ಸ್ಯಾಂಡಲ್‌ವುಡ್ 'ನೀರ್ದೋಸೆ' ನಟಿ ಹರಿ ಪ್ರಿಯಾ ಸೋಷಿಯಲ್ ಮೀಡಿಯಾದಲ್ಲಿ ಹುಟ್ಟುಹಬ್ಬದ ಟೋಪಿ ಹಾಕ್ಕೊಂಡು, ಕೇಕ್ ಕಟ್ ಮಾಡಲು ರೆಡಿ ಇರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಹರಿಪ್ರಿಯಾ ಹುಟ್ಟುಹಬ್ಬ ಅಕ್ಟೋಬರ್ 29. ಈಗ ಯಾರ ಹುಟ್ಟು ಹಬ್ಬ ಆಚರಿಸಿದರು?

ಕನ್ನಡ ಚಿತ್ರರಂಗದ ಸುಂದರ ಚೆಲುವೆ ಹರಿಪ್ರಿಯಾ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಸಹಜವಾಗಿಯೇ ಈ ಬಗ್ಗೆ ಹತ್ತು ಹಲವು ಪ್ರಶ್ನೆಗಳು ಏಳುತ್ತವೆ. ಫೈನ್, ತಮ್ಮ ನೆಚ್ಚಿನ ಶ್ವಾನಗಳೂ ಜೊತೆಗೆ ಇರೋದ್ರಿಂದ, ನೋ ಡೌಟ್, ಇದು ಅವುಗಳ ಹ್ಯಾಪಿ ಬರ್ತ್‌ಡೇ.

'ಕನ್ನಡ್‌ ಗೊತ್ತಿಲ್ಲ' ಎನ್ನುವವರಿಗೆ ಮಾತ್ರ

ಲಕ್ಕಿ ಮತ್ತು ಹ್ಯಾಪಿ ಹರಿಪ್ರಿಯಾರ ನೆಚ್ಚಿನ ಪೆಟ್ಸ್. ಗೋಲ್ಡನ್ ರಿಟ್ರೀವರ್‌ ಮತ್ತು Shih Tzu ತಳಿಗಳನ್ನು ಇವರು ಪ್ರೀತಿ, ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದು, ಫ್ರೀ ಇದ್ದಾಗ ಅದರೊಟ್ಟಿಗೇ ಸಮಯ ಕಳೆಯುತ್ತಾರೆ. ಇದೀಗ ತಮ್ಮ ನೆಚ್ಚಿನ ಶ್ವಾನಗಳ ಮೊದಲ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಬರ್ತಡೇ ಟೋಪಿ ಹಾಕಿ ಎರಡು ವೆರೈಟಿ ಕೇಕ್‌ಗಳನ್ನಿಟ್ಟು ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ. ಈ ವೇಳೆ ಪೋಷಕರು ಮತ್ತು ಸ್ನೇಹಿತರು ಭಾಗಿಯಾಗಿದ್ದರು. ಕೈ ತುಂಬಾ ಸಿನಿಮಾಗಳಿದ್ದರೂ, ಕುಟುಂಬ ಹಾಗೂ ಸಾಕು ಸಾಯಿಗಳಿಗೆ ಟೈಂ ಕೊಡುವುದು ಹರಿಪ್ರಿಯಾ ಅವರ ಆದ್ಯತೆ. 



ಇತ್ತೀಚೆಗೆ ತೆರೆ ಕಂಡ 'ಕನ್ನಡ್ ಗೊತ್ತಿಲ್ಲ' ಸಿನಿಮಾದಲ್ಲಿ ಹರಿಪ್ರಿಯಾರದ್ದು ಒಂದು ಪ್ರಮುಖ ಪಾತ್ರ. ಒಂದು ಆತ್ಮಹತ್ಯೆಯಿಂದ ಶುರುವಾಗುವ ಕುತೂಹಲಕಾರಿ ಸಿನಿಮಾ, ಸೂಪರ್‌ ಹಿಟ್‌ ಆಗಿ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿದೆ. ಆ ನಂತರ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶಕನದಲ್ಲಿ ಮೂಡಿ ಬರುತ್ತಿರುವ 'ಅಮೃತಮತಿ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು.

ಈ ಹಿಂದೆ ಹರಿಪ್ರಿಯಾ ಫ್ಯಾಮಿಲಿ ಜೊತೆ ಜಾಲಿ ಮೂಡ್‌ನಲ್ಲಿ ಬಾಲಿಗೆ ತೆರಳಿದ್ದರು. ಅಲ್ಲಿ ವಿಭಿನ್ನವಾದ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅದರಲ್ಲಿ ತಾಯಿ ಪ್ರಿಯಾರನ್ನು ಹಿಡಿದುಕೊಂಡಿರುವುದು ಮತ್ತು ಅವರ ತಂದೆ ಹೆಸರಿನ ಮೊದಲ ಅಕ್ಷರಗಳ ಅಚ್ಚೆ ಹಾಕಿಸಿಕೊಂಡಿದ್ದಾರೆ.

View post on Instagram