ಮುದ್ದಾದ ಸಾಕು ನಾಯಿಯನ್ನು ಕಳೆದುಕೊಂಡ ದುಖಃದಲ್ಲಿ ನಟಿ ಹರಿಪ್ರಿಯಾ. 

ಸ್ಯಾಂಡಲ್‌ವುಡ್‌ ಸುಂದರಿ, ನಟಿ ಹರಿಪ್ರಿಯಾಗೆ ಸಾಕು ನಾಯಿ ಲಕ್ಕಿ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಮನುಷ್ಯರು ಹೇಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೋ ನಾಯಿಗಳಿಗೂ ಅದೇ ಅದ್ಧೂರಿ ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಇದೀಗ ಆ ನಾಯಿ ಸಾವನ್ನಪ್ಪಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರಿಪ್ರಿಯಾ ಭಾವುಕರಾಗಿ ಬರೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹರಿಪ್ರಿಯಾ ಮಾತು: 

'ಲಕ್ಕಿ, ಅದ್ಭುತ ಆತ್ಮ, ನನ್ನ ಮೊದಲ ಬೇಬಿ, ನನ್ನ ಕುಟುಂಬ. ನಮ್ಮ ಜೀವನದಲ್ಲಿ ಒಂದು ಭಾಗವಾಗಿದ್ದ. 8.5 ವರ್ಷ ನಮ್ಮ ಜೊತೆ ಕಳೆದಿದ್ದಾನೆ. ಆತನೊಂದಿಗೆ ನನಗೆ ಸುರಕ್ಷಿತವಾಗಿದ್ದೇನೆಂಬ ಭಾವನೆ ಬರುತ್ತಿತ್ತು. ಒಟ್ಟಿಗೆ ಆಟ ಆಡುತ್ತಿದ್ದೆವು, ಪ್ರಯಾಣಿಸುತ್ತಿದ್ದೆವು ಹಾಗೂ ಪರಸ್ಪರ ಕಾಟ ಕೊಡುತ್ತಿದ್ದೆವು. ಮುಂದಿನ ಜನ್ಮದಲ್ಲಿ ನಾನು ನಿನಗೆ ಸಿಕ್ಕರೆ, ಗುರುತಿಸಿ ಮಾತನಾಡಿಸು. ನೀನು ಮತ್ತೆ ಹುಟ್ಟಿ ಬರುವೆ ಎಂದು ನನ್ನ ನಂಬಿಕೆ. ನಿನಗೆ ಗುಡ್‌ಬೈ ಹೇಳುವುದಕ್ಕೆ ನೋವಾಗುತ್ತದೆ. ಯಾರನ್ನು ನಿನ್ನಷ್ಟು ಮಿಸ್ ಮಾಡಿಕೊಳ್ಳುವುದಿಲ್ಲ.' ಎಂದು ಹರಿಪ್ರಿಯಾ ಬರೆದುಕೊಂಡಿದ್ದಾರೆ.

'ಹ್ಯಾಪಿ' ಆ್ಯಂಡ್‌ 'ಲಕ್ಕಿ' ಹುಟ್ಟುಹಬ್ಬ ಆಚರಿಸಿದ ನಟಿ ಹರಿ ಪ್ರಿಯಾ! 

ಲಕ್ಕಿ ಕುಟುಂಬಕ್ಕೆ ಆಗಮಿಸಿದ ದಿನದಿಂದಲೂ ಸಾಮಾಜಿಕ ಜಾಲತಾಣದಲ್ಲಿ ಹರಿಪ್ರಿಯಾ ಫೋಟೋ ಹಂಚಿಕೊಳ್ಳುತ್ತಿದ್ದಾರೆ.ಅದರಲ್ಲೂ ಈ ಲಾಕ್‌ಡೌನ್‌ ಅವಧಿಯಲ್ಲಿ ಲಕ್ಕಿಯೊಂದಿಗೆ ಹೆಚ್ಚಿನ ಸಮಯ ಕಳೆದಿದ್ದಾರೆ.

ಸತೀಶ್ ನೀನಾಸಂ ಜೊತೆ ಅಭಿನಯಿಸಿರುವ ಹರಿಪ್ರಿಯಾರವರ 'ಪೆಟ್ರೋಮ್ಯಾಕ್ಸ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಉಪೇಂದ್ರ ಜೊತೆ 'ಲಗಾಮ್' ಸಿನಿಮಾದಲ್ಲಿ, ರಿಷಬ್ ಶೆಟ್ಟಿ ಜೊತೆ 'ಬೆಲ್ ಬಾಟಂ 2' ಚಿತ್ರದಲ್ಲಿ ಹಾಗೂ ದಿಗಂತ್ ಜೊತೆ ಹೆಸರಿಡದ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ.

View post on Instagram