ಲಿ ನೀವು ಹಾಡು ಹೇಳ್ತಿದ್ದೀರಿ, ಅದ್ರಲ್ಲೂ ರಾಮನ ಹಾಡು. ನೋಡೋಕೆ ಖುಷಿಯಾಗುತ್ತೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲ ಮಹಿಳೆಯರು, ತಾವೂ ಮಕ್ಕಳನ್ನು ಮಲಗಿಸಲು ಇದೇ ಹಾಡನ್ನು ಹಾಡ್ತೇವೆ, ತಮ್ಮ ಮಕ್ಕಳಿಗೂ ಈ ಹಾಡು ಇಷ್ಟ ಎಂದು ಕಮೆಂಟ್ ಮಾಡಿದ್ದಾರೆ. 

ಜನವರಿ 26ರಂದು ಹರಿಪ್ರಿಯಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. 2023, ಜನವರಿ 26ರಂದು ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಮದುವೆಯಾಗಿದ್ದು, ಅವರ ಮದುವೆ ವಾರ್ಷಿಕೋತ್ಸವದ ದಿನದಂದೇ ಮಗು ಜನಿಸಿತ್ತು. ಹರಿಪ್ರಿಯಾ- ವಸಿಷ್ಠ ಸಿಂಹಗೆ ಮಗು ಜನಿಸಿ ಮೂರು ತಿಂಗಳಾಗಿದೆ. ಮೊದಲ ತಿಂಗಳು ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ, ಮಗುವನ್ನು ಮನೆಗೆ ವೆಲ್ ಕಂ ಮಾಡಿದ್ದ ವಿಡಿಯೋ ಹಂಚಿಕೊಂಡಿದ್ದರು. ನಂತ್ರ ಮೂರನೇ ತಿಂಗಳು ಅಂದ್ರೆ ಏಪ್ರಿಲ್ 26ರಂದು ಮತ್ತೊಂದು ಫೋಟೋ ಹಂಚಿಕೊಂಡಿದ್ದಾರೆ. ನಾವಿಬ್ಬರು ಮೂವರಾಗಿ ಇಂದಿಗೆ ಮೂರು ತಿಂಗಳು ಎಂದು ಪೋಸ್ಟ್ ಹಾಕಿದ್ದ ಜೋಡಿ ಬ್ಯಾಕ್ ಆಂಡ್ ವೈಟ್ ಫೋಟೋ ಹಂಚಿಕೊಂಡಿದ್ದರು. ಹೆರಿಗೆ ಸಂದರ್ಭದಲ್ಲಿ ಸಾಕಷ್ಟು ನೋವು ತಿಂದಿದ್ದ ಹರಿಪ್ರಿಯಾ ಈಗ ಅದೆಲ್ಲವನ್ನೂ ಮಗುವಿನ ನಗುವಿನಲ್ಲಿ ಮರೆತಿದ್ದಾರೆ, ತಾಯ್ತನವನ್ನು ಹರಿಪ್ರಿಯಾ ಎಂಜಾಯ್ ಮಾಡ್ತಿದ್ದಾರೆ.

ಮಗುವನ್ನು ಎತ್ತಿಕೊಂಡೇ ಮನೆ ಕೆಲ್ಸ ಮಾಡ್ತಿರುವ ವಿಡಿಯೋ ಒಂದನ್ನು ಹರಿಪ್ರಿಯಾ ಹಂಚಿಕೊಂಡಿದ್ದಾರೆ. ಸ್ವಲ್ಪ ದಿನ ಬ್ರೇಕ್ ಪಡೆದಿದ್ದ ಹರಿಪ್ರಿಯಾ ನಿಧಾನವಾಗಿ ಕೆಲಸಕ್ಕೆ ವಾಪಸ್ ಆಗ್ತಿದ್ದಾರೆ. ಸೋಶಿಯಲ್ ಮೀಡಿಯಾ ಜಾಹೀರಾತುಗಳಲ್ಲಿ ಆಗಾಗ ಕಾಣಿಸಿಕೊಳ್ತಿರುತ್ತಾರೆ. ಹಾಗೆಯೇ ಕಾರ್ಯಕ್ರಮ ಉದ್ಘಾಟನೆಗಳಲ್ಲಿ ಹರಿಪ್ರಿಯಾ ಭಾಗಿಯಾಗ್ತಿದ್ದಾರೆ. ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿರುವ ಜನಮಿತ್ರ ಮೂವೀಸ್ ನಿರ್ಮಾಣದ ತಾಯಿ ಕಸ್ತೂರ್ ಗಾಂಧಿ ಕನ್ನಡ ಚಿತ್ರ ಮಾರ್ಚ್ 28ರಂ
ದು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ನಟಿ ಹರಿಪ್ರಿಯಾ ಇದರಲ್ಲಿ ಕಸ್ತೂರ ಬಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

View post on Instagram